ಕೆ.ಆರ್.ಪೇಟೆ,: ತಾಲ್ಲೂಕಿನ ಅಣ್ಣೇಚಾಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯ ಶಿಕ್ಷಕರಾಗಿ ಹಲವು ವರ್ಷಗಳ ಅತ್ಯುತ್ತಮ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಹೆಚ್.ಜಿ.ಅನಂತು ಅವರನ್ನು ಅಣ್ಣೇಚಾಕನಹಳ್ಳಿ ಎಸ್.ಡಿ.ಎಂ.ಸಿ ವತಿಯಿಂದ ಸನ್ಮಾನಿಸಿ ಗೌರವಿಸುವ ಮೂಲಕ ಹೃದಯ ಸ್ಪರ್ಷಿ ಬೀಳ್ಕೊಡುಗೆ ನೀಡಲಾಯಿತು.
ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ಎ.ಎನ್.ಯೋಗೇಶ್ ಅವರು ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಮಾತನಾಡಿದ ಎ.ಎನ್.ಯೋಗೇಶ್ ನಮ್ಮ ಗ್ರಾಮದ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸುಮಾರು 3ವರ್ಷಗಳ ಕಾಲ ಅತ್ಯುತ್ತಮವಾಗಿ ಸೇವೆ ಸಲ್ಲಿಸುವ ಮೂಲಕ ಶಾಲೆಯ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿರುವ ಹೆಚ್.ಜಿ.ಅನಂತು ಮಾಸ್ಟರ್ ಅವರ ಸೇವಾವಧಿಯಲ್ಲಿ ಅವಧಿಯಲ್ಲಿ ನಮ್ಮ ಗ್ರಾಮದ ಮಕ್ಕಳ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಿದ್ದರು. ಸರ್ಕಾರಿ ನೌಕರರಿಗೆ ವರ್ಗಾವಣೆ ಎಂಬುದು ಅನಿವಾರ್ಯವಾಗಿರುತ್ತದೆ. ಅನಂತು ಮಾಸ್ಟರ್ ಅವರು ನಮ್ಮ ಶಾಲೆಗೆ ಮತ್ತೊಮ್ಮೆ ಬರುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಗ್ರಾಮಸ್ಥರು ಹಾಗೂ ಎಸ್.ಡಿ.ಎಂ.ಸಿ . ಸಮಿತಿಯ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮುಖ್ಯ ಶಿಕ್ಷಕ ಅನಂತು ನಾನು ಅಣ್ಣೇಚಾಕನಹಳ್ಳಿ ಗ್ರಾಮದಲ್ಲಿ ಕೇವಲ 3 ವರ್ಷ ಸೇವೆ ಸಲ್ಲಿಸಲು ಮಕ್ಕಳ ದಾಖಲಾತಿ ಹೆಚ್ಚಿಸಿ, ಕಲಿಕೆಯ ಗುಣಮಟ್ಟ ಹೆಚ್ಚಿಸಲು ಪೂರ್ಣ ಸಹಕಾರ ನೀಡಿದ ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಎಲ್ಲಾ ಪೋಷಕರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನನ್ನನ್ನು ತಮ್ಮ ಗ್ರಾಮದ ಮನೆ ಮಗನಂತೆ ಕಾಣುತ್ತಿದ್ದ ಗ್ರಾಮದ ಪ್ರತಿಯೊಬ್ಬರಿಗೂ ಆಭಾರಿಯಾಗಿರುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಚಂದ್ರಹಾಸೇಗೌಡ, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಹರೀಶ್, ಸದಸ್ಯರಾದ ಜಗದೀಶ್, ಶಂಕರ್, ಪ್ರಕಾಶ್, ಸತೀಶ್, ಅಂಗಡಿ ಯೋಗೇಶ್, ಆಶಾ, ಮಹಾದೇವಿ, ಸುನಿತಾ, ಹೇಮ, ಶೋಭ, ಪ್ರಭಾರಿ ಮುಖ್ಯ ಶಿಕ್ಷಕ ಪ್ರಕಾಶ್, ಶಿಕ್ಷಕ ಕುಮಾರ್, ರಾಜು, ಮಮತ, ಅಂಗನವಾಡಿ ಶಿಕ್ಷಕರಾದ ಸುಧಾಮಣಿ, ಸಾಕಮ್ಮ, ಅಕ್ಷರ ದಾಸೋಹ ಸಿಬ್ಬಂದಿ ಯಶೋದಮ್ಮ, ಚಂದ್ರಮ್ಮ ಸೇರಿದಂತೆ ಶಾಲಾ ಮಕ್ಕಳು ಹಾಗೂ ಪೋಷಕರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
