ಕೆ.ಆರ್.ಪೇಟೆ,ಜ.22: ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಜೈನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ನವಗ್ರಹ ದೇವಸ್ಥಾನ ಹಾಗೂ ನಾಗದೇವತೆ ದೇವಾಲಯ ಉದ್ಘಾಟನೆ ಹಾಗೂ ವಿಗ್ರಹ ಪ್ರತಿಷ್ಠಾಪನಾ ಸಮಾರಂಭವು ಶ್ರದ್ದಾಭಕ್ತಿಯಿಂದ ನಡೆಯಿತು.
ಗ್ರಾಮದ ಪ್ರಮುಖರು ಹಾಗೂ ಭಕ್ತಾದಿಗಳ ಸಹಕಾರದೊಂದಿಗೆ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶಾಸ್ತ್ರೋಕ್ತವಾಗಿ ವಿವಿಧ ಹೋಮ-ಹವನಗಳನ್ನು ನೆರವೇರಿಸುವ ಮೂಲಕ ನವಗ್ರಹ ವಿಗ್ರಹಗಳನ್ನು ಹಾಗೂ ನಾಗರ ಕಲ್ಲುಗಳನ್ನು ಪ್ರತಿಷ್ಠಾಪಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಿವೃತ್ತ ಮುಖ್ಯ ಶಿಕ್ಷಕ ಜೆ.ಎಸ್.ಲಿಂಗರಾಜೇಗೌಡ ಅವರು ಗ್ರಾಮಗಳಲ್ಲಿ ದೇವಾಲಯಗಳ ನಿರ್ಮಾಣದಿಂದ ಆಧ್ಯಾತ್ಮಿಕ ವಾತಾವರಣ ನಿರ್ಮಾಣವಾಗುತ್ತದೆ. ನವಗ್ರಹಗಳ ಆರಾಧನೆಯು ಮನುಷ್ಯನ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ಹಾಗೂ ಆತ್ಮಸ್ಥೆöÊರ್ಯವನ್ನು ನೀಡುತ್ತದೆ. ನಮ್ಮ ಜೈನಹಳ್ಳಿ ಗ್ರಾಮದ ಜನರು ಒಗ್ಗಟ್ಟಾಗಿ ವಿವಿಧ ಗ್ರಾಮಗಳ ಧಾನಿಗಳ ನೆರವು ಪಡೆದು ಇಂತಹ ಪುಣ್ಯದ ಕಾರ್ಯವನ್ನು ಮಾಡಿರುವುದು ಶ್ಲಾಘನೀಯ ಎಂದು ತಿಳಿಸಿದರು. ನಾಗಾರಾಧನೆ ಮತ್ತು ನವಗ್ರಹಗಳ ಪೂಜೆ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ ಇಂದಿನ ಯುವ ಪೀಳಿಗೆಗೆ ಇಂತಹ ಧಾರ್ಮಿಕ ಸಂಸ್ಕಾರಗಳನ್ನು ಪರಿಚಯಿಸುವುದು ಅಗತ್ಯವಿದೆ. ಈ ದೇವಸ್ಥಾನವು ಕೇವಲ ಪೂಜಾ ಸ್ಥಳವಾಗದೆ, ಗ್ರಾಮದ ಏಕತೆಯ ಸಂಕೇತವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ದೇವಾಲಯಗಳ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಹೆಚ್.ಟಿ.ಮಂಜು, ಸಮಾಜ ಸೇವಕ ಆರ್.ಟಿ.ಓ. ಮಲ್ಲಿಕಾರ್ಜುನ್, ಮನ್ಮುಲ್ ನಿರ್ದೇಶಕ ಡಾಲು ರವಿ, ಅನ್ನ ದಾಸೋಹ ದಾನಿಗಳಾದ ಮೈಸೂರು ಕೈಗಾರಿಕಾ ಮತ್ತು ವಾಣಿಜ್ಯ ಸಹ ನಿರ್ದೇಶಕ ಕೆ.ಸೋಮಶೇಖರ್, ದಾನಿಗಳಾದ ರೈಲ್ವೆ ಇಲಾಖೆಯ ರಶ್ಮಿಶರತ್, ಬಿ.ಎಸ್.ಎನ್.ಎಲ್. ಎಕ್ಸಿಕ್ಯೂಟೀವ್ ಇಂಜಿನಿಯರ್ ಜಿ.ಎಸ್.ಲೋಕೇಶ್, ರಾಜೀವ್ ಗಾಂಧೀ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪರಶುರಾಮೇಗೌಡ, ಜೈನ್ನಹಳ್ಳಿ ವಿ.ಎಸ್.ಎಸ್.ಎನ್. ನಿರ್ದೇಶಕ ಧರಣೇಶ್, ಮೈಸೂರು ಜ್ಞಾನಬುತ್ತಿ ಸಂಸ್ಥೆಯ ವ್ಯವಸ್ಥಾಪಕ ಸತ್ಯನಾರಾಯಣಗೌಡ, ನಿವೃತ್ತ ಪ್ರಾಂಶುಪಾಲ ಜಿ.ಜೆ.ರಾಜೇಗೌಡ, ಗ್ರಾ.ಪಂ.ಉಪಾಧ್ಯಕ್ಷೆ ನಾಗಮ್ಮ ಜಲೇಂದ್ರ, ಸುದ್ರೇಶ್, ತಾರಾಶ್ರೀ ಮುಕುಂದ, ಎಸ್. ರಾಜೇಗೌಡ, ತಿಮ್ಮಪ್ಪಗೌಡ, ಗೀತಾ ಮಂಜುನಾಥ್, ಜೆ.ಎಸ್. ರಾಮಕೃಷ್ಣೇಗೌಡ, ವಿ.ಆರ್. ನಾರಾಯಣ, ಜೆ.ಎನ್. ಚಂದ್ರೇಗೌಡ, ನೀಲಕಂಠಶಾಸ್ತ್ರಿ, ಜೆ.ಬಿ. ಬೋರೇಗೌಡ, ಜೆ.ಎನ್. ಶೇಷಾದ್ರಿಗೌಡ, ಗೌಡಪ್ಪ, ಬಸವರಾಜು, ಪ್ರಸನ್ನ ಜೆ.ಸಿ.ಕಮಲಮ್ಮ, ಮನು, ಲೋಹೀತ್. ಜೆ.ಎನ್, ಜೆ.ಆರ್.ಅಶೋಕ್, ಆಟೋ ತಿಮ್ಮಪ್ಪಗೌಡ, ಜೆ.ವಿ.ರಾಘವೇಂದ್ರ, ಜೆ.ಎಂ. ಸಚಿನ್, ಲಕ್ಷಮ್ಮ, ಮರಲಿಂಗ ಮುಕುಂದ, ಕೆ.ಎಸ್. ವೀಣಾ, ಜೆ.ಎನ್. ರಮೇಶ್, ಜೆ. ಆರ್. ಚಂದ್ರೇಗೌಡ, ಜೆ.ಎಂ.ಚಂದನ್ ಸೇರಿದಂತೆ ಅಕ್ಕಪಕ್ಕದ ಗ್ರಾಮಘಲ ಸಾವಿರಾರು ಭಕ್ತಾದಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು.
ಅಕ್ಕಿಹೆಬ್ಬಾಳು ಹೋಬಳಿಯ ಜೈನ್ನಹಳ್ಳಿ, ಹಳೆಮುದ್ಲಾಪುರ, ಹೊಸ ಮುದ್ಲಾಪುರ, ಸಿಂಗನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡು ದೇವರ ದರ್ಶನ ಪಡೆದರು. ದೇವರಿಗೆ ಪೂಜೆ ಸಲ್ಲಿಸಿ ಪುನೀತರಾದರು. ಸಂಭ್ರಮದಲ್ಲಿ ಆಗಮಿಸಿದ್ದ ನೂರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
– ಶ್ರೀನಿವಾಸ್ ಆರ್.
