ಕೆ.ಆರ್.ಪೇಟೆ,ಸೆ.26: ತಾಲ್ಲೂಕಿನ ಆಲಂಬಾಡಿಕಾವಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ಪ್ರಥಮ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ದಿವಾಕರ್.ಕೆ.ಮಾಸ್ತೀಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯನ್ನು ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್ ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಅವರು ಅಕ್ಕಿಹೆಬ್ಬಾಳು ಹೋಬಳಿಯಲ್ಲಿಯೇ ಅತಿ ಹೆಚ್ಚು ಅಹಿಂದ ವರ್ಗದ ಜನಸಂಖ್ಯೆಯನ್ನು ಹೊಂದಿರುವ ಪ್ರಮುಖ ಗ್ರಾಮವಾಗಿದೆ. ಆದರೆ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಸಣ್ಣ ಕಾರಣಕ್ಕಾಗಿ ಇನ್ನೂ ಸಹ ಆರಂಭಿಸದೇ ಇರುವುದು ಸರಿಯಲ್ಲ. ಗ್ರಾಮದಲ್ಲಿ ಅಹಿಂದ ವರ್ಗದವರು ಹೆಚ್ಚು ವಾಸಿಸುತ್ತಿದ್ದಾರೆ. ಡೇರಿ ಆರಂಭವಾದರೆ ಹೈನುಗಾರಿಕೆ ಅಭಿವೃದ್ಧಿಯಾಗುತ್ತದೆ.
ಜನರ ಆರ್ಥಿಕ ಪ್ರಗತಿಯೂ ಆಗುತ್ತದೆ. ಆದರೆ ಸಂಘದ ಕಾರ್ಯದರ್ಶಿಯ ಆಯ್ಕೆಯ ವಿಚಾರದಲ್ಲಿ ಸಂಘವನ್ನೂ ಇನ್ನೂ ಸಹ ಅಧಿಕೃತವಾಗಿ ಉದ್ಘಾಟನೆ ಮಾಡದೇ ಇರುವುದು ಒಳ್ಳೆಯ ಬೆಳವಣಿಗೆಯಲ್ಲ. ಗ್ರಾಮದಲ್ಲಿರುವ ಜನಸಾಮಾನ್ಯರ ಹಿತದೃಷ್ಠಿಯಿಂದ ಮುಖಂಡರು ಒಮ್ಮತದ ತೀರ್ಮಾನ ಕೈಗೊಂಡು ಆದಷ್ಟು ಬೇಗ ಡೇರಿ ಆರಂಭಿಸಲು ಕ್ರಮ ವಹಿಸಬೇಕು. ಈ ಸಂಬಂಧ ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚೆಲುವರಾಯಸ್ವಾಮಿ ಅವರ ಸಮ್ಮುಖದಲ್ಲಿ ಮನ್ಮುಲ್ ನಿರ್ದೇಶಕರಾದ ಡಾಲು ರವಿ, ಎಂ.ಬಿ.ಹರೀಶ್, ಹಾಗೂ ಗ್ರಾಮದ ಸುಪುತ್ರ ಆರ್.ಟಿ.ಓ ಮಲ್ಲಿಕಾರ್ಜುನ್, ತಾ.ಪಂ.ಮಾಜಿ ಸದಸ್ಯ ಎ.ಎಂ.ಸಂಜೀವಪ್ಪ ಮತ್ತಿತರರ ಸಮಕ್ಷಮ ಸಭೆ ನಡೆಸಿ ಗ್ರಾಮದ ಡೇರಿಯನ್ನು ಶೀಘ್ರವೇ ಆರಂಭಿಸಲು ನಾನೇ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್ ಭರವಸೆ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ದಿವಾಕರ್.ಕೆ.ಮಾಸ್ತೀಗೌಡ ಮಾತನಾಡಿ ನಮ್ಮ ಆಲಂಬಾಡಿಕಾವಲು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಮೂಲಕ ಹಾಲು ಖರೀದಿಸಲು ಕೇಂದ್ರವನ್ನು ತೆರೆಯಲು ಅಧಿಕೃತವಾಗಿ ಆರಂಭಿಸಲು ಮನ್ಮುಲ್ ನಿರ್ದೇಶಕರು ಹಾಗೂ ಜಿಲ್ಲಾ ಮಂತ್ರಿಗಳಾದ ಚೆಲುವರಾಯಸ್ವಾಮಿ ಅವರು ಸಹಕಾರ ಸಹಕಾರ ನೀಡಬೇಕು ಈ ಮೂಲಕ ಗ್ರಾಮದ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಸಂಘದ ಪ್ರಭಾರ ಕಾರ್ಯದರ್ಶಿ ಬಿ.ಸುಮಂತ್ಕುಮಾರ್ ವಾರ್ಷಿಕ ವರದಿಯನ್ನು ಮಂಡಿಸಿದರು.
ಇದನ್ನು ಓದಿ: ಕೆ.ಆರ್.ಪೇಟೆ: ಟಿಎಪಿಸಿಎಂಎಸ್ ಮತದಾರರಿಂದ ಎಲ್ಲಾ ಕಡೆ ಉತ್ತಮ ಜನಸ್ಪಂದನೆ-ಶಾಸಕ ಹೆಚ್.ಟಿ.ಮಂಜು
ಆಲಂಬಾಡಿಕಾವಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಮೋಹನ್, ಆಲಂಬಾಡಿಕಾವಲು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ದಿವಾಕರ್.ಕೆ.ಮಾಸ್ತೀಗೌಡ, ಉಪಾಧ್ಯಕ್ಷ ಅಬ್ದುಲ್ಫಜ್ಲು, ನಿರ್ದೇಶಕರಾದ ಎಂ.ಮೋಹನ್, ಎ.ಎಂ.ಮಂಜುನಾಥ್, ಮಹಬೂಬ್ ಖಾನ್ ಪಠಾಣ್, ಚನ್ನಕೃಷ್ಣಯ್ಯ, ಜಗದೀಶ್, ಎಸ್.ಪ್ರಭಾಕರ್, ಭಾನುಮತಿ, ಎನ್.ಕೃಷ್ಣೇಗೌಡ, ಯಶೋಧಮ್ಮ, ಕೃಷ್ಣೇಗೌಡ, ಎ.ಎಸ್.ಸಂತೋಷ್ಕುಮಾರ್, ಮುಖಂಡರಾದ ಗ್ರಾ.ಪಂ.ಸದಸ್ಯರಾದ ರವಿ, ಮೂರ್ತಿ, ಚಂದ್ರಶೇಖರ್, ತಮ್ಮಯ್ಯಣ್ಣ, ವಿಜಯಣ್ಣ, ಸುರೇಶ್, ಡಾ.ಬಸವರಾಜು, ಚಂದ್ರನಾಯಕ್, ಕೃಷ್ಣಯ್ಯ, ವೆಂಕಟೇಶಯ್ಯ, ಸಿದ್ದರಾಜು, ಪ್ರಸನ್ನ, ಮೊಹಮದ್ ದಸ್ತು, ಮುಜಾಹಿದ್ ಹಾಗೂ ನೂರಾರು ಶೇರುದಾರರು ಸಭೆಯಲ್ಲಿ ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
