ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ಹೋಬಳಿಯ ಕಾಶಿ ಮುರುಕನಹಳ್ಳಿ ಗ್ರಾಮದ ಬೋರಲಿಂಗೇಗೌಡ ತನ್ನ ಜಮೀನಿನಲ್ಲಿ ಸುಮಾರು 17 ಕೆ.ಜಿ ತೂಕ ಐವತ್ತು ಸಾವಿರ ಬೆಲೆ ಬಾಳುವ ಗಾಂಜಾ ಬೆಳೆದಿರುವ ಖಚಿತ ಮಾಹಿತಿ ಆಧರಿಸಿ ಮಂಡ್ಯ ಉಪ ಆಯುಕ್ತರ ಕಚೇರಿ ಉಪ ನಿರೀಕ್ಷಕ ನಾಗಭೂಷಣ್ ಹಾಗೂ ಕೆ.ಆರ್.ಪೇಟೆ ಅಬಕಾರಿ ಇನ್ಸ್ಪೆಕ್ಟರ್ ದೀಪಕ್ ನೇತೃತ್ವದಲ್ಲಿ ಮಾಲ್ ಸಮೇತ ಆರೋಪಿ ಬೋರಲಿಂಗೇಗೌಡ ಬಂಧಿಸಿದ್ದಾರೆ.

ಮಂಡ್ಯ ಅಬಕಾರಿ ಉಪ ಆಯುಕ್ತ ಕಚೇರಿ ಉಪನಿರೀಕ್ಷರಾದ ನಾಗಭೂಷಣ್ ಮಾತನಾಡಿ ಕಾಶಿಮುರುಕನಹಳ್ಳಿ ಗ್ರಾಮದ ಬೋರಲಿಂಗೇಗೌಡ ಎಂಬ ರೈತ ತನ್ನ ಜಮೀನಿನಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಬಗ್ಗೆ ಮೂಲಗಳಿಂದ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಮೇರೆಗೆ ತಾಲೂಕು ಕಂದಾಯ ಅಧಿಕಾರಿಗಳು ಜೊತೆಗೂಡಿ ನಮ್ಮ ತಂಡ ದಾಳಿಗೆ 17ಕೆ.ಜಿ ತೂಕದ ಐವತ್ತು ಸಾವಿರ ಮೌಲ್ಯದ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದೇವೆ ಎಂದ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ (ಎನ್ಡಿಪಿಎಸ್) ಅಡಿಯಲ್ಲಿ ಕೆ ಆರ್ ಪೇಟೆ ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿ ಬೋರಲಿಂಗೇಗೌಡರನ್ನ ಬಂಧಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬೂಕನಕೆರೆ ಹೋಬಳಿ ರಾಜಶ್ವನಿರಕ್ಷಕಿ ಚಂದ್ರಕಲಾ,ಅಬಕಾರಿ ಹೆಡ್ ಕಾನ್ಸ್ಟೇಬಲ್ ಅನಿಲ್ ಕುಮಾರ್, ದಿನೇಶ್, ಎಂ ಎಸ್, ಪೇದೆಗಳಾದ ಗಂಗಾಧರ್ ಸಿ.ಯು, ಚಂದ್ರಶೇಖರ, ನಾಗಪ್ಪ,ಸಂತೋಷ ಕುಮಾರ್, ಜಮೀರ್,ಸೇರಿದಂತೆ ಇತರರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
