ಕೆ.ಆರ್. ಪೇಟೆ, ಆಗಸ್ಟ್ 2: ಬೂಕನಕೆರೆ ಹೋಬಳಿಯ ಬಳ್ಳೆಕೆರೆ ಗ್ರಾಮದ ಹಿರಿಯ ಮುಖಂಡರಾದ ಮೀಸೆ ಪುಟ್ಟಗೌಡ (85) ಅವರು ಶುಕ್ರವಾರ ತಡರಾತ್ರಿ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರಿಗೆ ಗಂಡು ಮಕ್ಕಳಾದ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯ ಚಂದ್ರೇಗೌಡ, ಲೇಟ್ ರಾಜೇಗೌಡ, ಮತ್ತು ಮಗಳು ವಸಂತ, ಮೊಮ್ಮಕ್ಕಳಾದ ಉದಯ್, ಪವನ್, ಅಶ್ವಿನಿ, ಪಲ್ಲವಿ ಸೇರಿ ಅಪಾರ ಬಂಧುಬಳಗವಿದೆ.
ಅಂತ್ಯಕ್ರಿಯೆ ಶನಿವಾರ ಬೆಳಿಗ್ಗೆ 11 ಗಂಟೆಗೆ ಸ್ವಗ್ರಾಮದ ಅವರದೇ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮೃತರ ನಿಧನಕ್ಕೆ ಸ್ಥಳೀಯ ಹಾಲಿ ಹಾಗೂ ಮಾಜಿ ಶಾಸಕರು, ಸಮಾಜ ಸೇವಕರು, ವಿವಿಧ ಸಹಕಾರ ಸಂಘಗಳ ನಿರ್ದೇಶಕರು, ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಕನ್ನಡ ಪರ ಸಂಘಟನೆಗಳು ತೀವ್ರ ಸಂತಾಪ ವ್ಯಕ್ತಪಡಿಸಿವೆ.
–ಮನು ಮಾಕವಳ್ಳಿ, ಕೆ.ಆರ್. ಪೇಟೆ
