ಕೆ ಆರ್ ಪೇಟೆ: ಪುರಸಭಾ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರಾದ ಕೆ ಬಿ ಮಹೇಶ್ ತಾಲೂಕು ಬೂಕನಕೆರೆ ಹೋಬಳಿ ದೊಡ್ಡಯಾಚೇನಹಳ್ಳಿ ಗ್ರಾಮದಲ್ಲಿರುವ ಮಸೀದಿಯ ಕಟ್ಟಡಕ್ಕೆ ರಂಜಾನ್ ಹಬ್ಬದ ಅಂಗವಾಗಿ ಸುಣ್ಣ ಬಣ್ಣ ಹೊಡೆಯಲು ಆರ್ಥಿಕ ನೆರವು ನೀಡಿದ್ದಾರೆ.
ಮುಸ್ಲಿಂ ಸಮುದಾಯದ ಪವಿತ್ರ ಹಬ್ಬ ರಂಜಾನ್ ಹಬ್ಬದ ಮಸೀದಿಯ ಕಟ್ಟಡಕ್ಕೆ ಬಣ್ಣವನ್ನು ಹೊಡೆಯಲು ಅವಕಾಶ ಮಾಡಿಕೊಟ್ಟ ಪುರಸಭಾ ಸದಸ್ಯ ಕೆ ಬಿ ಮಹೇಶ್ ಅವರಿಗೆ ಕೃತಜ್ಞತೆ ಸಲ್ಲಿಸಿದ ಮುಸ್ಲಿಂ ಧರ್ಮದ ಧಾರ್ಮಿಕ ಮುಖಂಡರು ಹಾಗೂ ಜನತೆ
ಮಸೀದಿಯ ಧರ್ಮ ಗುರುಗಳಾದ ಮಹಮದ್ ದಸ್ತಗಿರ್ ಮಾತನಾಡಿ ಕೃಷ್ಣರಾಜಪೇಟೆ ಪುರಸಭಾ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರಾದ ಕೆಬಿ ಮಹೇಶ್ ಅವರು ಹಾಗೂ ಅವರ ಕುಟುಂಬದ ಬಗ್ಗೆ ನಮಗೆ ನಮ್ಮ ಗ್ರಾಮದ ಎಲ್ಲಾ ನಮ್ಮ ಮುಸ್ಲಿಂ ಬಾಂಧವರಿಗೆ ಅಪಾರವಾದ ಗೌರವ ಪ್ರೀತಿ ವಿಶ್ವಾಸವಿದೆ.ಅವರ ಮೇಲೆ ಮುಂದೆಯೂ ಸಹ ಜೊತೆಗೆ ನಿಲ್ಲುತ್ತೇವೆ.ಇನ್ನೂ ಸಮಾಜ ಸೇವೆ ಮಾಡಲು ಅವರಿಗೆ ಭಗವಂತ ಇನ್ನಷ್ಟು ಶಕ್ತಿ ನೀಡಲಿ.ಇನ್ನೂ ಉನ್ನತ ಮಟ್ಟದ ರಾಜಕೀಯ ಅಧಿಕಾರ ಸಿಗುವಂತೆ ದೇವರು ದಾರಿ ತೋರಲಿ. ನಾವೆಲ್ಲರೂ ನಮ್ಮ ಪವಿತ್ರವಾದ ಹಬ್ಬ ರಂಜಾನ್ ಹಬ್ಬದ ಅಂಗವಾಗಿ ಒಂದು ತಿಂಗಳ ಕಾಲ ಉಪವಾಸವನ್ನು ವ್ರತವನ್ನು ಆಚರಿಸುತ್ತೇವೆ. ನಮ್ಮ ಮಸೀದಿಯ ಕಟ್ಟಡದಲ್ಲಿ ನಾವೆಲ್ಲರೂ ಮಸೀದಿಯಲ್ಲಿ ಪ್ರಾರ್ಥನೆ ಮಾಡುವಾಗ ಎಲ್ಲಾ ಸಮುದಾಯಕ್ಕೆ ಎಲ್ಲ ಧರ್ಮಕ್ಕೆ ಎಲ್ಲ ಜನರಿಗೆ ಸರ್ವೇ ಜನ ಸುಖಿನ ಭವಂತು ಎಂಬಂತೆ ಭಗವಂತ ಎಲ್ಲರನ್ನೂ ಕಾಪಾಡಲಿ ಅದರಲ್ಲೂ ರೈತರಿಗೆ ಸಮಯಕ್ಕೆ ಸಕಾಲಕ್ಕೆ ಮಳೆ ಬೆಳೆ ಆಗಿ ಸಕಲ ಸಂಪತ್ತು ನೀಡಿ ಎಲ್ಲರನ್ನು ಆರೋಗ್ಯವಂತನಾಗಿ ಮಾಡುವಂತೆ ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸುತ್ತೇವೆ ನಮ್ಮಲ್ಲಿ ಯಾವುದೇ ಧರ್ಮ ಬೇದವಿಲ್ಲದೆ ಪ್ರತಿಯೊಂದು ಧರ್ಮಕ್ಕೂ ಅವರದೇ ಆದಂತ ದೇವರುಗಳ ಬಗ್ಗೆ ಅವರದೇ ಆದ ರೀತಿಯಲ್ಲಿ ಪೂಜಿಸುತ್ತಾರೆ. ದೇವನೊಬ್ಬ ನಾಮ ಹಲವು ಎಂಬ ನಾಣ್ನುಡಿಯಂತೆ ಭೂ ಜಗತ್ತಿನಲ್ಲಿರುವಂತ ಸರ್ವ ಜನರು ಸಹ ಬಾಳ್ವೆಯಿಂದ ಬಾಳುವಂತೆ ಆ ಭಗವಂತ ಎಲ್ಲರಿಗೂ ಸದ್ಬುದ್ದಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದರು
ಈ ಸಂದರ್ಭದಲ್ಲಿ ಮಸೀದಿ ಗುರುಗಳಾದ ಮಹಮ್ಮದ ದಸ್ತಗೀರ್, ಅಧ್ಯಕ್ಷರಾದ ಫಯಾಜ್,ಕಾರ್ಯದರ್ಶಿ ಅಫ್ರಾದ್,ಖಾಲಿದ್,ದಸ್ತಗೀರ್,ಚೋಟೆ ಸಾಬ್,ಭೈರಾನಾಯಕ,ಆಶಿಕ್,ಚಾನ್ ಷರೀಫ್, ರಾಯಲ್, ಸುಹೇಲ್,ಸಲ್ಮಾನ್,ಅಯಾಜ್,ಆಫೀಜ್ ಪಾಷಾ,ಮಕ್ಮುಲ್ ಪಾಷಾ,ನೂರ್ ಅಹ್ಮದ್, ಇಮ್ರಾನ್,ಸುನಿಲ್,ಮುಜಾಹಿದ್, ಮಂಜು ಸೇರಿದಂತೆ ಇತರರು ಹಾಜರಿದ್ದರು.
– ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
