ಕೆ.ಆರ್.ಪೇಟೆ: ಪಿತ್ರಾರ್ಜಿತವಾಗಿ ಬಂದಿರುವ ನಿವೇಶನಕ್ಕೆ ಕಾಂಪೌಂಡ್ ಹಾಕಿಕೊಂಡು ತೊಂದರೆ ನೀಡುತ್ತಾ, ಕೇಳಲು ಹೋದ ನಿವೇಶನದ ಹಕ್ಕುದಾರರ ಮೇಲೆ ಅದೇ ಗ್ರಾಮದ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿರುವ ಘಟನೆ ಕೆ.ಆರ್.ಪೇಟೆ ತಾಲ್ಲೂಕು ಹರಿಹರಪುರ ಗ್ರಾಮದಲ್ಲಿ ಬುಧವಾರ ನಡೆದಿದೆ.
ಹರಿಹರಪುರ ಗ್ರಾಮದ ಸುಲೋಚನವೆಂಕಟರಾಮೇಗೌಡರ ಮಗ ಮಂಜುನಾಥ್.ವಿ. ಗಾಯಗೊಂಡಿರುವ ವ್ಯಕ್ತಿಯಾಗಿದ್ದು.
ಅದೇ ಹರಿಹರಪುರ ಗ್ರಾಮದ ಜಯಕುಮಾರ್, ಅರುಣ್ ಕುಮಾರ್, ಯೋಗೇಶ್, ಲಲಿತ, ಸೋಮೇಗೌಡ, ದಿಲೀಪ್ ಕುಮಾರ್, ರತ್ನಮ್ಮ ಸೇರಿದಂತೆ ಹಲವು ಮಂದಿಯಿದ್ದ ಗುಂಪು ಗಾಯಾಳು ವಿ.ಮಂಜುನಾಥನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆರೋಪಿಗಳಾಗಿದ್ದು ಇವರೆಲ್ಲರ ವಿರುದ್ದ ಕೆ.ಆರ್.ಪೇಟೆ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಎಫ್.ಐ.ಆರ್.ದಾಖಲಾಗಿದೆ.

ಗಾಯಾಳು ವಿ.ಮಂಜುನಾಥ್ ಅವರ ತಾಯಿ ಸುಲೋಚನ ಎಂಬುವವರಿಗೆ ಅವರ ತಂದೆಯಿಂದ ಪಿತ್ರಾರ್ಜಿತವಾಗಿ ಬಂದಿರುವ ನಿವೇಶನ ಸಂಖ್ಯೆ 68ರಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದೇವೆ. ನಮ್ಮ ನಿವೇಶನವು ಪೂರ್ವ ಪಶ್ಚಿಮ-100ಅಡಿ, ಉತ್ತರ ದಕ್ಷಿಣ-140ಅಡಿ ಇರುತ್ತದೆ.

ಮನೆಯ ಸುತ್ತಲೂ ಇರುವ ನಿವೇಶನವನ್ನು ಸ್ವಚ್ಚ ಗೊಳಿಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ನಮ್ಮ ನಿವೇಶನಕ್ಕೆ ಅತಿಕ್ರಮ ಪ್ರವೇಶ ಮಾಡಿದ ಆರೋಪಿಗಳಾದ ಜಯಕುಮಾರ್, ಅರುಣ್ ಕುಮಾರ್, ಯೋಗೇಶ್, ಲಲಿತ, ಸೋಮೇಗೌಡ, ದೀಲೀಪ್ ಕುಮಾರ್, ರತ್ನಮ್ಮ, ಇತರರು ರೆಡಿಮೇಡ್ ಕಾಂಪೌಂಡ್ ನಿರ್ಮಿಸಿರುತ್ತಾರೆ. ಇದನ್ನು ಪ್ರಶ್ನೆ ಮಾಡಲು ಹೋದಾಗ ಅವರು ನನ್ನ ಮೇಲೆ ಗುದ್ದಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುತ್ತಾರೆ. ಅಲ್ಲದೆ ಗ್ರಾಮದ ಕೆಲವು ಪುಂಡ ಹುಡುಗರನ್ನು ಬಿಟ್ಟು ರೌಡಿಸಂ ಮಾಡಿಸಿ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ಎಲ್ಲಾ ದಾಖಲಾತಿಗಳು ಇದ್ದರೂ ಸಹ ನಮ್ಮ ನಿವೇಶನಕ್ಕೆ ಅತಿಕ್ರಮ ಪ್ರವೇಶ ಮಾಡುತ್ತಾ ತೊಂದರೆ ನೀಡುತ್ತಿರುವ ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕು ಹಾಗೂ ನಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ಕೊಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಯ ವರಲ್ಲಿ ಹಾಗೂ ತಾಲ್ಲೂಕು ಪಂಚಾಯತ್ ಇಒ ಅವರಲ್ಲಿ ನೊಂದ ವಿ.ಮಂಜುನಾಥ್ ಮನವಿ ಮಾಡಿಕೊಂಡಿದ್ದಾರೆ.
– ಶ್ರೀನಿವಾಸ್ ಆರ್.
