ಕೆ.ಆರ್.ಪೇಟೆ: ರಾಷ್ಟ್ರದಲ್ಲಿಯೇ ಹೈನುಗಾರಿಕೆಯಲ್ಲಿ ರಾಜ್ಯ ದ್ವಿತೀಯ ಸ್ಥಾನದಲ್ಲಿದೆ. ರಾಜ್ಯದ ರೈತರು ಗುಣಮಟ್ಟದ ಹಾಲನ್ನು ಉತ್ಪಾದನೆ ಮಾಡುತ್ತಿರುವುದರಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಮನ್ಮುಲ್ ನಿರ್ದೇಶಕ ಡಾಲು ರವಿ ಹೇಳಿದರು.
ತಾಲ್ಲೂಕಿನ ಬೂಕನಕೆರೆ ಹೋಬಳಿಯ ಗಂಜಿಗೆರೆ ಹಾಗೂ ಬೂಕಹಳ್ಳಿಕೊಪ್ಪಲು ಹಾಲು ಉತ್ಪಾದಕರ ಸಹಕಾರ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಗುಣಮಟ್ಟದ ಹಾಲು ಉತ್ಪಾದನೆಗೆ ರೈತರು ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ರಾಸುಗಳಿಗೆ ಪೌಷ್ಠಿಕವಾದ ಆಹಾರ ನೀಡಬೇಕು. ಪ್ರತಿದಿನ 100 ಗ್ರಾಂ. ಖನಿಜ ಮಿಶ್ರಣವನ್ನು ರಾಸುಗಳಿಗೆ ನೀಡಿದರೆ ಗುಣ ಮಟ್ಟದ ಹಾಲು ದೊರೆಯುತ್ತದೆ ಹಾಗೂ ರಾಸುಗಳು ಆರೋಗ್ಯಕರವಾಗಿರುತ್ತವೆ. ಸಣ್ಣಪುಟ್ಟ ಸಮಸ್ಯೆಗಳು ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸುವ ಪರಿಪಾಠವನ್ನು ರೈತರು ಬೆಳೆಸಿಕೊಳ್ಳಬೇಕು. ರೈತರಿಗೆ ಅವಶ್ಯಕ ತರಬೇತಿ ನೀಡಲು ಒಕ್ಕೂಟ ಸಿದ್ಧವಿದೆ.ಹಸುಗಳ ಅರೋಗ್ಯ ದೃಷ್ಟಿಯಿಂದ ಶುದ್ಧ ಹಾಲು ಉತ್ಪಾದನೆಗೆ ಮ್ಯಾಟ್ ಬಳಸಬೇಕು. ಜೊತೆಗೆ ರೈತರು ಒಕ್ಕೂಟದಲ್ಲಿ ಸಿಗುವ ಪಶು ಆಹಾರವನ್ನೇ ರಾಸುಗಳಿಗೆ ನೀಡಬೇಕು. ಖನಿಜ ಮಿಶ್ರಣ, ಜಂತುಹುಳು ಔಷಧ, ವೆಡ್ಫನ್ ಜಾನುವಾರುಗಳಿಗೆ ಕಾಲ ಕಾಲಕ್ಕೆ ನೀಡಿ ನಿಗದಿತ ಸಮಯದಲ್ಲಿ ಪಶುಗಳ ಆರೋಗ್ಯ ತಪಾಸಣೆ ಮಾಡಿಸಿಕೊಂಡಾಗ ಮಾತ್ರ ಸಂಘಕ್ಕೆ ಉತ್ತಮ ಗುಣಮಟ್ಟದ ಶುದ್ಧ ಹಾಲು ನೀಡಿ ಹೆಚ್ಚಿನ ಲಾಭ ಪಡೆಯಬಹುದು ಎಂದು ಮನ್ಮುಲ್ ನಿರ್ದೇಶಕ ಡಾಲು ರವಿ ಹೇಳಿದರು.

ಬಳಿಕ ಮಾತನಾಡಿದ ಮನ್ಮುಲ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಎಂ.ಬಿ ಹರೀಶ್ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಬೆಲೆಯೂ ಸಿಗದೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇದರಿಂದ ಅನೇಕ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹೈನುಗಾರಿಕೆ ರೈತರಿಗೆ ಕೈಹಿಡಿದಿದೆ ಇದರಿಂದ ಹೈನುಗಾರಿಕೆ ಮಾಡುವ ರೈತರು ಕಾಲಕಾಲಕ್ಕೆ ವೈದ್ಯರ ಸಲಹೆ ಪಡೆದು ಸಂಘಕ್ಕೆ ಗುಣಮಟ್ಟದ ಹಾಲು ಸರಬರಾಜು ಮಾಡಿ ಹೆಚ್ಚನ ಆದಾಯಗಳಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಜಿ. ಪಿ ಮಂಜುನಾಥ್,ಉಪಾಧ್ಯಕ್ಷ ಪುಟ್ಟಮ್ಮಕಾಳೆಗೌಡ,ಗ್ರಾ. ಪಂ ಅಧ್ಯಕ್ಷ ಮುದುಗೆರೆ ಪರಮೇಶ್,ಮಾರ್ಗವಿಸ್ತರಣಾಧಿಕಾರಿ ರಘುವೇಂದ್ರ,ಸಂಘದ ನಿರ್ದೇಶಕರಾದ ಮಹೇಶ್, ಮಂಜು, ನಂಜುಂಡಪ್ಪ, ವಿಜೇಂದ್ರ, ಶೇಖರ್, ರೂಪ, ದೊಡ್ಡಸ್ವಾಮಿ,ಭೂಜೇಗೌಡ, ಸುಗುಣಯ್ಯ, ಜಿ.ಸಿ ರಾಕೇಶ್,ಬೂಕಹಳ್ಳಿ ಕೊಪ್ಪಲು ಸಂಘದ ಅಧ್ಯಕ್ಷೆ ರಾಜಮ್ಮ ಕಾಳೇಗೌಡ, ಉಪಾಧ್ಯಕ್ಷೆ ಪವಿತ್ರ ಯೊಗೇಂದ್ರ, ನಿರ್ದೇಶಕರಾದ ರೇಣುಕಾ, ಸಿದ್ದಮ್ಮ, ಕಾಮಾಕ್ಷಮ್ಮ, ಜವರಮ್ಮ, ಸವಿತ, ಮಂಜುಳಮ್ಮ, ರತ್ನಮ್ಮ, ಗಂಜೀಗೆರೆ ಸಂಘದ ಕಾರ್ಯದರ್ಶಿ ಜಿ.ಡಿ ಅರುಣ್ ಕುಮಾರ್, ಹಾಲು ಪರೀಕ್ಷ ಜಿ ಎಸ್ ಮಧು, ರುಕ್ಮಿಣಿ, ಮಂಜು,ಬೂಕಹಳ್ಳಿ ಕೊಪ್ಪಲು ಸಂಘದ ಕಾರ್ಯದರ್ಶಿ ಕವಿತ ಆನಂದ್, ಹಾಲು ಪರೀಕ್ಷಕಿ ಚಿಕಮ್ಮ, ವಸಂತ, ಸೇರಿದಂತೆ ಗ್ರಾಮಸ್ಥರು ಇದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
