ಕೆ.ಆರ್.ಪೇಟೆ:ರಾಸುಗಳ ಬಂಜೆತನ ನಿವಾರಣೆಗೆ ತಂತ್ರಜ್ಞಾನ ಅಳವಡಿಸಿಕೊಂಡು ಕೃತಕ ಗರ್ಭಧಾರಣೆ ಮಾಡಿದರೇ, ರಾಸುಗಳು ಗರ್ಭಧರಿಸಿ ಕರು ಹಾಕುವ ಜತೆಗೆ ಹೆಚ್ಚಿನ ಹಾಲು ನೀಡಲು ಸಾಧ್ಯವಾಗಿ ರೈತರು ಆರ್ಥಿಕವಾಗಿ ಸಬಲರಾಗುತ್ತಾರೆ ಎಂದು ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಡಾಲು ರವಿ ತಿಳಿಸಿದರು.
ಪಟ್ಟಣದಲ್ಲಿರುವ ಮನ್ಮುಲ್ ಉಪ ಕಚೇರಿಯಲ್ಲಿ ರಾಸುಗಳ ಕೃತಕ ಗರ್ಭಧಾರಣೆ ಸಿಬ್ಬಂದಿಗಳ ಸಭೆಯನ್ನು ಜ್ಯೋತಿ ಬೆಳಗಿಸುವ ಮುಖಾಂತರ ಉದ್ಘಾಟಿಸಿ ಮಾತನಾಡಿದರು ರಾಸುಗಳು ಗರ್ಭ ಧರಿಸುವ ಸಂದರ್ಭ ಬಂದಾಗ ತಕ್ಷಣವೇ ಕೃತಕ ಗರ್ಭಧಾರಣೆ ಮಾಡುವುದರಿಂದ ರಾಸುಗಳನ್ನು ಹೊಂದಿರುವ ಸಹಕಾರ ಸಂಘದ ಸದಸ್ಯರಿಗೆ ತಮ್ಮ ರಾಸುಗಳು ಕರು ಹಾಕುವುದರ ಜತೆಗೆ ಹೆಚ್ಚಿನ ಹಾಲು ಪಡೆಯಲು ಅನುಕೂಲವಾಗುತ್ತದೆ. ಈಗಾಗಲೇ ಸಂಘಗಳ ವ್ಯಾಪ್ತಿಯ ಹಳ್ಳಿಗಳನ್ನೊಳಗೊಂಡು ವೃತ್ತವನ್ನಾಗಿ ವಿಂಗಡಣೆ ಮಾಡಲಾಗಿದೆ.ಇವರಿಗೆ ಹೆಚ್ಚಿನ ಕೌಶಲವನ್ನು ಹಾಗೂ ನೂತನ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸಲು ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕೊಡಿಸಲಾಗುತ್ತಿದೆ. ಹಳ್ಳಿ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಕಾರ್ಯಕರ್ತರು ತಮ್ಮ ಅನುಮಾನಗಳನ್ನು ಪರಿಹರಿಸಿಕೊಂಡು ಸೂಕ್ತ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದರೆ ಒಕ್ಕೂಟಕ್ಕೆ ಒಳ್ಳೆಯ ಹೆಸರು ಬರುತ್ತದೆ. ಜತೆಗೆ ರೈತರು ಕರೆದ ಸಂದರ್ಭದಲ್ಲಿ ಹೋಗಿ ಕೃತಕ ಗರ್ಭಧಾರಣೆ ಮಾಡುವ ಕೆಲಸವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಮನ್ಮುಲ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಎಂ.ಬಿ ಹರೀಶ್ ಬಳಿಕ ರಾಸುಗಳಿಗೆ ಕೃತಕ ಗರ್ಭಧಾರಣೆ ಮಾಡಿಸುವ ಮೂಲಕ ರೈತರು ಹೆಚ್ಚು ಹಾಲನ್ನು ಪಡೆದುಕೊಳ್ಳಬಹುದು. ಈ ನಿಟ್ಟಿನಲ್ಲಿ ಒಕ್ಕೂಟ ಸೂಕ್ತ ವೇತನ ಹಾಗೂ ನೂತನ ತಂತ್ರಜ್ಞಾನದ ಸಲಕರಣೆಗಳನ್ನು ನಿಮಗೆ ನೀಡುತ್ತಿದೆ.ಇದರ ಸಮರ್ಪಕ ಬಳಕೆಯಿಂದ ಒಕ್ಕೂಟ ಹಾಗೂ ರೈತರ ಅಭಿವೃದ್ಧಿಗೆ ಶ್ರಮವಹಿಸಬೇಕು ಎಂದು ತಿಳಿಸಿದರು.

ಬಳಿಕ ಮರಣ ಹೊಂದಿದ ರಾಸುಗಳಿಗೆ ಹಾಗೂ ಆಕಸ್ಮಿಕವಾಗಿ ಮರಣ ಹೊಂದಿದ ಹಾಲು ಉತ್ಪಾದಕರಿಗೆ ಪರಿಹಾರದ ಚೆಕ್ ವಿತರಣೆ ಮತ್ತು ಹಾಲು ಕರೆಯುವ ಯಂತ್ರಗಳಿಗೆ ಸಬ್ಸಿಡಿ ದರದಲ್ಲಿ ಸಿಗುವ ಚೆಕ್ ಗಳನ್ನು ವಿತರಿಸಿದ ಬಳಿಕ ತಾಲೂಕು ರಾಸುಗಳ ಕೃತಕ ಗರ್ಭಧಾರಣೆ ಸಿಬ್ಬಂದಿಗಳು ಮನ್ಮುಲ್ ನಿರ್ದೇಶಕರಾದ ಎಂ.ಬಿ ಹರೀಶ್,ಡಾಲು ರವಿ ಅವರನ್ನ ಅಭಿನಂದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಉಪ ವ್ಯವಸ್ಥಾಪಕ ಪ್ರಸಾದ್, ,ಮಾರ್ಗ ವಿಸ್ತರಣಾಧಿಕಾರಿಗಳಾದ ಗುರುರಾಜ್ ಸುರಗೀಹಳ್ಳಿ ,ನಾಗಪ್ಪ ಅಲ್ಲಿಬಾದಿ,ಬಿ.ಸಿ ಮಧು ಕುಮಾರ್, ರಘುವೇಂದ್ರ,ಸಂಧ್ಯಾ ಎಂ. ಕೆ,ವಿದ್ಯಾ, ಮುಖಂಡರಾದ ಹಾದನೂರು ಪರಮೇಶ್, ಕೈಗೊನಹಳ್ಳಿ ಜಯರಾಮ್, ಜಾಗನಕೆರೆ ಅಂಬರೀಶ್, ಶೀಳನೆರೆ ಅಜಯ್,ಕರೋಟಿ ರಾಕೇಶ್,ಸೇರಿದಂತೆ ಉಪಸ್ಥಿತರಿದ್ದರು.
– ಮನು ಮಾಕವಳ್ಳಿ ಕೆ ಆರ್ ಪೇಟೆ
