ಕೆ.ಆರ್.ಪೇಟೆ – ತಾಲ್ಲೂಕಿನ ಹಿರಿಯ ಪತ್ರಕರ್ತರು ಹಾಗೂ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಆರ್. ಶ್ರೀನಿವಾಸ್ ಅವರ ಹುಟ್ಟುಹಬ್ಬವನ್ನು ಭಾನುವಾರ ಜಯನಗರದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಹುಟ್ಟುಹಬ್ಬದ ಅಂಗವಾಗಿ ಹೊಸಹೊಳಲು–ನಿಂದ ಆಗಮಿಸಿದ್ದ ಸಮಾಜಸೇವಕ ಹಾಗೂ ಉದ್ಯಮಿ ನಂಜುಂಡಸ್ವಾಮಿ ಮತ್ತು ಅವರ ಸ್ನೇಹಿತರು ಶ್ರೀನಿವಾಸ್ ಅವರನ್ನು ಮೈಸೂರು ಪೇಟ ತೊಡಿಸಿ ಸನ್ಮಾನಿಸಿ ಕೇಕ್ ಕತ್ತರಿಸುವ ಮೂಲಕ ಶುಭಾಶಯಗಳನ್ನು ಕೋರಿದರು.
ಅದೇ ವೇಳೆ, ಆರ್.ಟಿ.ಓ. ಮಲ್ಲಿಕಾರ್ಜುನ್ ಅಭಿಮಾನಿಗಳ ಬಳಗದ ನೇತೃತ್ವದಲ್ಲಿ ಅಧ್ಯಕ್ಷ ಗಂಜಿಗೆರೆ ಮಹೇಶ್ ಅವರು ವಿಶೇಷವಾಗಿ ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ತಿನ್ನಿಸಿ ವಿಶೇಷ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸಿದರು. “ಹುಟ್ಟುಹಬ್ಬದಲ್ಲಿ ಕಲ್ಲಂಗಡಿಗೂ ಬೆಲೆ ಸಿಗಬೇಕು ಎಂಬ ಸದುದೇಶದಿಂದ ಈ ಆಚರಣೆ ನಡೆಯಿತು” ಎಂದು ಅವರು ಹೇಳಿದರು.

ಸುಮಾರು 18 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿರುವ ಶ್ರೀನಿವಾಸ್, ಮೈಸೂರುಮಿತ್ರ, ವಿಜಯವಾಣಿ, ಆಂದೋಲನ, ಉದಯಕಾಲ, ಪ್ರಜಾನುಡಿ, ವೈಬ್ರೆಂಟ್ ಮೈಸೂರು ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ಅವರ ಪ್ರಾಮಾಣಿಕ ವರದಿ ಕಾರ್ಯಕ್ಕೆ ತಾಲ್ಲೂಕಿನಾದ್ಯಾಂತ “ಪೇಪರ್ ಸೀನಣ್ಣ” ಎಂಬ ಖ್ಯಾತಿಯು ಒದಗಿದೆ.

ಅವರು ಹಲವಾರು ಯುವ ಪತ್ರಕರ್ತರಿಗೆ ಮಾರ್ಗದರ್ಶನ ನೀಡಿ ಪತ್ರಿಕಾ ಕ್ಷೇತ್ರಕ್ಕೆ ನೂತನ ಪ್ರತಿಭೆಗಳ ಪರಿಚಯ ನೀಡಿರುವುದು ಗಮನಾರ್ಹ.

ಈ ಸಂಧರ್ಭದಲ್ಲಿ ಪತ್ರಕರ್ತರು ಕೆ.ಎಸ್. ಚಂದ್ರು, ಕೆ.ಪಿ. ಮಂಜುನಾಥ್, ಜಗದೀಶ್, ರಂಗನಾಥ್, ಶ್ಯಾರಹಳ್ಳಿ ಗೋವಿಂದರಾಜು, ಮನು ಮಾಕವಳ್ಳಿ,ಪೋಲಿಸ್ ಸತೀಶ್, ವಿಜಿಯಣ್ಣ, ಆರ್.ಟಿ.ಓ ಪ್ರತಿನಿಧಿ ಸಂಜಯ್ ಹಾಗೂ ಹಲವಾರು ಹಿರಿಯರು ಮತ್ತು ಯುವ ಪತ್ರಕರ್ತರು ಉಪಸ್ಥಿತರಿದ್ದರು.
