ಕೆ.ಆರ್.ಪೇಟೆ: ಪಟ್ಟಣದ ತಾಲ್ಲೂಕು ಕಚೇರಿ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ವಾಸವಿದ್ದ ಶಿಕ್ಷಣ ಇಲಾಖೆಯ ನಿವೃತ್ತ ಶಾಲಾ ತನಿಖಾಧಿಕಾರಿ ದಿ.ಬಿ.ಸಿ.ಚನ್ನೇಗೌಡರ ಧರ್ಮಪತ್ನಿ ಜಯಮ್ಮ(74) ಅವರು ಹೇಮಾವತಿ ಬಡಾವಣೆಯಲ್ಲಿರುವ ಪುತ್ರನ ನಿವಾಸದಲ್ಲಿ ಮಂಗಳವಾರ ಸಂಜೆ ನಿಧನ ಹೊಂದಿದ್ದಾರೆ.
ಮೃತರು ಪ್ರಗತಿಪರ ರೈತ ಬಿ.ಸಿ.ಪುರುಷೋತ್ತಮ್ ಸೇರಿದಂತೆ ಇಬ್ಬರು ಪುತ್ರರು, ನ್ಯಾಯಾಂಗ ಇಲಾಖೆಯ ನಿವೃತ್ತ ಅಧಿಕಾರಿ ಬಿ.ಸಿ.ಪ್ರೇಮನಾಗರಾಜು ಸೇರಿದಂತೆ ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಅ.08ರಂದು ಬೆಳಿಗ್ಗೆ 11ಗಂಟೆಗೆ ಗುಡ್ಡೇನಹಳ್ಳಿ ಗ್ರಾಮಸ ಬಳಿ ಇರುವ ಮೃತರ ತೋಟದಲ್ಲಿ ನಡೆಯಲಿದೆ.
ಮೃತರ ನಿಧನಕ್ಕೆ ತಾಲ್ಲೂಕಿನ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ.

[…] ಇದನ್ನು ಓದಿ: ಕೆ.ಆರ್.ಪೇಟೆ: ಶಿಕ್ಷಣ ಇಲಾಖೆಯ ನಿವೃತ್ತ ಶಾಲ… […]