ಕೆ.ಆರ್.ಪೇಟೆ,ಜ.02: ರಾಜಧಾನಿ ಬೆಂಗಳೂರಿನಲ್ಲಿ ಹತ್ತಾರು ವರ್ಷಗಳಿಂದ ವಾಸಿಸುತ್ತಿರುವ ಕನ್ನಡಿಗರಿಗೆ ಮಾತ್ರ ರಾಜ್ಯ ಸರ್ಕಾರವು ಮೊದಲು ಮನೆಗಳನ್ನು ವಿತರಣೆ ಮಾಡಬೇಕು. ಹೊರ ರಾಜ್ಯದವರು ಉದ್ಯೋಗ ಹರಸಿ ಬೆಂಗಳೂರಿಗೆ ದುಡಿಮೆಗೆ ಬಂದಿರುತ್ತಾರೆ, ತಾತ್ಕಾಲಿಕವಾಗಿ ವಾಸವಿರುತ್ತಾರೆ. ನಂತರ ಮನೆಯನ್ನು ಮಾರಿ ಅವರ ಸ್ವಂತ ರಾಜ್ಯಕ್ಕೆ ಹೋಗುತ್ತಾರೆ. ಹಾಗಾಗಿ ಹೊರ ರಾಜ್ಯದವರಿಗೆ ಮನೆಗಳನ್ನು ನೀಡಬಾರದು. ಇದಕ್ಕೆ ಅವಕಾಶ ನೀಡದೇ ನಮ್ಮ ಕರ್ನಾಟಕ ರಾಜ್ಯದ ಮೂಲ ನಿವಾಸಿಗಳಿಗೆ ಮಾತ್ರ ಮನೆಗಳನ್ನು ವಿತರಣೆ ಮಾಡಬೇಕು ಎಂದು ಶಾಸಕ ಹೆಚ್.ಟಿ.ಮಂಜು ಅವರು ರಾಜ್ಯ ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.
ಅವರು ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮತ್ತೀಕೆರೆ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದ ವಿಶೇಷ ಅನುಧಾನದಲ್ಲಿ ಸುಮಾರು 85ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸಿಸಿ ಮತ್ತು ಡಾಂಬರು ರಸ್ತೆ ಹಾಗೂ ಬಾಕ್ಸ್ ಡ್ರೈನೇಜ್ ನಿರ್ಮಾಣ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಕರ್ನಾಟಕ ಸರ್ಕಾರದ ಮನೆಗೆ ಮಾರಿ ಪರರಿಗೆ ಉಪಕಾರಿ ನೀತಿಯನ್ನು ಖಂಡಿಸಿದರು.
ಬೆಂಗಳೂರಿನ ಯಲಹಂಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೋಗಿಲು ಎಂಬ ಜಾಗದಲ್ಲಿ ಘನತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣಾ ಘಟಕಕ್ಕೆ ಮೀಸಲಿರುವ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕೇರಳದಿಂದ ಬಂದಿರುವ ನೂರಾರು ಕುಟುಂಬಗಳು ಶೀಟ್ ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. ಇವರುಗಳು ಬಹತೇಕ ಎಲ್ಲಾ ಕುಟುಂಬಗಳು ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂಬ ಒಂದೇ ಕಾರಣಕ್ಕೆ ಅವರಿಗೆ ಹೊಸ ಮನೆಗಳನ್ನು ನೀಡಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇದು ಕನ್ನಡಿಗರು ಮತ್ತು ಹೊರ ರಾಜ್ಯದವರ ನಡುವೆ ಸಂಘರ್ಷಕ್ಕೆ ದಾರಿಯಾಗಬಹುದು ಹಾಗಾಗಿ ಕೂಡಲೇ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡಿದ್ದವರ ಮನೆಗಳನ್ನು ಒಡೆದು ಹಾಕಿರುವ ಬಿಬಿಎಂಪಿ ಕ್ರಮ ಸರಿಯಾಗಿದೆ. ಆದರೆ ಈಗಾಗಲೇ ಮೂಲತಹ ಬಡ ಕನ್ನಡಿಗರಿಗೆ ವಿತರಣೆ ಮಾಡಲು ಕಟ್ಟಿರುವ ಪ್ಲಾಟ್ಗಳನ್ನು ಕೇರಳ ಮೂಲದ ಮುಸ್ಲಿಂ ಕುಟುಂಬಗಳಿಗೆ ವಿತರಣೆ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ.

ಕರ್ನಾಟಕದಲ್ಲಿ ಯಾರಿಗೆ ಮನೆ ನೀಡಬೇಕು ಎಂಬದನ್ನು ನಿರ್ಧರಿಸಲು ಕೇರಳ ಸಿಎಂ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಯಾರು ಎಂದು ಶಾಸಕ ಹೆಚ್.ಟಿ.ಮಂಜು ಪ್ರಶ್ನಿಸಿದರು. ನಮ್ಮ ಕನ್ನಡಿಗರು ಮುಂಬೈ, ಗೋವಾ, ಚನ್ನೈ ಹೈದ್ರಾಬಾದ್ ನಲ್ಲಿ ಹತ್ತಾರು ವರ್ಷಗಳಿಂದ ವಾಸಿಸುತ್ತಿದ್ದಾರೆ ಆದರೆ ಅಲ್ಲಿನ ಸರ್ಕಾರಗಳು ಇದೂವರೆವಿಗೂ ಒಂದೇ ಒಂದು ಮನೆ ನೀಡಿದ ಉದಾಹರಣೆ ಇಲ್ಲ. ಆದರೆ ಕರ್ನಾಟಕ ಸರ್ಕಾರಕ್ಕೆ ಕೇರಳ ರಾಜ್ಯದವರಿಗೆ ಮನೆ ನೀಡುವ ಉಸಾಬರಿ ಏಕೆ ಎಂದು ಪ್ರಶ್ನಿಸಿದರು. ಕೂಡಲೇ ಕರ್ನಾಟಕ ಸರ್ಕಾರವು ತನ್ನ ನಿರ್ಧಾರದಿಂದ ಹಿಂದೆ ಸರಿದು ಹತ್ತಾರು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಎಲ್ಲ ಕನ್ನಡಿಗರಿಗೆ ಸ್ವಂತ ನಿವೇಶನ ಅಥವಾ ಮನೆಗಳನ್ನು ನೀಡಲು ಕ್ರಮ ವಹಿಸಬೇಕು. ಇಲ್ಲದಿದ್ದರೆ ರಾಜ್ಯದ ಜನತೆ ಕಾಂಗ್ರೇಸ್ ಪಕ್ಷವನ್ನು ಕರ್ನಾಟಕದಲ್ಲಿ ಶಾಶ್ವತವಾಗಿ ವಿರೋಧ ಪಕ್ಷದಲ್ಲಿ ಕೂರಿಸುತ್ತಾರೆ ಎಂದು ಹೆಚ್.ಟಿ.ಮಂಜು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕರ್ನಾಟಕ ಸರ್ಕಾರವು ಎಲ್ಲಾ 224ಶಾಸಕರನ್ನು ಒಂದೇ ಎಂದು ನೋಡುತ್ತಿಲ್ಲ. ಕಾಂಗ್ರೆಸ್ ಶಾಸಕರಿಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 50ಕೋಟಿ ಅನುಧಾನ ನೀಡಿದೆ. ಜೆಡಿಎಸ್ ಮತ್ತು ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ತಲಾ 25ಕೋಟಿ ನೀಡುತ್ತಿದೆ. ಕಳೆದ ವರ್ಷ ಕಾಂಗ್ರೆಸ್ ಶಾಸಕರಿಗೆ 25ಕೋಟಿ, ವಿರೋಧಿ ಶಾಸಕರಿಗೆ ಕೇವಲ 10ಕೋಟಿ ಅನುಧಾನ ನೀಡಿತ್ತು. ಈ ತಾರತಮ್ಯವನ್ನು ಕೂಡಲೇಚ ನಿಲ್ಲಿಸಿ ಎಲ್ಲಾ 224ಶಾಸಕರಿಗೂ ಒಂದೇ ರೀತಿಯ ಅನುಧಾನ ನೀಡಬೇಕು. ಜೊತೆಗೆ ಎಲ್ಲಾ ಕ್ಷೇತ್ರಗಳಿಗೆ ರಸ್ತೆ ಅಭಿವೃದ್ಧಿಗೆ ವಿಶೇಷ ಅನುಧಾನ ನೀಡಬೇಕು ಎಂದು ಶಾಸಕ ಹೆಚ್.ಟಿ.ಮಂಜು ಸಿಎಂ ಮತ್ತು ಡಿಸಿಎಂ ಅವರನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹೇಮಾವತಿ ಜಲಾಶಯ ಯೋಜನೆಯ ನಂ.3 ರ ಎಕ್ಸಿಕ್ಯೂಟೀವ್ ಇಂಜಿನಿಯರ್ ಜಯರಾಂ, ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ಹೆಳವೇಗೌಡ(ಹುಲ್ಲೇಗೌಡ), ಗ್ರಾಮ ಪಂಚಾಯಿತಿ ಅಧ್ಯಕ್ಷ ಮುದುಗೆರೆ ಪರಮೇಶ್, ಗಂಜಿಗೆರೆ ಪ್ರಾಥಮಿಕ ಕೃಷಿ ಪತ್ತಿನಸ ಸಹಕಾರ ಸಂಘದ ಅಧ್ಯಕ್ಷರು ಹಾಗೂ ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕುರುಬಹಳ್ಳಿ ಕೆ.ಬಿ.ನಾಗೇಶ್, ಗಂಜಿಗೆರೆ ಸೊಸೈಟಿ ಮಾಜಿ ಅಧ್ಯಕ್ಷ ರಾಮಕೃಷ್ಣೇಗೌಡ, ಬೂಕನಕೆರೆ ಹೋಬಳಿ ಜೆಡಿಎಸ್ ಅಧ್ಯಕ್ಷ ನಂದೀಶ್, ಗ್ರಾ.ಪಂ.ಮಾಜಿ ಅಧ್ಯಕ್ಷೆ ಚೇತನಾಬೋರೇಗೌಡ, ಗ್ರಾ.ಪಂ.ಸದಸ್ಯರಾದ ಎಂ.ಕೆ.ಮನು, ಚೇತನಾಬೋರೇಗೌಡ, ಮಾಜಿ ಸದಸ್ಯ ಮಂಜು, ವೈದ್ಯಾಧಿಕಾರಿ ಡಾ.ದೇವೇಂದ್ರಕುಮಾರ್, ಮುಖಂಡರಾದ ಬೋರೇಗೌಡ, ಎಂ.ಸಿ.ಚೇತನ್, ಎಂ.ಆರ್.ಜಗದೀಶ್, ಎಂ.ಆರ್.ಪ್ರಕಾಶ್, ಎಂ.ಕೆ.ಜಗನ್ನಾಥ್, ಸ್ವಾಮೀಗೌಡ, ಎಂ.ಎಲ್.ಶೇಖರ್, ಎಂ.ಎಸ್.ರಾಮಚಂದ್ರೇಗೌಡ, ಎಂ.ಎಸ್.ಲಕ್ಕೇಗೌಡ, ಬಾಲಚಂದ್ರು, ಎಂ.ಎಸ್.ಸಾಗರ್, ಇಟ್ಟಿಗೆ ಮಂಜುನಾಥ್, ಡೇರಿ ಅಧ್ಯಕ್ಷ ಎಂ.ಕೆ.ಸುರೇಶ್, ಎಸ್.ಡಿ.ಎಂ.ಸಿ ಅಧ್ಯಕ್ಷ ಸತೀಶ್, ಎಂ.ಆರ್.ಕುಮಾರ್, ಎಂ.ಕೆ.ನಾಗೇಗೌಡ, ಎಂ.ಎನ್.ಸುರೇಶ್, ಪ್ರಥಮ ದರ್ಜೆ ಗುತ್ತಿಗೆದಾರ ಬಿ.ಈ.ಮಂಜುನಾಥ್, ಶಾಸಕರ ಆಪ್ತ ಸಹಾಯಕ ಧ್ರುವ ಸೇರಿದಂತೆ ನೂರಾರು ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.

[…] ಇದನ್ನು ಓದು: ಕೆ.ಆರ್.ಪೇಟೆ : ರಾಜಧಾನಿ ಬೆಂಗಳೂರಿನಲ್ಲಿ ಕೇ… […]