ಕೆ.ಆರ್.ಪೇಟೆ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪಟ್ಟಣ ಪ್ರದೇಶದ ವಿದ್ಯಾರ್ಥಿಗಳೊಂದಿಗೆ ಪ್ರತಿಸ್ಪರ್ಧಿಯಾಗಿ ಸ್ಪರ್ಧಿಸಲು ಗುಣಮಟ್ಟದ ಶಿಕ್ಷಣ ಅಗತ್ಯ ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ತಿಳಿಸಿದರು.
ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ದಬ್ಬೆಘಟ್ಟ ಗ್ರಾಮ ಬಳಿಯ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾ ಮಂದಿರದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.ಈ ಭಾಗದ ಗ್ರಾಮೀಣ ಭಾಗದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಿರುವ ಶಾಲೆಗಳ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾ ಸಂಸ್ಥೆ ಶಾಲೆ ಪ್ರಥಮ ಸ್ಥಾನದಲ್ಲಿದೆ.ಪಠ್ಯ ಶಿಕ್ಷಣದೊಟ್ಟಿಗೆ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಕಲಿಸುತ್ತಿದೆ.ನಾಗರೀಕ ಸಮಾಜದಲ್ಲಿ ಹಬ್ಬ ಹರಿದಿನ ಆಚರಿಸುವಂತೆ ಶಾಲಾ ಕಾಲೇಜುಗಳಲ್ಲಿ ವರ್ಷಕ್ಕೊಮ್ಮೆ ನಡೆಯುವ ವಾರ್ಷಿಕೋತ್ಸವ ಮಕ್ಕಳ ಪಾಲಿಗೆ ಹಬ್ಬದ ಸನ್ನಿವೇಶವನ್ನು ಸೃಷ್ಟಿ ಎಲ್ಲಾ ಧರ್ಮಗಳ ಸಮನ್ವಯತೆಯನ್ನು ಕಾಣಲು ಹಾಗೂ ಪ್ರತಿಬೆ ಹೊರ ಹಾಕುವ ಸುಂದರ ಶಾಲಾ ವಾರ್ಷಿಕೋತ್ಸವವನ್ನು ಕೈಗೊಳ್ಳುವುದರಿಂದ ಈ ಶಾಲೆ ದಾಖಲಾತಿಗೆ ಕೊರತೆಯಿಲ್ಲ ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಬಣ್ಣಿಸಿದರು.

ಶಾಲಾ ಪುಟ್ಟ ಮಕ್ಕಳ ನೃತ್ಯ ವೈಭವ ವಿವಿಧ ಸಂಸ್ಕೃತಿಕ ನರ್ತನ ಜಾನಪದ ಕಲಾವೇಷದಲ್ಲಿ ವಿದ್ಯಾರ್ಥಿಗಳಿಗೆ ಅದ್ಭುತ ನೃತ್ಯ ಪ್ರದರ್ಶಿಸಿ ಕಾರ್ಯಕ್ರಮದ ಕಲರವ ಹೆಚ್ಚಿಸಿದರು.
ಈ ಸಂದರ್ಭದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾ ಸಂಸ್ಥೆಯ ಶಾಲಾ ವ್ಯವಸ್ಥಾಪಕ ಮಹೇಶ್,ಶಾಲಾ ಮುಖ್ಯ ಶಿಕ್ಷಕ ಹರೀಶ್, ಗ್ರಾ.ಪಂ ಅಧ್ಯಕ್ಷ ದೇವರಾಜು,ಬಿರುವಳ್ಳಿ ಸತೀಶ್,ಮಾರ್ಗೋನಹಳ್ಳಿ ನಾಗರಾಜು, ಮೋಹನ್, ಯುವ ಮುಖಂಡ ಅಭಿಷೇಕ್,ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಅವರ ಆಪ್ತ ಸಹಾಯಕ ಗಂಜಿಗೆರೆ ಮಹೇಶ್,ಸೇರಿದಂತೆ ಶಾಲಾ ಮಕ್ಕಳು ಪೋಷಕರು ಇದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ
