ಕೆ.ಆರ್.ಪೇಟೆ,ಮಾ.17: ಪುರಸಭಾ ವ್ಯಾಪ್ತಿಯ ಹೊಸಹೊಳಲು ಗ್ರಾಮದಲ್ಲಿ ಕರ್ನಾಟಕ ರತ್ನ ಖ್ಯಾತ ಚಲನಚಿತ್ರ ನಾಯಕ ನಟ ದಿವಂಗತ ಡಾ.ಪುನೀತ್ ರಾಜ್ಕುಮಾರ್ ರವರ 51ನೇ ಹುಟ್ಟು ಹಬ್ಬದ ಸವಿನೆನಪಿಗಾಗಿ ಪುನೀತ್ ರಾಜ್ಕುಮಾರ್ ಹೈಟೆಕ್ ಪುತ್ತಳಿ ನಿರ್ಮಾಣಕ್ಕೆ ಶಾಸಕ ಹೆಚ್.ಟಿ.ಮಂಜು ಸಹೋದರ ತಾಲ್ಲೂಕು ಟಿಎಪಿಸಿಎಂಎಸ್ ಸಂಸ್ಥೆಯ ನಿರ್ದೇಶಕ ಹೆಚ್.ಟಿ.ಲೋಕೇಶ್ ಭೂಮಿಪೂಜೆ ನೆರವೇರಿಸಿದರು.
ತಾಲ್ಲೂಕು ಹೊಸಹೊಳಲು ಗ್ರಾಮದ ಯುವರತ್ನ ಡಾ.ಪುನೀತ್ ಬಳಗ ಹಾಗೂ ಹೊಸಹೊಳಲು ಗ್ರಾಮಸ್ಥರೆಲ್ಲರೂ ಸೇರಿ ದಿವಂಗತ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ ಅಂಗವಾಗಿ ಸರ್ಕಾರಿ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದ ಕೆ.ಆರ್ ಪೇಟೆ ಮಾರ್ಗವಾಗಿ ಬೂಕನಕೆರೆ ರಸ್ತೆ ಹಾಗೂ ಅಕ್ಕಿಹೆಬ್ಬಾಳು ಕಡೆಗೆ ಹೋಗುವ ಪ್ರಮುಖ ವೃತ್ತದಲ್ಲಿ ಪುನೀತ್ ರಾಜ್ಕುಮಾರ್ ಅವರ ಸಾಮಾಜಿಕ ಸೇವೆಯ ಸ್ಮರಣೆಗಾಗಿ ಪುತ್ಥಳಿ ನಿರ್ಮಾಣಕ್ಕೆ ಹೊಸಹೊಳಲು ಗ್ರಾಮಸ್ಥರು ತಾಲ್ಲುಕು ಪಂಚಾಯಿತಿ ಮಾಜಿ ಸದಸ್ಯರಾದ ಹೆಚ್.ಎಸ್.ರಾಜು ಮತ್ತು ಪುರಸಭಾ ಮಾಜಿ ಅಧ್ಯಕ್ಷರಾದ ವರಲಕ್ಷ್ಮಿ ನಾಗರಾಜೇಗೌಡ ನೇತೃತ್ವದಲ್ಲಿ ಮುಂದಾಗಿರುವುದು ಶ್ಲಾಘನೀಯವಾದುದು.

ಪುನೀತ್ರಾಜ್ಕುಮಾರ್ ಅವರು ತಮ್ಮ ಜೀವಿತಾವಧಿಯಲ್ಲಿ ಯಾರಿಗೂ ಗೊತ್ತಾಗದಂತೆ ನೂರಾರು ಪುಣ್ಯದ ಕೆಲಸಗಳನ್ನು ಮಾಡಿರುತ್ತಾರೆ. ಅವರು ಬದುಕಿದ್ದಾಗ ಎಲ್ಲಿಯೂ ನಾನು ದಾನ ಮಾಡಿದ್ದೇನೆ ಎಂದು ಹೇಳಿಕೊಂಡಿರಲಿಲ್ಲ. ಇಂತಹ ಮೇರು ವ್ಯಕ್ತಿತ್ವದ ಪುನೀತ್ರಾಜ್ಕುಮಾರ್ ಅವರು ವರಲಕ್ಷ್ಮಿ ಯಸ್ಸಿನಲ್ಲಿ ನಮ್ಮನ್ನೆಲ್ಲ ಅಗಲಿರುವುದು ಇಡೀ ಕನ್ನಡನಾಡಿಗೆ ದುಃಖದ ವಿಚಾರವಾಗಿದೆ. ಇಂತಹ ವಿಶಾಲ ಮಾತೃ ಹೃದಯವನ್ನು ಹೊಂದಿದ್ದ ಪುನಿತ್ರಾಜ್ಕುಮಾರ್ ಅವರ ಆದರ್ಶಗಳನ್ನು ಯುವ ಜನರಿಗೆ ತಿಳಿಸುವ ಉದ್ದೇಶದಿಂದ ಹೊಸಹೊಳಲು ಗ್ರಾಮಸ್ಥರು ಪುತ್ತಳಿ ನಿರ್ಮಾಣ ಮಾಡುತ್ತಿರುವುದು ನಾಗರೀಕ ಸಮಾಜವೇ ಮೆಚ್ಚುವಂತಹ ಪುಣ್ಯದ ಕೆಲಸವಾಗಿದೆ ಎಂದು ಶಾಸಕ ಹೆಚ್.ಟಿ.ಮಂಜು ರವರ ಸಹೋದರರು ಹಾಗೂ ತಾಲ್ಲೂಕು ಟಿಎಪಿಸಿಎಂಎಸ್ ಸಂಸ್ಥೆಯ ನಿರ್ದೇಶಕ ಹೆಚ್.ಟಿ.ಲೋಕೇಶ್ ಹೇಳಿದರು.

ಈ ಸಂದರ್ಭದಲ್ಲಿ ಎಂಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಅಶೋಕ್, ತಾ.ಪಂ.ಮಾಜಿ ಸದಸ್ಯ ಹೆಚ್.ಎಸ್.ರಾಜು, ಪುರಸಭಾ ಮಾಜಿ ಅಧ್ಯಕ್ಷೆ ವರಲಕ್ಷಿö್ಮನಾಗರಾಜೇಗೌಡ, ವಿ.ಎಸ್.ಎಸ್.ಎನ್.ಬ್ಯಾಂಕ್ ನಿರ್ದೇಶಕ ಯೋಗೇಶ್, ಪುರಸಭಾ ಮಾಜಿ ಸದಸ್ಯರಾದ ರಾಜಣ್ಣ, ಗೋಪಾಲ್, ಗ್ರಾಮದ ಯಜಮಾನರುಗಳಾದ ಚಿಕ್ಕೇಗೌಡ, ರಾಮೇಗೌಡ, ನಾಗರಾಜೇಗೌಡ, ಗೋಪಾಲ್, ಮಾರುತಿ ಯುವಕರ ಸಂAಘದ ಅಧ್ಯಕ್ಷ ಶ್ರೀನಿವಾಸ್, ಡಾ.ವೆಂಕಟಾಚಲ, ವರಲಕ್ಷ ನಾಗರಾಜೇಗೌಡ, ಅರ್ಜುನ್, ಸುರೇಶ್ ಹರಿಜನ, ಸ್ವಾಮಿ, ಸಿದ್ದಯ್ಯ, ನಿಂಗಪ್ಪ, ಜಯಮ್ಮ, ಇಂಜಿನಿಯರ್ ಸತೀಶ್ ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.

ಇದೇ ಸಮಯದಲ್ಲಿ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಸಾರ್ವಜನಿಕರಿಗೆ ಅನ್ನಧಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
– ಶ್ರೀನಿವಾಸ್ ಆರ್.
