ಕೆ.ಆರ್.ಪೇಟೆ,ಮಾ.07: ಪುರಸಭಾ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರಾದ ಕೆ.ಬಿ.ಮಹೇಶ್ ಅವರು ತಾಲ್ಲೂಕಿನ ಬೂಕನಕೆರೆ ಹೋಬಳಿಯ ದೊಡ್ಡಯಾಚೇನಹಳ್ಳಿ ಗ್ರಾಮದ ಮಸೀದಿಯ ಕಟ್ಟಡದ ಗೋಡೆಗಳಿಗೆ ರಂಜಾನ್ ಹಬ್ಬದ ಅಂಗವಾಗಿ ಸುಣ್ಣ ಬಣ್ಣ ಬಳಿಯುವ ಕಾರ್ಯಕ್ಕೆ ಆರ್ಥಿಕ ನೆರವು ನೀಡಿದ್ದಾರೆ.
ದೇಣಿಗೆ ರೂಪದಲ್ಲಿ ಬಣ್ಣವನ್ನು ಸ್ವೀಕರಿಸಿ ಮಾತನಾಡಿದ ಮಸೀದಿಯ ಧರ್ಮ ಗುರುಗಳಾದ ಮಹಮದ್ ದಸ್ತಗಿರ್ ಪುರಸಭಾ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರಾದ ಕೆ.ಬಿ.ಮಹೇಶ್ ಅವರು ಪವಿತ್ರವಾದ ಹಬ್ಬ ರಂಜಾನ್ ಹಬ್ಬದ ಅಂಗವಾಗಿ ಒಂದು ತಿಂಗಳ ಕಾಲ ಉಪವಾಸ ವ್ರತವನ್ನು ಆಚರಿಸುತ್ತೇವೆ. ಮಸೀದಿಯ ಕಟ್ಟಡದಲ್ಲಿ ನಾವೆಲ್ಲರೂ ಮಸೀದಿಯಲ್ಲಿ ಪ್ರಾರ್ಥನೆ ಮಾಡುವಾಗ ಎಲ್ಲಾ ಸಮುದಾಯಕ್ಕೆ ಎಲ್ಲ ಧರ್ಮಕ್ಕೆ ಎಲ್ಲ ಜನರಿಗೆ ಸರ್ವೇ ಜನ ಸುಖೀನೋ ಭವಂತು ಎಂಬಂತೆ ಭಗವಂತ ಎಲ್ಲರನ್ನೂ ಕಾಪಾಡಲಿ ಅದರಲ್ಲೂ ರೈತರಿಗೆ ಸಮಯಕ್ಕೆ ಸಕಾಲಕ್ಕೆ ಮಳೆ ಬೆಳೆ ಆಗಿ ಸಕಲ ಸಂಪತ್ತು ನೀಡಿ ಎಲ್ಲರನ್ನು ಆರೋಗ್ಯವಂತನಾಗಿ ಮಾಡುವಂತೆ ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸುತ್ತೇವೆ.
ನಮ್ಮಲ್ಲಿ ಯಾವುದೇ ಧರ್ಮ ಬೇದವಿಲ್ಲದೆ ಪ್ರತಿಯೊಂದು ಧರ್ಮಕ್ಕೂ ಅವರದೇ ಆದಂತ ದೇವರುಗಳ ಬಗ್ಗೆ ಅವರದೇ ಆದ ರೀತಿಯಲ್ಲಿ ಪೂಜಿಸಿ, ಪ್ರಾರ್ಥನೆ ಸಲ್ಲಿಸುತ್ತಾರೆ. ದೇವನೊಬ್ಬ ನಾಮ ಹಲವು ಎಂಬ ನಾಣ್ಣುಡಿಯಂತೆ ಜಗತ್ತಿನಲ್ಲಿರುವಂತ ಸರ್ವ ಧರ್ಮದ ಜನರು ಪರಸ್ಪರ ಸಹ ಬಾಳ್ವೆಯಿಂದ ಬಾಳುವಂತಾಗಲಿ. ಜಗತ್ತಿನ ಯುದ್ದವೂ ನಿಲ್ಲಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದರು. ಪವಿತ್ರ ರಂಜಾನ್ ಹಬ್ಬದ ವೇಳೆಯಲ್ಲಿ ಮಸೀದಿಯ ಅಭಿವೃದ್ಧಿಗೆ ಕೈಜೋಡಿಸಿರುವ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್ ಸಹೋದರ ಕೆ.ಬಿ.ಮಹೇಶ್ ಅವರಿಗೆ ದೇವರು ಆರೋಗ್ಯ, ಆಯಸ್ಸು ನೀಡಿ ಇನ್ನೂ ಹೆಚ್ಚಿನ ಸಮಾಜ ಸೇವೆ ಮಾಡುವ ಶಕ್ತಿ ನೀಡಲಿ ಎಂದು ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಸೀದಿ ಗುರುಗಳಾದ ಮಹಮ್ಮದ ದಸ್ತಗೀರ್, ಅಧ್ಯಕ್ಷರಾದ ಫಯಾಜ್,ಕಾರ್ಯದರ್ಶಿ ಅಫ್ರಾದ್,ಖಾಲಿದ್,ದಸ್ತಗೀರ್,ಚೋಟೆಸಾಬ್, ಭೈರಾನಾಯಕ, ಆಶಿಕ್, ಚಾನ್ಷರೀಫ್, ರಾಯಲ್, ಸುಹೇಲ್, ಸಲ್ಮಾನ್, ಅಯಾಜ್, ಆಫೀಜ್ ಪಾಷಾ, ಮಕ್ಮುಲ್ ಪಾಷಾ, ನೂರ್ ಅಹ್ಮದ್, ಇಮ್ರಾನ್, ಕೊಮ್ಮೇನಹಳ್ಳಿ ಅನಿಲ್- ಸುನಿಲ್,ಮುಜಾಹಿದ್, ಮಂಜು ಸೇರಿದಂತೆ ಇತರರು ಹಾಜರಿದ್ದರು.
– ಶ್ರೀನಿವಾಸ್ ಆರ್
