ಕೆ.ಆರ್.ಪೇಟೆ: ಪಿ.ಎಲ್.ಡಿ ಬ್ಯಾಂಕ್ ಆಡಳಿತ ಮಂಡಳಿಯ ನೂತನ ಪ್ರಭಾರ ಅಧ್ಯಕ್ಷರಾಗಿ ರಮೇಶ್ ಎಂ. ಆರ್ ಅವರು ಅಧಿಕಾರ ಸ್ವೀಕರಿಸಿದರು.
ಹಿಂದಿನ ಅಧ್ಯಕ್ಷರಾದ ಕಬ್ಬಲಗೆರೆ ಪುಟ್ಟಸ್ವಾಮಿಗೌಡ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ,ಉಪಾಧ್ಯಕ್ಷ ಸ್ಥಾನದಲ್ಲಿದ್ದ ರಮೇಶ ಎಂ.ಆರ್(ಸಿಮೆಂಟ್ ಮಂಜು) ರವರು ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ ಎಂದು ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಪಿ.ಎಲ್.ಡಿ ಬ್ಯಾಂಕ್ ವ್ಯವಸ್ಥಾಪಕ ಎಂ.ಆನಂದ ಆಯ್ಕೆಯನ್ನು ಪ್ರಕಟಿಸಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಪ್ರಭಾರ ಅಧ್ಯಕ್ಷ ರಮೇಶ್ ಎಂ.ಆರ್ ನಾನು ಮೊದಲ ಬಾರಿಗೆ ಬ್ಯಾಂಕ್ ನಿರ್ದೇಶಕರಾಗಿ ಸರ್ವಾನು ಮತದಿಂದ ಉಪಾಧ್ಯಕ್ಷರ ಸ್ಥಾನಕ್ಕೆ ಸಹಕರಿಸಿ ಮತ್ತೆ ಪ್ರಭಾರ ಅಧ್ಯಕ್ಷರಾಗಿದ್ದೇನೆ ನನ್ನೆಲ್ಲ ನಿರ್ದೇಶಕರಿಗೆ ಋಣಿಯಾಗಿ,ಸದಸ್ಯರಿಗೆ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ನನಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ಪ್ರಾಮಾಣಿಕವಾಗಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತೇನೆ.ರೈತರಿಗೆ, ನಿರುದ್ಯೋಗಿಗಳಿಗೆ ಉಪ ಕಸುಬು ಕೈಗೊಳ್ಳಲು ಕುರಿ, ಕೋಳಿ, ಮೇಕೆ, ಫಾರಂ ಆರಂಭಿಸಲು ಸಾಲ ಸೌಲಭ್ಯವನ್ನು ತ್ವರಿತಗತಿಯಲ್ಲಿ ಸಾಲ ಸೌಲಭ್ಯ ನೀಡಲು ಕ್ರಮಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಇದನ್ನು ಓದು: ಕೆ.ಆರ್.ಪೇಟೆ: ವಿಶೇಷ ಚೇತನರಿಗೆ ಅನುಕಂಪಬೇಡ ಅವಕಾಶ ನೀಡಿ ನಿವೃತ್ತ ಪ್ರಾಂಶುಪಾಲ ಕಾಳೇಗೌಡ.
ನೂತನ ಪ್ರಭಾರ ಅಧ್ಯಕ್ಷರ ಆಯ್ಕೆಯಾದ ಬ್ಯಾಂಕಿನ ನಿರ್ದೇಶಕರು ಮುಖಂಡರು ಹಾರ ಹಾಕಿ,ಸಿಹಿ ವಿತರಣೆ ಮಾಡುವ ಮೂಲಕ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಪಿ.ಎಲ್.ಡಿ ಬ್ಯಾಂಕ್ ನಿಕಟ ಪೂರ್ವ ಅಧ್ಯಕ್ಷ ಕಬ್ಬಲಗೆರೆಪುರ ಪುಟ್ಟಸ್ವಾಮಿಗೌಡ,ನಿರ್ದೇಶಕರಾದ ಅಣ್ಣೆಚಾಕನಹಳ್ಳಿ ನಾಗರಾಜೇಗೌಡ, ನಿರ್ದೇಶಕರಾದ ಮಾಳಗೂರು ಜಗದೀಶ್,ಬಂಣ್ಣೇನಹಳ್ಳಿ ಧನಂಜಯ್,ಲಕ್ಷ್ಮೀಫುರ ಚಂದ್ರೇಗೌಡ,ಬಂಡಿಹೊಳೆ ನಾಗೇಶ್,ಮಂಜುಳಾ ಕೃಷ್ಣಗೌಡ,ಕವಿತ ಚಂದ್ರೆಗೌಡ,ಮುಖಂಡರಾದ ಹೊನ್ನೇನಹಳ್ಳಿ ಕೃಷ್ಣೆಗೌಡ,ಆರ್.ಟಿ.ಓ ಮಲ್ಲಿಕಾರ್ಜುನ್ ಆಪ್ತ ಸಹಾಯಕ ಗಂಜಿಗೆರೆ ಮಹೇಶ್,ಸುರೇಶ್, ಪ್ರದೀಪ್,ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
