ಕೆ.ಆರ್.ಪೇಟೆ:ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೀರುವಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಹಂಗರಮುದ್ದನಹಳ್ಳಿ ರಂಗಮ್ಮ ರಂಗೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಅಧ್ಯಕ್ಷರಾಗಿದ್ದ ಸುಜಾತ ನಾಗರಾಜು ಒಡಂಬಡಿಕೆ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರ ಸ್ಥಾನ ಬಯಸಿ ರಂಗಮ್ಮ ರಂಗೇಗೌಡ ಹೊರತುಪಡಿಸಿ ಉಳಿದ ಯಾವ ಸದಸ್ಯರುಗಳಿಂದ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆ. ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಪಶು ಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ: ದೇವರಾಜು ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿ ಅವಿರೋಧ ಆಯ್ಕೆ ಪ್ರಕಟಿಸಿದರು.ಸಹ ಚುನಾವಣಾ ಅಧಿಕಾರಿಯಾಗಿ ಪಿಡಿಒ ವಡ್ಡರಹಳ್ಳಿ ಶಿವಕುಮಾರ್ ಕಾರ್ಯನಿರ್ವಹಿಸಿದರು.
ಅಭಿನಂದನೆ ಸ್ವೀಕರಿಸಿ ಗ್ರಾ.ಪಂ ಅಧ್ಯಕ್ಷೆ ರಂಗಮ್ಮ ರಂಗೇಗೌಡ ಮಾತನಾಡಿ ನನ್ನನ್ನು ಪಂಚಾಯತಿ ಅಧ್ಯಕ್ಷರಾಗಿ ಆಯ್ಕೆ ಮಾಡಲು ಬೆಂಬಲಿಸಿದ ಎಲ್ಲಾ ಸದಸ್ಯರು ಹಾಗೂ ಗ್ರಾ. ಪಂ ವ್ಯಾಪ್ತಿಯ ಮುಖಂಡರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದ ಅವರು ನನ್ನ ಅಧಿಕಾರ ಅವಧಿಯಲ್ಲಿ ಬೀರುವಳ್ಳಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರು,ಸ್ವಚ್ಛತೆಗೆ ಆದ್ಯತೆ, ಹಾಗೂ ಮೂಲ ಸೌಕರ್ಯಗಳನ್ನು ಸಮಪರ್ಕವಾಗಿ ತಲುಪಿಸಲು ಅಧಿಕಾರಿಗಳ ಜತೆಗೂಡಿ ಶಕ್ತಿಮೀರಿ ಶ್ರಮಿಸುತ್ತೇನೆ ಎಂದು ಹೇಳಿದರು.

ನಂತರ ಮಾತನಾಡಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಬಿ.ಎನ್ ಕುಮಾರ್ ನಮ್ಮ ಆಡಳಿತ ಮಂಡಳಿ ಅವಧಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದೆ ಆ ಮಾದರಿಯಲ್ಲೇ ನೂತನ ಅಧ್ಯಕ್ಷರಾದ ರಂಗಮ್ಮ ರಂಗೇಗೌಡ ಕೂಡ ಸರ್ವಸದಸ್ಯರು ಹಾಗೂ ಗ್ರಾಮದ ಹಿರಿಯರನ್ನು ಒಗ್ಗೂಡಿಸಿಕೊಂಡು ಗ್ರಾಮದ ಅಭಿವೃದ್ದಿಗಾಗಿ ಪಕ್ಷಭೇದ ಮರೆತು ಪ್ರಾಮಾಣಿಕವಾಗಿ ಹಗಲಿರುಳು ಶ್ರಮಿಸಬೇಕು, ಗ್ರಾ.ಪಂ ಅಧ್ಯಕ್ಷರ ಹುದ್ದೆ ಪ್ರಜಾ ಪ್ರಭುತ್ವ ಸರ್ಕಾರದ ಸ್ಥಳೀಯ ಮೂಲ ಬೇರು. ಇಂತಹ ಹುದ್ದೆಯನ್ನು ವಹಿಸಿಕೊಂಡಿರುವವರು ಅಂಬೇಡ್ಕರ್ ಸಂವಿಧಾನದ ಆಶಯದಂತೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಇದನ್ನು ಓದಿ: ಕೆ.ಆರ್.ನಗರ- ಮಾಂಬಳ್ಳಿ ಸೊಸೈಟಿಗೆ ನೂತನ ಅಧ್ಯಕ್ಷರಾಗಿ ದೇವರಾಜು ಅವಿರೋಧ ಆಯ್ಕೆ
ನೂತನ ಅಧ್ಯಕ್ಷರು ಅಧಿಕಾರ ಸ್ವೀಕರಿಸುತ್ತಿದ್ದಂತೆ ಬೆಂಬಲಿಗರು ಹಿತೈಷಿಗಳು ಪಟಾಕಿ ಸಿಡಿಸಿ ಸಿಹಿ ತಿನಿಸುವ ಮೂಲಕ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಪ್ರಕಾಶ್,ಸದಸ್ಯರಾದ ಸುಜಾತ ನಾಗರಾಜು, ಬಿ.ಎನ್ ಕುಮಾರ್, ಸೋವಿತ್ಕುಮಾರ್, ಕೆ.ಜೆ ಗೀತಾ ಜಗದೀಶ್, ಲೋಕೇಶ್ ಕರಿಯಮ್ಮ ಗೋಪಾಲಗೌಡ, ಮೀನಾಕ್ಷಿ ಪ್ರಭಾಕರ, ಲಕ್ಷ್ಮಿ ಕುಮಾರ್, ಚಂದ್ರಪ್ಪ, ಶಿವಕುಮಾರ, ನಿಂಗಜಮ್ಮ ಸ್ವಾಮಪ್ಪ,ಶಿವಮ್ಮ ನಾಗರಾಜು,ಎಂ. ಸಿ ನಾಗರಾಜು ಶಾರದಮ್ಮ ಮಂಜುನಾಯ್ಕ,ಶಂಕರ,ಪಿಡಿಓ ವಡ್ಡರಹಳ್ಳಿ ಶಿವಕುಮಾರ್,ಮುಖಂಡರಾದ ಬಿ. ಕನಹಳ್ಳಿ ಈರೇಗೌಡ ಮುಖಂಡರಾದ ದಿನೇಶ್,ರುದ್ರ, ಬುಕ್ ಸ್ಟೋರ್ ದಿನೇಶ್, ಪ್ರಜ್ವಲ್, ಅಶೋಕ್,ಗೋಪಾಲಗೌಡ, ರಘು, ಮಂಜುನಾಯಕ, ಜಗದೀಶ್,ವಿನಾಯಕ,ವಿರುಪಾಕ್ಷ, ನಾಗರಾಜೇಗೌಡ, ರಂಗೇಗೌಡ,ರಾಜೇಗೌಡ,ಸ್ವಾಮಿಗೌಡ, ಮಹದೇವ, ಜೆಸಿಬಿ ಸ್ವಾಮಿಗೌಡ ಶಿವಣ್ಣ ಕರಿಗೌಡ ಶಿವನಂಜೇಗೌಡ ಲೋಕೇಶ್ ಮಹದೇವ ಲೋಕೇಶ್ ಭದ್ರೆಗೌಡ ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
