ಕೆ.ಆರ್.ಪೇಟೆ: : ತಾಲ್ಲೂಕಿನ ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ನಡೆದ ವೈಕುಂಠ ಏಕಾದಶಿ ಕಾರ್ಯಕ್ರಮದಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್, ಗ್ರಾ.ಪಂ.ಅಧ್ಯಕ್ಷ ಎ.ಸಿ.ದಿವಿಕುಮಾರ್, ಪಿಡಿಓ ಶಿಲ್ಪ, ರಾಜಸ್ವ ನಿರೀಕ್ಷಕ ಜ್ಞಾನೇಶ್, ಗ್ರಾಮ ಲೆಕ್ಕಾಧಿಕಾರಿ ಪ್ರಶಾಂತ್, ಮನ್ಮುಲ್ ನಿರ್ದೇಶಕ ಡಾಲು ರವಿ, ಶಾಸಕರ ಸಹೋದರ ಟಿಎಪಿಸಿಎಂಎಸ್ ನಿರ್ದೇಶಕರಾದ ಹೆಚ್.ಟಿ.ಲೋಕೇಶ್, ಆನೆಗೊಳ ಬಿ.ಎಂ.ಕಿರಣ್, ಜ್ಯೋತಿದೇವರಾಜು, ಗ್ರಾ.ಪಂ.ಮಾಜಿ ಅಧ್ಯಕ್ಷ ಚಿಕ್ಕೋಸಹಳ್ಳಿ ರಮೇಶ್, ಸೊಸೈಟಿ ನಿರ್ದೇಶಕರಾದ ಚೆಲುವರಾಜು, ಸೊಸೈಟಿ ಮಾಜಿ ಅಧ್ಯಕ್ಷ ಚಿಕ್ಕೋಸಹಳ್ಳಿ ಸುರೇಶ್, ಕಾರ್ಯದರ್ಶಿ ರಾಮಸ್ವಾಮಿ, ಮಾತೃಭೂಮಿ ವೃದ್ದಾಶ್ರಮದ ಮುಖ್ಯಸ್ಥ ಜೈಹಿಂದ್ ನಾಗಣ್ಣ ಸೇರಿದಂತೆ ಹಲವು ಗಣ್ಯರು, ಶ್ರೀ ಚನ್ನಕೇಶವಸ್ವಾಮಿ ದೇವಾಲಯ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಗ್ರಾಮದ ಸಾವಿರಾರು ಭಕ್ತಾದಿಗಳು ಭಾಗವಹಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕಾರ ಮಾಡಿದರು.

ಮುಂಜಾನೆ 5ಗಂಟೆಯಿಂದ ರಾತ್ರಿ 7.30ಗಂಟೆಯವರೆವಿಗೂ ಶ್ರೀ ಚನ್ನಕೇಶವಸ್ವಾಮಿಗೆ ವಿಶೇಷ ಪೂಜೆ ನಡೆಯಿತು. ವೈಕುಂಠ ಏಕಾದಶಿ ಅಂಗವಾಗಿ ದೇವರಿಗೆ ವಿವಿಧ ಬಗೆಯ ಅಭಿಷೇಕ, ಪಂಚಾಮೃತ ಅಭಿಷೇಕ ಮಾಡಲಾಯಿತು. ನಂತರ ಬಗೆ ಬಗೆಯ ಪುಷ್ಪಾಲಂಕಾರ, ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆ 11ಗಂಟೆಯಿಂದ ಸಂಜೆಯವರೆವಿಗೂ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆಯಿಂದಲೇ ವೈಕುಂಠ ಉತ್ತರ ದ್ವಾರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ರಾತ್ರಿ 7.30ಕ್ಕೆ ಗಂಟೆಗೆ ಮಹಾ ಮಂಗಳಾರತಿ ಕಾರ್ಯಕ್ರಮ ನಡೆಯಿತು. ಗಾಯಕರಾದ ಅಬಾರಾಶೆ ಚಂದ್ರಶೇಖರ್ ದೂರದರ್ಶನ-ಆಕಾಶವಾಣಿ ಗಾಯಕರಾದ ರವಿಶಿವಕುಮಾರ್, ಜಯಶ್ರೀಚಿಮ್ಮಲ್ ತಂಡದವರು ಹರಿಕಥೆ ಮತ್ತು ಭಕ್ತಿಗೀತ ಗಾಯನ ನಡೆಸಿದರು.
– ಶ್ರೀನಿವಾಸ್ ಆರ್.
