ಕೆ.ಆರ್.ಪೇಟೆ: ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಮಾದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಮನೆಯ ಎಲ್.ಕೆ.ಜಿ. ಯು.ಕೆ.ಜಿ ಮಕ್ಕಳಿಗೆ ಅಕ್ಷರಾಭ್ಯಾಸ ಅರ್ಥಪೂರ್ಣವಾಗಿ ನಡೆಯಿತು.ಕಾರ್ಯಕ್ರಮವನ್ನು ಅರ್ಚಕರಾದ ಶ್ರೀನಿವಾಸ್ ನೇತೃತ್ವದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸದ ವಿಧಿವಿಧಾನವನ್ನು ನೆರವೆರಿಸಿಕೊಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣ ಇಲಾಖೆಯ ಸಂಪನ್ಮೂಲ ಅಧಿಕಾರಿಗಳಾದ ಮಂಜುನಾಥ್ ಆದಿ ಅನಾಧಿಕಾಲದಿಂದಲೂ ಅಕ್ಷರಭ್ಯಾಸ ಸಂಪ್ರದಾಯವೂ ನಡೆಯುತ್ತಾ ಬಂದಿದೆ.ಆದರೆ ಈ ಭಾಗದಲ್ಲಿ ಇಂತಹ ಕಾರ್ಯಕ್ರಮಗಳು ಬಳಹ ವಿರಳ ಅದಕ್ಕಾಗಿ ನಮ್ಮ ಮಾದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾರ್ಯವೂ ನಿಜಕ್ಕೂ ಶ್ಲಾಘನೀಯ.ಇತ್ತೀಚಿನ ಮಕ್ಕಳು ಪೋಷಕರು ಇಂಗ್ಲಿಷ್ ವ್ಯಾಮೋಹ ಮತ್ತು ಆಡಂಬರಕ್ಕೆ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ ಅದು ನಿಜಕ್ಕೂ ಬೇಸರದ ಸಂಗತಿ. ಸರ್ಕಾರ ಗ್ರಾಮೀಣ ಭಾಗದ ಮಕ್ಕಳಿಗೆ ವಿಶೇಷವಾಗಿ ಪ್ರತಿಯೊಂದು ವ್ಯವಸ್ಥೆ ಕಲ್ಪಿಸಿದೆ. ನಿಜಕ್ಕೂ ಹೇಳಬೇಕೆಂದರೆ ಸರ್ಕಾರಿ ಶಾಲೆಯಲ್ಲಿ ಹೋಗುತ್ತಿರುವ ಮಕ್ಕಳೇ ಉನ್ನತ ಸ್ಥಾನದಲ್ಲಿದ್ದಾರೆ ಅದನ್ನು ಎಲ್ಲ ಪೋಷಕರು ಅರಿತು ಸರ್ಕಾರಿ ಶಾಲೆಗೆ ಸೇರಿಸಬೇಕು.ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಜ್ಞಾನ ನೀಡುವ ಉದ್ದೇಶದಿಂದ ಎಲ್ಲಾ ಸಿಬ್ಬಂದಿಗಳ ಸಹಕಾರದಿಂದ ಇಂದು ಮಾದಾಪುರ ಸರ್ಕಾರಿ ಶಾಲೆ 123ಮಕ್ಕಳು ದಾಖಲಾಗಿ ಹೆಮ್ಮರವಾಗಿ ಬೆಳೆದಿದೆ, ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿಯಾಗಿವೆ ಎಂದರು.

ಬಳಿಕ ಮಾತನಾಡಿದ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಯೋಗೇಶ್ ಮನೆಯೇ ಮೊದಲ ಪಾಠಶಾಲೆ ಎಂಬಂತೆ ತಂದೆ ತಾಯಿಯ ಕೈಯಲ್ಲಿ ಅಕ್ಷರಭ್ಯಾಸ ಮಾಡಿ ನಮ್ಮ ಗ್ರಾಮದ ಶಾಲೆ ಮೊದಲ ಬಾರಿಗೆ ಎಲ್ಲ ಪೋಷಕರನ್ನು ಒಗ್ಗೂಡಿಸಿ ಅಕ್ಷರಭ್ಯಾಸ ಕಾರ್ಯಕ್ರಮ ಕೈಗೊಂಡಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ಯೋಗೇಶ್, ಸದಸ್ಯರಾದ ಸೋಮಶೇಖರ್, ಮಾದಾಪುರ ಗ್ರಾ.ಪಂ ಅಧ್ಯಕ್ಷ ಕೃಷ್ಣೆಗೌಡ ,ಹಿರಿಯ ಮುಖಂಡ ಸೋಮೇಗೌಡ,ಶಾಲಾ ಮುಖ್ಯ ಶಿಕ್ಷಕರಾದ ಸಿ.ಎಸ್ ನಂಜುಂಡಯ್ಯ, ಶಿಕ್ಷಕಿ ಜ್ಯೋತಿಲಕ್ಷ್ಮಿ ಹೆಚ್.ಟಿ, ಯೋಗೇಶ್ ಬಿ.ಸಿ, ಮಕ್ಕಳ ಪೋಷಕರಾದ ಹೇಮಂತ್, ನಾಗೇಶ್, ಅನಿಲ್, ಕಿರಣ್, ಪ್ರದೀಪ್, ಶಶಿ, ಕುಮಾರ್,ಕೃಪಾಷ, ಸಂತೋಷ್,ಸಿ ಎಂ,ಪೋಷಕರಾದ ವಾಣಿ, ರೇಖಾ,ಪ್ರಿಯಾಂಕಾ,ಸಿ ಪಿ ರಂಜಿತಾ ಭವ್ಯ, ರಾಣಿ, ಶಿಲ್ಪಾ, ಶೃತಿ, ಶಂಬಾವಿ ಶಶಿಕಲಾ, ಸುಪ್ರಿಯಾ ಶೈಲಜಾ,ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
