ಕೆ.ಆರ್.ಪೇಟೆ,ಫೆ.10: ವಿಶೇಷ ಚೇತನರು ಸಾಮಾನ್ಯ ಜನರಂತೆಯೇ ಸಾಧನೆ ಮಾಡಲು ಸಾಮರ್ಥ್ಯ ಹೊಂದಿದ್ದಾರೆ. ಸಾಮಾನ್ಯ ಮನುಷ್ಯರಲ್ಲಿಯೂ ಒಂದಲ್ಲ ಒಂದು ನ್ಯೂನತೆಗಳು ಇದ್ದೇ ಇರುತ್ತವೆ ಹಾಗಾಗಿ ವಿಶೇಷ ಚೇತನರು ತಮ್ಮಲ್ಲಿನ ಕೀಳರಿಮೆಯನ್ನು ದೂರ ಮಾಡಿ, ತಮಗೆ ಸಿಗುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸಾಧನೆ ಮಾಡಬೇಕು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ನಮ್ಮ ತಾಲ್ಲೂಕಿನ ಅರ್ಹ ವಿಶೇಷ ಚೇತನರಿಗೆ ಕೊಡಿಸಲು ನನ್ನ ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದರು.
ಅವರು ಕೆ.ಆರ್.ಪೇಟೆ ತಾಲ್ಲೂಕು ವಿಶೇಷ ಚೇತನರ ಕ್ಷೇಮಾಭಿವೃದ್ಧಿ ಸಂಘವನ್ನು ಪಟ್ಟಣದ ಅಂಚೆಕಚೇರಿ ಮುಂಭಾಗದ ಕಟ್ಟಡದಲ್ಲಿ ನೂತನವಾಗಿ ಆರಂಭಿಸಿರುವ ಕಚೇರಿ ಆವರಣದಲ್ಲಿ ಉದ್ಘಾಟಿಸಿ ಮಾತನಾಡಿದರು.

ವಿಶೇಷ ಚೇತನರು ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಹೊಂದಿದ್ದರೂ ಅಸಾಧಾರಣ ಪ್ರತಿಭೆ ಮತ್ತು ಛಲದಿಂದ ಸಾಧನೆ ಮಾಡುವ ವ್ಯಕ್ತಿಗಳಾಗಿದ್ದಾರೆ. ಅವರಿಗೆ ಅನುಕಂಪಕ್ಕಿAತ ಅವಕಾಶಗಳನ್ನು ಮತ್ತು ಸಮಾನ ಹಕ್ಕುಗಳ ಅವಶ್ಯಕತೆ ಇದೆ. ವಿಶೇಷ ಚೇತನರ ಅಭಿವೃದ್ಧಿಗೆ ಸರ್ಕಾರರಿ ಯೋಜನೆಗಳು ಅರ್ಹರಿಗೆ ತಲುಪಿಸಬೇಕು ಎಂದು ದ್ಯೇಯೋದ್ದೇಶದೊಂದಿಗೆ ನೂತನವಾಗಿ ನೊಂದಾಯಿಸಿ ಅಸ್ತಿತ್ವಕ್ಕೆ ಬಂದಿರುವ ಕೆ.ಆರ್.ಪೇಟೆ ತಾಲ್ಲೂಕು ವಿಶೇಷ ಚೇತನರ ಕ್ಷೇಮಾಭಿವೃದ್ಧಿ ಸಂಘವು ಯಶಸ್ವಿಯಾಗಿ ತನ್ನ ಗುರಿಯನ್ನು ಸಾಧಿಸಲಿ. ಸಂಘದ ನೂತನ ಅಧ್ಯಕ್ಷರಾದ ಎಂ.ಸೋಮು ಅವರು ಸ್ವತಃ ವಿಶೇಷ ಚೇತನ ವ್ಯಕ್ತಿಯಾಗಿದ್ದರು ಉನ್ನತ ಶಿಕ್ಷಣ ಪಡೆದು ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರನ್ನೇ ಆದರ್ಶವಾಗಿಟ್ಟುಕೊಂಡು ಮುನ್ನಡೆಯಬೇಕು ಎಂದರು. ನಿಮ್ಮ ಸಂಘದ ಜೊತೆ ನಾನು ಸದಾ ಇರುತ್ತೇನೆ. ನಿಮ್ಮ ಯಾವುದೇ ಕುಂದು-ಕೊರತೆಗಳಿದ್ದರೂ ನನ್ನ ಗಮನಕ್ಕೆ ತಂದರೆ ಅದನ್ನು ಬಗೆಹರಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.

ಗವೀಮಠದ ಕ್ಷೇತ್ರ ಶ್ರೀ ಸ್ವತಂತ್ರ ಚನ್ನವೀರಯ್ಯ ಸ್ವಾಮೀಜಿ ಅವರು ಕಾರ್ಯಕ್ರಮದ ಸಾನಿದ್ಯ ವಹಿಸಿದ್ದರು.
ಬಳಿಕ ಮಾತನಾಡಿದ ಶ್ರೀಗಳು ವಿಶೇಷ ಚೇತನರನ್ನು ಗೌರವದಿಂದ ಕಾಣವುದು. ಅವರ ಹಕ್ಕುಗಳನ್ನು ರಕ್ಷಿಸುವುದು. ಅವರ ಸಾಮರ್ಥ್ಯವನ್ನು ಗುರುತಿಸಿವುದು ನಮ್ಮ ಕರ್ತವ್ಯವಾಗಿದೆ. ಸಮಾಜವು ಅವರಿಗೆ ಸಮಾನ ಅವಕಾಶವನ್ನು ನೀಡಿದರೆ ಎಲ್ಲರಂತೆ ವಿಶೇಷ ಚೇತನರೂ ಸಾಧನೆ ಮಾಡಬಲ್ಲರು ಎಂದರು.

ತಾಲ್ಲೂಕು ವಿಶೇಷ ಚೇತನರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಸೋಮು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಸುಷ್ಮ, ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ವಿದ್ಯಾವತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಜಿತ್, ಆರೋಗ್ಯ ನಿರೀಕ್ಷಕರಾದ ಧರ್ಮೇಂದ್ರ, ಎಸ್.ಸತೀಶ್, ತಾಲ್ಲೂಕು ಟಿಎಪಿಸಿಎಂಎಸ್ ನಿರ್ದೇಶಕರಾದ ಎಂ.ಮೋಹನ್, ದಿಲೀಪ್ಕುಮಾರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ವಿ.ಜಗದೀಶ್, ಬಿ.ಇ.ಆರ್.ಟಿ ಸಂಪನ್ಮೂಲ ವ್ಯಕ್ತಿಗಳಾದ ಎಂ.ಡಿ.ಯೋಗೇಂದ್ರ, ರಾಜಶೇಖರ್, ಮುಖಂಡರಾದ ಬ್ಯಾಂಕ್ ಪರಮೇಶ್ವರ್, ತಾಲ್ಲೂಕು ವಿಶೇಷ ಚೇತನರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಅಗ್ರಹಾರಬಾಚಹಳ್ಳಿ ಜವರೇಗೌಡ, ಅಭಿಲಾಷ, ಕಾರ್ಯದರ್ಶಿ ಸಿ.ಎನ್.ಭವ್ಯ, ಖಜಾಂಚಿ ಮಡುವಿನಕೋಡಿ ಎಂ.ಎಸ್.ಗಂಗಾಧರ್, ನಿರ್ದೇಶಕರುಗಳಾದ ದ್ರುವನಾರಾಯಣ್, ಕುಮಾರಶೆಟ್ಟಿ, ಸಿ.ಟಿ.ರಾಮೇಗೌಡ, ವರ್ಧನ್ಕುಮಾರ್, ಕೃಷ್ಣಶೆಟ್ಟಿ, ಎಂ.ಕೆ.ಶ್ರೀನಿವಾಸ್, ಭಾಗ್ಯಮ್ಮ, ಹರ್ಷ, ಶಿವರಾಮೇಗೌಡ, ಪುಟ್ಟರಾಜು, ಅರುಣ್ಕುಮಾರ್, ರಂಗಸ್ವಾಮಿ, ದರ್ಶನ್, ಮರಿಯಪ್ಪ, ಹರ್ಷಿತ, ರಾಧಾ, ಹರಿಪ್ರಿಯ, ದೀಪಕಾ, ಸಂಘದ ಕಾನೂನು ಸಲಹೆಗಾರ ಪ್ರಭಾಕರ್ ಸೇರಿದಂತೆ ತಾಲ್ಲೂಕಿನ ವಿವಿಧ ಭಾಗಗಳಿಂದ ನೂರಾರು ವಿಶೇಷ ಚೇತನರು ಅತ್ಯುತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪುರಸಭಾ ಮಾಜಿ ಸದಸ್ಯ ಕೆ.ಆರ್.ನೀಲಕಂಠ ಸ್ವಾಗತಿಸಿ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಸಿ.ಎನ್.ಭವ್ಯ ವಂದಿಸಿದರು.
– ಶ್ರೀನಿವಾಸ್ ಆರ್.
