ಕೆ.ಆರ್.ಪೇಟೆ: ತಾಲ್ಲೂಕಿನ ಕಿಕ್ಕೇರಿ ಗ್ರಾಮದ ಹಿರಿಯ ಮುಖಂಡರಾದ ಲೇಟ್ ಕೆ. ಜೆ ವೆಂಕಟರಮಣಶೆಟ್ಟಿ ರವರ ಧರ್ಮಪತ್ನಿ ಜಯಲಕ್ಷ್ಮಿ(90)ಅವರು ವಯೋ ಸಹಜ ಕಾಯಿಲೆಯಿಂದ ಇಂದು(ಶನಿವಾರ) ಮುಂಜಾನೆ 5 ಗಂಟೆ ಸಮಯದಲ್ಲಿ ನಿಧನ ಹೊಂದಿದ್ದಾರೆ.
ಮೃತರಿಗೆ ಹಿರಿಯ ಪತ್ರಕರ್ತರಾದ ಗೋವಿಂದರಾಜು, ಬಲರಾಮ್ ಪುತ್ರರು, ಸೊಸೆ ಪತ್ರಕರ್ತೆ ತ್ರಿವೇಣಿ ಒಳಗೊಂಡಂತೆ ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ತುಂಬಿದ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರವು ಗ್ರಾಮದಲ್ಲಿರುವ ಸಾರ್ವಜನಿಕ ರುದ್ರಭೂಮಿಯಲ್ಲಿ (ಇಂದು) ಮಧ್ಯಾಹ್ನ 4 ಗಂಟೆಗೆ ನೆರವೇರಲಿದೆ ಎಂದು ಕುಟುಂಬಸ್ಥರ ಮೂಲಗಳು ತಿಳಿಸಿವೆ.
ಮೃತರಿಗೆ ಸಚಿವ ಎನ್. ಚೆಲುವರಾಯಸ್ವಾಮಿ, ಶಾಸಕ ಹೆಚ್.ಟಿ ಮಂಜು,ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ತಗಡೂರು ಶಿವಾನಂದ,ಮಾಜಿ ಸಚಿವ ಕೆ.ಸಿ ನಾರಾಯಣಗೌಡ,ಮಾಜಿ ಶಾಸಕರಾದ ಕೆ.ಬಿ ಚಂದ್ರಶೇಖರ್, ಬಿ. ಪ್ರಕಾಶ್,ಟಿ ಎ ಪಿ ಸಿ ಎಂ ಎಸ್ ಅಧ್ಯಕ್ಷ ಬಿ.ಎಲ್ ದೇವರಾಜು,ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ಜಿ.ಪಂ ಮಾಜಿ ಉಪಾಧ್ಯಕ್ಷ ಕೆ. ಎಸ್ ಪ್ರಭಾಕರ್,ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್,ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ನಿರ್ದೇಶಕ ಡಾಲು ರವಿ, ಎಂ.ಬಿ ಹರೀಶ್,ಕಾಂಗ್ರೆಸ್ ಮುಖಂಡ ಬೂಕನಕೆರೆ ವಿಜಯ ರಾಮೇಗೌಡ,ಜೆಡಿಎಸ್ ಅಧ್ಯಕ್ಷ ಜಾನಕಿರಾಮ್ , ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಂ ಕಿರಣ್,ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ್,ಎಂ ಡಿ ಸಿ ಸಿ ಬ್ಯಾಂಕ್ ಉಪಾಧ್ಯಕ್ಷ ಹೊಸಹೊಳಲು ಅಶೋಕ್,ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಂ ಕಿರಣ್,ಜೆಡಿಎಸ್ ರಾಜ್ಯ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಕುರುಬಹಳ್ಳಿ ನಾಗೇಶ್,ಕಾಂಗ್ರೆಸ್ ಮುಖಂಡ ಅಕ್ಕಿ ಮಂಜು, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಪ್ಪನಹಳ್ಳಿ ಅರುಣ್ ಕುಮಾರ್,ಹಿರಿಯ ಪತ್ರಕರ್ತರಾದ ಬಳ್ಳೆಕೆರೆ ಮಂಜುನಾಥ್, ಕೆ.ಆರ್ ನೀಲಕಂಠ, ಹರಿಚರಣ ತಿಲಕ್,ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್,ವಿವಿಧ ಕನ್ನಡ ಪರ ಸಂಘಟನೆಗಳು ಸೇರಿದಂತೆ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
ಮಾಹಿತಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
