ಕೆ.ಆರ್.ಪೇಟೆ ತಾಲ್ಲೂಕಿನ ಕಸಬಾ ಹೋಬಳಿಯ ಮಾಕವಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಲಲಿತಮ್ಮ ಲೇಟ್ ಎಂ.ಸಿ ಸಣ್ಣಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಹಿಂದಿನ ಅಧ್ಯಕ್ಷೆ ಲಿಂಗಾಪುರ ಸಾಕಮ್ಮ ಲೇಟ್ ಸಿದ್ದರಾಜು ಅವರಿಂದ ರಾಜೀನಾಮೆಯಿಂದ ತೆರವಾದ ಅಧ್ಯಕ್ಷಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಮಾಕವಳ್ಳಿ ಲಲಿತಮ್ಮ ಲೇಟ್ ಎಂ.ಸಿ ಸಣ್ಣಯ್ಯ ಅವರು ಹೊರತಪಡಿಸಿ ಉಳಿದ ಸದಸ್ಯರುಗಳಿಂದ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಮಾಕವಳ್ಳಿ ಲಲಿತಮ್ಮ ಲೇಟ್ ಎಂ.ಸಿ ಸಣ್ಣಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಾಲೂಕು ಕ್ಷೇತ್ರ ಶಿಕ್ಷಣಾಧಿಕೇರಿ ವೈ.ಕೆ ತಿಮ್ಮೇಗೌಡ ಘೋಷಿಸಿದರು.ಸಹ ಚುನಾವಣಾ ಅಧಿಕಾರಿಯಾಗಿ ಪಿಡಿಓ ಶೈಲಜಾ ಕಾರ್ಯ ನಿರ್ವಹಿಸಿದರು.
ನೂತನ ಅಧ್ಯಕ್ಷೆ ಲಲಿತಮ್ಮ ಲೇಟ್ ಎಂ.ಸಿ ಸಣ್ಣಯ್ಯ ನನ್ನ ಅವಿರೋಧ ಆಯ್ಕೆಗೆ ಗ್ರಾ.ಪಂ ಪ್ರತಿಯೊಬ್ಬರೂ ಸದ್ಯಸರು ಸಹಮತ ನೀಡಿದ್ದಾರೆ ಅದಕ್ಕೆ ಋಣಿಯಾಗಿ ನನ್ನ ಆಡಳಿತ ಅವಧಿಯಲ್ಲಿ ಪಕ್ಷಭೇದ ಮರೆತು ಸರ್ವ ಸದಸ್ಯರು ಜೊತೆಗೂಡಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಪ್ರತಿ ಗ್ರಾಮಗಳಲ್ಲಿ ರಸ್ತೆ, ಚರಂಡಿ, ವಿದ್ಯುತ್ ದೀಪಗಳು, ಕುಡಿಯುವ ನೀರು, ಜಾನುವಾರು ನೀರು ಕುಡಿಯುವ ತೊಟ್ಟಿ, ಜಾನುವಾರು ಕೊಟ್ಟಿಗೆ ಹಾಗೂ ಕೆರೆ-ಕಟ್ಟೆ ಅಭಿವೃದ್ಧಿ ಇದರ ಜೊತೆಗೆ ಸರ್ಕಾರ ಇಲಾಖೆಯಿಂದ ಬರುವ ಸವಲತ್ತುಗಳನ್ನು ಸದುಪಯೋಗ ಮಾಡಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡುತ್ತಾ ಪಂಚಾಯಿತಿಯ ವ್ಯಾಪ್ತಿಯಲ್ಲಿ ಗ್ರಾಮಗಳ ಅಭಿವೃದ್ಧಿ ಶ್ರಮ ವಹಿಸುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಭರವಸೆ ನೀಡಿದರು.

ಬಳಿಕ ಮಾತನಾಡಿದ ಕಾಂಗ್ರೆಸ್ ಮುಖಂಡ ಎಂ.ಆರ್ ಮಂಜೇಗೌಡ ನೂತನ ಅಧ್ಯಕ್ಷರಾಗಿರುವ ಲಲಿತಮ್ಮ ಲೇಟ್ ಎಂ.ಸಿ ಸಣ್ಣಯ್ಯ ಅವರನ್ನ ಸರ್ವ ಸದಸ್ಯರು ಕೂಡ ಪಕ್ಷ ಭೇದ ಮರೆತು ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ್ದಾರೆ ಅದಕ್ಕೆ ಋಣಿಯಾಗಿ ನೂತನ ಅಧ್ಯಕ್ಷರು ಗ್ರಾ.ಪಂ ಸದಸ್ಯರ ವಿಶ್ವಾಸಕ್ಕೆ ತೆಗೆದುಕೊಂಡು ಪಂಚಾಯತಿಗೆ ಬರುವ ಪ್ರತಿಯೊಂದು ಗ್ರಾಮಗಳನ್ನು ಅಭಿವೃದ್ಧಿಪಡಿಸಬೇಕು. ಪಂಚಾಯತಿಯನ್ನು ತಾಲೂಕಿನಲ್ಲಿ ಮಾದರಿಯನ್ನಾಗಿ ಮಾಡಲು ಶ್ರಮವಹಿಸಬೇಕು ಸಲಹೆ ನೀಡಿದರು.
ನೂತನ ಅಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆಯೇ ಬೆಂಬಲಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಎ.ಎನ್ ಸುಜಾತ ಮಂಜುನಾಥ್, ಸದಸ್ಯರುಗಳಾದ ಎಂ.ಆರ್ ಮಂಜುನಾಥ್,ಎಂ.ಟಿ ಮಂಜೇಗೌಡ, ವರಲಕ್ಷ್ಮಿ ಪ್ರದೀಪ್, ಲಿಂಗಾಪುರ ಸಾಕಮ್ಮ ಲೇಟ್ ಸಿದ್ದರಾಜು, ಜ್ಯೋತಿ ಸ್ವಾಮಿ, ಹೆಗ್ಗಡಹಳ್ಳಿ ವೀಣಾ ಅಶೋಕ್, ಕುಂದನಹಳ್ಳಿ ಬೈರಯ್ಯ, ಸಾಧುಗೋನಹಳ್ಳಿ ಆರ್. ಕುಮಾರ್,ವಡ್ಡರಹಳ್ಳಿ ವಿ.ಡಿ ಮಂಜುನಾಥ, ಶೀಲಾ ಬಿ.ಎನ್ ಮಹದೇವೆಗೌಡ, ಮಲ್ಲೇನಹಳ್ಳಿ ಸವಿತಾ ರಾಮೇಗೌಡ, ಮಲ್ಲೇನಹಳ್ಳಿ ಎಂ.ಡಿ ಯೋಗೇಶ್, ಕರೋಟಿ ಅನಿಲ್ ಕೆ.ಎನ್,ಹಿರಿಯ ಮುಖಂಡರಾದ ರಾಮೇಗೌಡ,ಗ್ರಾ. ಪಂ ಮಾಜಿ ಸದಸ್ಯ ಸುಕಂದರಾಜ,ಎಂ.ಜಿ ನಾಗೇಶ್,ಆನಂದ್,ಎಂ.ಟಿ ಕುಮಾರ್, ಹೆಗ್ಗಡಹಳ್ಳಿ ಅಲೋಕ್,ಅಶೋಕ್, ಲಿಂಗಾಪುರ ಬಸವರಾಜ್, ಜವರಯ್ಯ, ಶ್ರೀನಿವಾಸ್,ಯುವ ಮುಖಂಡ ಸುನಿಲ್ ಸಣ್ಣಯ್ಯ, ಅನಿಲ್,ಹೆಗ್ಗಡಹಳ್ಳಿ ಚಲುವರಾಜು,ಗ್ರಾ. ಪಂ ಕಾರ್ಯದರ್ಶಿ ಪಾಂಡುರಂಗ ಸಿಬ್ಬಂದಿಗಳಾದ ಸಚಿನ್,ಅಭಿ, ಲಿಂಗರಾಜು, ಮಂಜುಳ, ಬೃಂದಾ, ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
