ಕೆ.ಆರ್.ಪೇಟೆ: ಪಟ್ಟಣದ ಶ್ರೀ ಚಾಮುಂಡೇಶ್ವರಿ ರಸ್ತೆ ಬದಿ ವ್ಯಾಪಾರಿಗಳ ನೂತನ ಸಂಘವನ್ನು ಸಮಾಜ ಸೇವಕರಾದ ಆರ್.ಟಿ.ಓ ಮಲ್ಲಿಕಾರ್ಜುನ್ ರವರು ಸಂಘದ ನಾಮಫಲಕವನ್ನು ಅನಾವರಣಗೊಳಿಸಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ರಸ್ತೆ ಬದಿ ವ್ಯಾಪಾರಿಗಳು ಸಂಘಟಿತರಾಗಬೇಕು ನಿಮ್ಮ ಕಲ್ಯಾಣಕ್ಕಾಗಿ ಕೇಂದ್ರ,ರಾಜ್ಯ ಸರಕಾರಗಳು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಇವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು.

ಈ ವ್ಯಾಪಾರಿಗಳಿಗೆ ಅಸಂಘಟಿತ ಕಾರ್ಮಿಕರಿಗೆ ದೊರೆಯುವ ಸೌಲಭ್ಯಗಳು ದೊರಕಬೇಕಿದೆ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಎಲ್ಲರೂ ಒಂದಾಗಬೇಕು ಎಂದ ಅವರು ರಸ್ತೆ ಬದಿ ವ್ಯಾಪಾರ ಮಾಡುವ ವೇಳೆ ಅಪಘಾತಗಳು ಸಂಭವಿಸುತ್ತವೆ ಜೊತೆಗೆ ಪುರಸಭೆ, ಪೊಲೀಸ್ ಇಲಾಖೆಗಳಿಂದ ಅನುಮತಿ ಸಿಗದೇ ಅಕ್ರಮವಾಗಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಬೇಕಾಗುತ್ತದೆ ಇದರಿಂದ ಹಲವು ಸಮಸ್ಯೆಗಳು ಉಂಟಾಗುತ್ತವೆ.ಕೂಡಲೇ ಸ್ವಂತ ನಿವೇಶನ ಪಡೆಯಲು ಮುಂದಾಗಬೇಕು ಎಂದು ಸಲಹೆ ನೀಡಿ.ನಿಮ್ಮ ಸಂಘ ಒಗ್ಗಟ್ಟಿನಿಂದ ಇದ್ದಾಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ ಹಾಗಾಗಿ ಎಲ್ಲರೂ ಒಟ್ಟಾಗಿ ಸಂಘ ಮುನ್ನಡೆಸಿಕೊಂಡು ಹೋದಲ್ಲಿ ಸ್ವಂತ ನಿವೇಶನ, ಕಟ್ಟಡಗಳನ್ನು ನಿರ್ಮಿಸಿಕೊಳ್ಳಬಹುದು ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ತಿಳಿಸಿದರು.

ರಸ್ತೆ ಬದಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ರತ್ನಮ್ಮ ಮಾತನಾಡಿ ಕಳೆದ 30 ವರ್ಷಗಳಿಂದ ರಸ್ತೆ ಬದಿಯಲ್ಲೇ ವ್ಯಾಪಾರ ನಡೆಸುತ್ತಿದ್ದೇವೆ. ಇದರಿಂದ ಹಲವರಿಗೆ ತೊಂದರೆ ಉಂಟಾ ಗುತ್ತಿದೆ. ಸಂಬಂಧಿಸಿದ ಪುರಸಭೆ ಸಚಿವರು ಮತ್ತು ಪೊಲೀಸ್ ಇಲಾಖೆ ನಮಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಿ ಕೊಟ್ಟು ಬಡವರಿಗೆ ಒಂದು ನೆಲೆ ಕಾಣುವಂತೆ ಮಾಡಿಕೊಡ ಬೇಕೆಂದು ತಹಸೀಲ್ದಾರ್ ಅಶೋಕ್ ಅವರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಸ್.ಯು ಅಶೋಕ್,ಎ.ಎಸ್.ಐ ಚಂದ್ರೆಗೌಡ, ಜಿ.ಪಂ ಮಾಜಿ ಸದಸ್ಯ ಸುಬ್ಬಣ್ಣ,ಮುಖಂಡ ಚನ್ನವೆಂಕಟೇಶ್,ಸಂಘದ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ಅನು, ರುಕ್ಮಿಣಿ, ಮಂಜಮ್ಮ, ಸೈಯದ್ ರೋಷನ್,ಚಂದ್ರು, ಸೈಯದ್ ಮುಬಾರಕ್, ಭಾವಾಜಿ ಚಂದ್ರು,ನಾಗಮ್ಮ, ಇಂದ್ರಮ್ಮ, ಅಬ್ಸರ್ ಸೇರಿದಂತೆ,ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
