ಕೆ.ಆರ್.ಪೇಟೆ,ಫೆ.16: ತಾಲ್ಲೂಕಿನ ವಿವಿಧೆಡೆ ಈಶ್ವರ ಹಾಗೂ ಶಿವನ ದೇವಾಲಯಗಳಲ್ಲಿ ಶಿವರಾತ್ರಿ ಹಬ್ಬವನ್ನು ಶ್ರದ್ದಾ-ಭಕ್ತಿಯಿಂದ ಹಾಗೂ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಭಾನುವಾರ ಮುಂಜಾನೆಯಿಂದಲೇ ಶಿವನ ದೇವಾಲಯಗಳಲ್ಲಿ ದೇವರಿಗೆ ಬಿಲ್ವಪತ್ರೆ, ಜೇನುತುಪ್ಪ, ಎಳೆನೀರು, ಗಂಗಾಜಲ ಮತ್ತು ಬಿಲ್ವ ಪತ್ರೆಯನ್ನು, ಬಿಲ್ವದ ಹಣ್ಣು, ದಾತುರ ಅರ್ಪಿಸಿ ಶಿವನನ್ನು ಪೂಜಿಸಿಲಾಯಿತು. ಭಕ್ತಾಧಿಗಳು ಬೆಳಿಗ್ಗೆಯಿಂದ ಸಂಜೆಯವರೆವಿಗೂ ಸರತಿಯ ಸಾಲಿನಲ್ಲಿ ನಿಂತು ಹೂ,ಹಣ್ಣು-ಕಾಯಿ ಅರ್ಪಿಸಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದುಕೊಂಡರು.

ಅನೇಕ ದೇವಾಲಯಗಳಲ್ಲಿ ಹಾಲು, ಮೊಸರು, ಜೇನು, ತುಪ್ಪ, ಸಕ್ಕರೆ, ಗಂಗಾಜಲ ಸೇರಿದಂತೆ ವಿವಿಧ ಅಭಿಷೇಕಗಳನ್ನು ಅರ್ಚನೆಗಳನ್ನು ಭಕ್ತರ ಇಷ್ಟಾರ್ಥ ಸಿದ್ದಿಗೆ ದೇವರಲ್ಲಿ ಪ್ರಾರ್ಥಿನೆ ಸಲ್ಲಿಸಲಾಯಿತು. ಹಲವು ದೇವಾಲಯಗಳಲ್ಲಿ ಭಕ್ತರಿಗೆ ಹಣ್ಣು ಮತ್ತ ಹಣ್ಣಿನ ರಸವನ್ನು ಪ್ರಸಾದದ ರೂಪವಾಗಿ ನೀಡಲಾಯಿತು. ಶಿವಲಿಂಗವನ್ನು ಬಿಲ್ವಪತ್ರೆಗಳಿಂದ ಅಲಂಕರಿಸಲಾಗಿತ್ತು. ಚಂದನ ಮತ್ತು ವಿಭೂತಿ ಭಸ್ಮವನ್ನು ಅರ್ಪಿಸಿ ಅದನ್ನು ಭಕ್ತರಿಗೆ ಹಣೆಗೆ ಹಚ್ಚಿಕೊಳ್ಳಲು ನೀಡಲಾಯಿತು. ದೇವಾಲಯಕ್ಕೆ ತೆರಳಿದ ಭಕ್ತರು ನಮಃ ಶಿವಾಯ, ಓಂ ನಮಃ ಶಿವಾಯ ಎಂದು ಶಿವನನ್ನು ಜಪಿಸುತ್ತಾ ಪೂಜೆ ಸಲ್ಲಿಸಿ ತಮ್ಮ ಭಕ್ತಿ-ಭಾವ ಪ್ರದರ್ಶನ ಮಾಡಿದರು.

ಶಾಸಕ ಹೆಚ್.ಟಿ.ಮಂಜು, ಕರ್ನಾಟಕ ರಾಜ್ಯ ಕೈಮಗ್ಗ ಅಭಿವೃದ್ದಿ ನಿಗಮದ ರಾಜ್ಯಾಧ್ಯಕ್ಷ ಬಿ.ನಾಗೇಂದ್ರಕುಮಾರ್, ಉಪ ವಿಭಾಗಾಧಿಕಾರಿ ಡಾ.ಕೆ.ಶ್ರೀನಿವಾಸ್, ತಹಸೀಲ್ದಾರ್ ಎಸ್.ಯು.ಅಶೋಕ್, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಸಮಾಜ ಸೇವಕ ಆರ್.ಟಿ.ಓ.ಮಲ್ಲಿಕಾರ್ಜುನ್, ಮಿತ್ರ ಫೌಂಡೇಷನ್ ಅಧ್ಯಕ್ಷ ವಿಜಯ್ ರಾಮೇಗೌಡ, ಸಮಾಜ ಸೇವಕ ಹೊಸಹೊಳಲು ನಂಜುಂಡಸ್ವಾಮಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಅಂಬರೀಶ್, ಮನ್ಮುಲ್ ನಿರ್ದೇಶಕರಾದ ಡಾಲು ರವಿ, ಎಂ.ಬಿ.ಹರೀಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಲದೇವ್, ನಿರ್ದೇಶಕರಾದ ಹೆಚ್.ಟಿ.ಲೋಕೇಶ್, ದಿಲೀಪ್ಕುಮಾರ್, ಕರ್ನಾಟಕ ರಾಜ್ಯ ಕೈಗಾರಿಕಾ ಸರಬರಾಜು ಸಹಕಾರ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷÀ್ಷ ಬಸ್ ಸಂತೋಷ್ಕುಮಾರ್, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್, ಅಗ್ರಹಾರಬಾಚಹಳ್ಳಿ ಗ್ರಾ.ಪಂ.ಅಧ್ಯಕ್ಷ ಎ.ಸಿ.ದಿವಿಕುಮಾರ್, ಬಲ್ಲೇನಹಳ್ಳಿ ಬಿ.ಎಸ್.ರಾಮು, ಬಲ್ಲೇನಹಳ್ಳಿ ರಮೇಶ್, ಕಬ್ಬಲಗೆರೆಪುರ ಪುಟ್ಟಸ್ವಾಮೀಗೌಡ, ಸೇರಿದಂತೆ ವಿವಿಧ ಗಣ್ಯರು ಇಡೀ ದಿನ ತಾಲ್ಲೂಕಿನ ಹಲವಾರು ಶಿವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು. ನಾಡಿಗೆ ಶಿವರಾತ್ರಿ ಹಬ್ಬವು ಸುಖ-ಶಾಂತಿ ನೆಮ್ಮದಿಯನ್ನು ತರಲಿ ಎಂದು ಹಾರೈಸಿದರು.

ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಶ್ರೀ ಹುಣಸೇಶ್ವರ, ಶ್ರೀ ಅಮೃತೇಶ್ವರ ದೇವಾಲಯ, ಕೆ.ಆರ್.ಪೇಟೆ ಪಟ್ಟಣದ ಶ್ರೀ ಮಲ್ಲಿಕಾರ್ಜುನ-ಭ್ರಮರಾಂಭ ದೇವಾಲಯ, ಸಾರಂಗಿಯ ಶ್ರೀ ರಾಮೇಶ್ವರ ಹಾಗೂ ಶ್ರೀ ಈಶ್ವರ ದೇವಾಲಯ, ವಳಗೆರೆಮೆಣಸದ ಏಕನಾಥೇಶ್ವರ ದೇವಾಲಯ, ಬಲ್ಲೇನಹಳ್ಳಿ, ಮಲ್ಲೇನಹಳ್ಳಿ, ಜಿ.ಬೊಪ್ಪನಹಳ್ಳಿ, ಬಿ.ಗಂಗನಹಳ್ಳಿಗಳ ಶಿವಾಲಯಗಳಲ್ಲಿ, ಅಂಬೇಡ್ಕರ್ನಗರ ಶ್ರೀ ಶನೇಶ್ವರ ದೇವಾಲಯ, ದೊಡ್ಡಗಾಡಿಗನಹಳ್ಳಿಯ ಅರ್ಚಕ ರಂಗೇಗೌಡರ ನೇತೃತ್ವದ ಶ್ರೀ ಶನೇಶ್ವರ ದೇವಾಲಯ, ಜೋಡಿಲಿಂಗೇಶ್ವರ ದೇವಾಲಯ, ಕಾಪನಹಳ್ಳಿಯ ಬಿಳಿಕಲ್ ಬಾರೆಯ ಶ್ರೀ ಶನೇಶ್ವರ ದೇವಾಲಯ, ಅಂಬಿಗರಹಳ್ಳಿಯ ತ್ರಿವೇಣಿ ಸಂಗಮ ಹಾಗೂ ಪುರ ಗ್ರಾಮದ ಶ್ರೀ ಮಲೆ ಮಹದೇಶ್ವರ ದೇವಾಲಯ, ಚಿಕ್ಕಗಾಡಿಗನಹಳ್ಳಿಯ ಕಾಡು ಬಸವೇಶ್ವರ ದೇವಾಲಯ, ಮೋದೂರಿನ ಶ್ರೀ ರಾಮಲಿಂಗೇಶ್ವರ ದೇವಾಲಯ, ಹೊಸಹೊಳಲು ಶ್ರೀ ಶನೇಶ್ವರ ದೇವಾಲಯ ಸೇರಿದಂತೆ ತಾಲ್ಲೂಕಿನ ಎಲ್ಲಾ ಶಿವಾಲಯಗಳಲ್ಲಿ ಸಡಗರ ಸಂಭ್ರಮದಿಂದ ಶಿವರಾತ್ರಿ ಹಬ್ಬವನ್ನು ಆಚರಣೆ ಮಾಡಲಾಯಿತು.

ಹೊಸಹೊಳಲಿನಲ್ಲಿ ಅನ್ನಧಾನ ಪಟ್ಟಣದ ಹೊಸಹೊಳಲು ವಾರ್ಡ್ ನಂ.18ರಲ್ಲಿರುವ ಶ್ರೀ ಶನೇಶ್ವರ ಸ್ವಾಮಿ ದೇವಾಲಯದ ವತಿಯಿಂದ ಶಿವರಾತ್ರಿ ಅಂಗವಾಗಿ ಜಾನಪದ ಕಲಾತಂಡಗಳೊAದಿಗೆ ಗ್ರಾಮದಲ್ಲಿ ಶನೇಶ್ವರ ಸ್ವಾಮಿಯ ಮೆರವಣಿಗೆ ಮಾಡಲಾಯಿತು. ಭಾನುವಾರ ರಾತ್ರಿ ಜಾಗರಣೆಯಲ್ಲಿ ಭಾಗವಹಿಸಿದ್ದ ಎಲ್ಲಾ ಭಕ್ತಾಧಿಗಳಿಗೆ ಸೋಮವಾರ ಅನ್ನಧಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಮಾಜ ಸೇವಕ ಹೊಸಹೊಳಲು ನಂಜುಂಡಸ್ವಾಮಿ ಅವರು ಅನ್ನಧಾನದ ಸಂಪೂರ್ಣ ಖರ್ಚುವೆಚ್ಚವನ್ನು ವಹಿಸಿಕೊಂಡು ಅನ್ನಧಾನ ಕಾರ್ಯಕ್ರಮ ನಡೆಸಿಕೊಟ್ಟರು.
– ಶ್ರೀನಿವಾಸ್ ಆರ್.
