ಕೆ.ಆರ್.ಪೇಟೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಮಾದಾರ ಮಹಾಸಭಾ ಮಂಡ್ಯ ಜಿಲ್ಲಾ ಘಟಕ ಹಾಗೂ ಕೆ.ಆರ್.ಪೇಟೆ ತಾಲ್ಲೂಕು ಘಟಕದ ಪದಾಧಿಕಾರಿಗಳ ಸಭೆಯು ಮಹಾಸಭಾ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಎನ್.ಆರ್.ಚಂದ್ರಶೇಖರ್ ಹಾಗೂ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ.ಕಾವಲು ಕಾಂತರಾಜು, ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಟಿ.ಉಮೇಶ್ ನೇತೃತ್ವದಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಮಾದಾರ ಮಹಾಸಭಾ ರಾಜ್ಯ ಸಮಿತಿ ಸದಸ್ಯ ಎನ್.ಆರ್.ಚಂದ್ರಶೇಖರ್ ಮಾತನಾಡಿ ಕರ್ನಾಟಕ ರಾಜ್ಯ ಮಾದಾರ ಮಹಾಸಭಾ ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ನಂ.1 ಸ್ಥಾನದಲ್ಲಿರುವ ಮಾದಿಗ ಸಮುದಾಯದ ಹಿತರಕ್ಷಣೆಗಾಗಿ ನೊಂದಾಯಿಸಿ ಅಸ್ತಿತ್ವಕ್ಕೆ ತರಲಾಗಿದೆ. ರಾಜ್ಯ ಸಮಿತಿಯಲ್ಲಿ ಕರ್ನಾಟಕ ಮಾದಾರ ಮಹಾಸಭಾ ರಾಜ್ಯಾಧ್ಯಕ್ಷರಾಗಿ ಸಚಿವ ಕೆ.ಹೆಚ್.ಮುನಿಯಪ್ಪ, ಉಪಾಧ್ಯಕ್ಷರಾಗಿ ಗೋವಿಂದಕಾರಜೋಳ, ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾಗಿ ಮಾಜಿ ಹೆಚ್.ಆಂಜನೇಯ, ಆರ್.ಬಿ.ತಿಮ್ಮಾಪೂರ, ಸಂಘಟನಾ ಕಾರ್ಯದರ್ಶಿಗಳಾಗಿ ತಿಮ್ಮರಾಯಪ್ಪ, ಆಲ್ಕೋಡ್ ಹನುಮಂತಪ್ಪ ಸೇರಿದಂತೆ ಎಲ್ಲ ಪಕ್ಷಗಳ ಮಾಜಿ ಶಾಸಕರು, ಹಾಲಿ ಶಾಸಕರು ಮಹಾಸಭಾ ಪದಾಧಿಕಾರಿಗಳಾಗಿದ್ದಾರೆ.

ಮಾದಾರ ಮಹಾಸಭಾವು ಯಾವುದೇ ಒಂದು ಪಕ್ಷದ ಮುಖವಾಣಿಯಾಗಿರುವುದಿಲ್ಲ ಎಲ್ಲಾ ಪಕ್ಷಗಳ ಮುಖಂಡರು ಈ ಮಹಾಸಭಾದಲ್ಲಿ ಇದ್ದಾರೆ. ಹಾಗಾಗಿ ಸದಸ್ಯತ್ವಕ್ಕೆ ಸಾಮಾನ್ಯ ಸದಸ್ಯತ್ವ 500ರೂ ಇದ್ದು ಪ್ರತಿಯೊಬ್ಬರೂ ಕಡ್ಡಾಯವಾಗಿ ಸದಸ್ಯತ್ವ ಪಡೆದುಕೊಂಡು ತಮ್ಮ ಅಭಿವೃದ್ಧಿಯ ಜೊತೆಗೆ ಸಮುದಾಯದ ಅಭಿವೃದ್ಧಿಗೆ ಸಹಕಾರ ನೀಡಬೇಕು. ಪ್ರತಿ ತಾಲ್ಲೂಕಿನಿಂದ ಕನಿಷ್ಠ ಎರಡು ಸಾವಿರ ಸದಸ್ಯತ್ವ ಗುರಿ ಹೊಂದಲಾಗಿದೆ.

ಸಭೆಯಲ್ಲಿ ಮಾದಾರ ಮಹಾಸಭಾ ಮಂಡ್ಯ ಜಿಲ್ಲಾಧ್ಯಕ್ಷರಾದ. ಬಿ.ಬಿ.ಕಾವಲು ಕಾಂತರಾಜು, ತಾಲ್ಲೂಕು ಅಧ್ಯಕ್ಷರಾದ ಆರ್. ಟಿ.ಉಮೇಶ್ ಮತ್ತು ಪದಾಧಿಕಾರಿಗಳು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಸದಸ್ಯತ್ವ ಮಾಡಿಸಿ ಸಮುದಾಯದ ಏಳಿಗೆಗೆ ಮುಂದಾಗಿರುವ ಮಾದಾರ ಮಹಾಸಭಾ ಮಹಾಸಭಾ ವನ್ನು ಗಟ್ಟಿಗೊಳಿಸಬೇಕು. ಈ ಮೂಲಕ ಮಾದಿಗ ಸಮುದಾಯದ ಶೈಕ್ಷಣಿಕ, ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಅಭಿವೃದ್ದಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಎನ್.ಆರ್.ಚಂದ್ರಶೇಖರ್ ಸಲಹೆ ನೀಡಿದರು. ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಾಮನಹಳ್ಳಿಮಂಜು, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಆರ್.ಕೆ.ಕುಮಾರ್, ಪುರಸಭಾ ಸದಸ್ಯ ಹೆಚ್.ಎಮ್.ಪುಟ್ಟರಾಜು, ನಿವೃತ್ತ ಮುಖ್ಯ ಶಿಕ್ಷಕ ಹೊಸಹೊಳಲು ಮಾಸ್ಟರ್ ಶಿವಣ್ಣ, ತಾಲ್ಲೂಕು ಮಹಾಸಭಾ ಪ್ರಧಾನ ಕಾರ್ಯದರ್ಶಿ ಆರ್.ಕೆ.ಧನಂಜಯ, ಉಪಾಧ್ಯಕ್ಷರಾದ ವಕೀಲ ಎನ್.ಆರ್. ಪ್ರಸನ್ನ ಕುಮಾರ್, ಖಜಾಂಚಿ ಹೆಚ್.ಆರ್.ಪುಟ್ಟರಾಜು, ಪದಾಧಿಕಾರಿಗಳಾದ ತೇಗನಹಳ್ಳಿ ಸುರೇಶ್, ಸೊಸೈಟಿ ಹರೀಶ್, ಜೊತ್ತನಪುರ ಧರ್ಮ, ಬಿ.ಬಿ.ಕಾವಲು ವೀಣಾನಂಜುಂಡಯ್ಯ, ಹರಿಹರಪುರ ರಮೇಶ್, ನಾರ್ಗೋನಹಳ್ಳಿ ಸುಧಾಕರ್, ಗಂಗೇನಹಳ್ಳಿ ಕೃಷ್ಣಯ್ಯ, ಯಡಹಳ್ಳಿ ಶ್ರೀಧರ್, ಮೂಡನಹಳ್ಳಿ ಮಹಾದೇವ್, ಜಿಲ್ಲಾ ಬಾಬು ಜಗಜೀವರಾಂ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ರಾಯಸಮುದ್ರ ಗೋಪಿನಾಥ್, ನಂಜಪ್ಪ, ಗೋವಿಂದು, ಮಂಜು, ಹೊನ್ನಪ್ಪ, ಶಿಕ್ಷಕ ಹೆಚ್.ಬಿ.ಬಸವರಾಜು, ಶಿವಕುಮಾರ್, ಮಲ್ಮೋನಹಳ್ಳಿ ಗಂಗಾಧರ್, ಚಟ್ಟಂಗೆರೆ ನಿಂಗರಾಜು ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳ ಹಲವು ಮುಖಂಡರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
