ಕೆ.ಆರ್.ಪೇಟೆ: ತಾಲೂಕು ಎಂದರೆ ರಾಜಕೀಯ ವಿದ್ಯಮಾನಗಳಲ್ಲಿ ಜೆಡಿಎಸ್ ಭದ್ರಕೋಟೆ ಎಂದೆ ಬಿಂಬಿತವಾಗಿದೆ. ಇಂತಹ ಸಂದರ್ಭದಲ್ಲಿ ಶಾಸಕ ಹೆಚ್.ಟಿ ಮಂಜು ರವರ ಕಳೆದ ವಿಧಾನಸಭಾ ಸಾವಂತ್ರಿಕ ಚುನಾವಣೆ ಸಂದರ್ಭದಲ್ಲಿ ಶಾಸಕ ಹೆಚ್.ಟಿ ಮಂಜು ಅವರಿಗೆ ಸ್ಥಳೀಯ ಮಟ್ಟದಲ್ಲಿ ಬಲವಾಗಿದ್ದ ಪಕ್ಷದ ನಾಯಕ ಎಂದರೆ ಅದು ಜೆಡಿಎಸ್ ತಾಲ್ಲೂಕು ಅಧ್ಯಕ್ಷರಾದ ಎ.ಎನ್ ಜಾನಕಿರಾಮ್ ಎಂಬುದು ತಾಲೂಕಿನ ಪ್ರತಿಯೊಬ್ಬ ರಾಜಕಾರಣಿಗೂ ತಿಳಿದಿರುವ ವಿಚಾರ ಆದರೆ ಕಳೆದ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಚುನಾವಣೆಯ ನಂತರ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಗಿದೆ.
ಜೆಡಿಎಸ್ ನ ಒಳ-ಹೊರ ತಿಕ್ಕಾಟಗಳು ದಿನದಿಂದ ದಿನಕ್ಕೆ ಹೆಮ್ಮರವಾಗುತ್ತಿದೆ ಇದಕ್ಕೆ ಉದಾಹರಣೆ ಹಲವು ವರ್ಷಗಳಿಂದ ಜೆಡಿಎಸ್ ಸಭೆಗಳ ಕ್ರಿಯಾಶೀಲವಾಗಿ ಏರ್ಪಡಿಸಿ ಭಾಗವಹಿಸುತ್ತಿದ್ದ ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾದ ಎ.ಎನ್ ಜಾನಕಿರಾಮ್ ಕಳೆದ ತಿಂಗಳಿಂದ ಜೆಡಿಎಸ್ ಪಕ್ಷದ ಪ್ರಮುಖ ಸಭೆಗಳ ಆಯೋಜಿಸಬೇಕಿದ್ದ, ಅವರೇ ದೂರ ಉಳಿದು ಹಲವು ಹನುಮಾನಗಳು ಎಡೆ ಮಾಡಿ ಕೊಟ್ಟಿದ್ದು ಅದಕ್ಕೆ ಪೂರಕವಾಗಿ ಗುರುವಾರ ಜೆಡಿಎಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರ ಬದಲಾವಣೆ ಮಾತುಗಳನ್ನು ಕೆಲ ಕಾರ್ಯಕರ್ತರು, ಮುಖಂಡರು, ಧ್ವನಿಗೂಡಿಸಿದ್ದಾರೆ.
ಆದರೆ ಬರಿ ಮಾತಿನಿಂದ ಅಧ್ಯಕ್ಷರ ಬದಲಾವಣೆ ಮಾಡಲು ಅಸಾಧ್ಯ. ಏಕೆಂದರೆ ಜಾನಕಿರಾಮ್ ರವರು ಕ್ರಿಯಾಶೀಲ ವ್ಯಕ್ತಿ ಪಕ್ಷದ ನಾಯಕರ ನಿರಂತರ ಸಂಪರ್ಕದಲ್ಲಿರುವ ಅಧ್ಯಕ್ಷ ಎಂಬುವ ಮಾತುಗಳು ದಟ್ಟವಾಗಿ ಕೇಳಿ ಬರುತ್ತವೆ…. ಅದನ್ನು ಮೀರಿ ಬದಲಾವಣೆ ಪರ್ವ ಆಗಲೇ ಬೇಕೆಂಬ ದೊಡ್ಡ ಧ್ವನಿ ಗಟ್ಟಿಯಾದರೆ ಆ ದಿನದಿಂದಲೇ ಬಂಡಾಯದ ಬೆಂಕಿ ಚೆಂಡು ಜೆಡಿಎಸ್ ನ ಸುತ್ತುವರೆಯಬಹುದು ಎಂಬುವುದು ರಾಜಕೀಯ ವಿಶ್ಲೇಷಕರಲ್ಲಿ ಕೇಳಬರುತ್ತಿದೆ ಇದರ ನಡುವೆಯೂ ಕೂಡ….
ತೆನೆ.. ಸಂಘಟಿಸುವ ಅದೃಷ್ಟಶಾಲಿ…
ಜೆಡಿಎಸ್ ಅಧ್ಯಕ್ಷರಾದ ಜಾನಕಿರಾಮ್ ರವರ ಸ್ಥಾನಕ್ಕೆ ಬದಲಾವಣೆ ಆದರೆ ಮಾತ್ರ ಕೆ.ಆರ್.ಪೇಟೆ ತಾಲೂಕು ಅಧ್ಯಕ್ಷರ ಸ್ಥಾನಕ್ಕೆ ಜೆಡಿಎಸ್ ವರಿಷ್ಠರರು ಪರಿಗಣಿಸುವ ಮುಖಂಡ ಸಾಲಿನಲ್ಲಿ ಶಾಸಕರ ಆಪ್ತ ತಾ.ಪಂ ಮಲ್ಲೇನಹಳ್ಳಿ ಮೋಹನ್,ಇದ್ದರೆ… ಇತ್ತ ಜೆಡಿಎಸ್ ಪಕ್ಷದ ವರಿಷ್ಠರ ಹಿತೈಷಿಗಳು ಹಾಗೂ ಮಹಾಮಾರಿ ಕೊರೋನಾದ ಸಂದರ್ಭದಲ್ಲಿ ಕಿಕ್ಕೇರಿ ಹೋಬಳಿಯಾದ್ಯಂತ ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಹೆಸರಿನಲ್ಲಿ ತನ್ನ ಸ್ವಂತ ಹಣದಿಂದ ಜನರಿಗೆ ಸಹಾಯ ಹಸ್ತ ಚಾಚಿ ಸಮಾಜ ಸೇವಕರಾಗಿ ಹೊರಹೊಮ್ಮಿ ಕಿಕ್ಕೇರಿ ಹೋಬಳಿಯ ಜೆಡಿಎಸ್ ಮುಖಂಡರ ಸಹಕಾರದಿಂದ ಜೆಡಿಎಸ್ ಪಕ್ಷ ಸಂಘಟಿಸಿ ಯುವ ನಾಯಕರಾಗಿರುವ ಬಿ.ಎಂ ಕಿರಣ್ ಅವರನ್ನು ಜೆಡಿಎಸ್ ಹೈಕಮಾಂಡ್ ಯುವ ಉತ್ಸಾಹಿ ಶಾಸಕ ಹೆಚ್.ಟಿ ಮಂಜು ಅವರ ಜೊತೆಯಲ್ಲಿ ಕ್ರಿಯಾಶೀಲವಾಗಿ ಪಕ್ಷ ಮತ್ತಷ್ಟು ಸಂಘಟಿಸುವ ನಾಯಕ ಬಿ.ಎಂ ಕಿರಣ್ ಎಂದು ಜೆಡಿಎಸ್ ಪಕ್ಷದ ವರಿಷ್ಠರೇ ಗುರುತಿಸಿ ಜವಾಬ್ದಾರಿ ನೀಡುತ್ತಾರೆ ಎಂದು ಜೆಡಿಎಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿ ಜೆಡಿಎಸ್ ನೂತನ ತಾಲ್ಲೂಕು ಅಧ್ಯಕ್ಷ ಬಿ.ಎಂ ಕಿರಣ್ ಎಂದು ಆಸೆ ವ್ಯಕ್ತಪಡಿಸುತ್ತಿದ್ದಾರೆ .
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
