ಕೆ.ಆರ್.ಪೇಟೆ,ಫೆ.16: ಕ್ರೀಡೆಗಳು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ, ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತವೆ ಮತ್ತು ಸಾಮಾಜಿಕ ಬಾಂಧವ್ಯಗಳನ್ನು ಬಲಪಡಿಸುತ್ತವೆ ಎಂದು ಸಮಾಜ ಸೇವಕರು ಹಾಗೂ ಉದ್ಯಮಿಗಳಾದ ಹೊಸಹೊಳಲು ನಂಜುಂಡಸ್ವಾಮಿ ಹೇಳಿದರು.
ಅವರು ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಆಲೇನಹಳ್ಳಿ ಗ್ರಾಮದಲ್ಲಿ ಮೆಜೆಸ್ಟಿಕ್ ಬೆಂಕಿ ಬಾಯ್ಸ್ ವತಿಯಿಂದ ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ಹೊನಲು ಬೆಳಕಿನ ಬಾಲಿಬಾಲ್ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕ್ರೀಡೆ ಎಂದರೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುವ ಒಂದು ಚಟುವಟಿಕೆ. ಇದು ಕೇವಲ ಮನರಂಜನೆಗಾಗಿ ಮಾತ್ರವಲ್ಲ, ಬದಲಾಗಿ ಶಿಸ್ತು, ತಂಡದ ಕೆಲಸ, ನಾಯಕತ್ವ ಮತ್ತು ಸಮಯ ನಿರ್ವಹಣೆಯಂತಹ ಮೌಲ್ಯಗಳನ್ನು ಕಲಿಸುತ್ತದೆ. ಕ್ರೀಡೆಗಳು ಮಾನವನ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕ್ರೀಡೆಗಳಿಂದ ಹಲವಾರು ಪ್ರಯೋಜನಗಳನ್ನು ಹೊಂದಿವೆ. ಕ್ರೀಡೆಗಳು ದೇಹವನ್ನು ಸದೃಢವಾಗಿಡುತ್ತವೆ, ಹೃದಯದ ಆರೋಗ್ಯವನ್ನು ಸುಧಾರಿಸುತ್ತವೆ, ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಕ್ರೀಡೆಗಳು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಮತ್ತು ಮನಸ್ಸನ್ನು ಶಾಂತವಾಗಿಡುತ್ತವೆ. ತಂಡದ ಕೆಲಸವನ್ನು ಪ್ರೋತ್ಸಾಹಿಸುತ್ತವೆ, ಸ್ನೇಹವನ್ನು ಬೆಳೆಸುತ್ತವೆ, ಮತ್ತು ಸಾಮಾಜಿಕ ಕೌಶಲ್ಯಗಳನ್ನು ಸುಧಾರಿಸುತ್ತವೆ. ಶಿಸ್ತು, ಸಮಯ ನಿರ್ವಹಣೆ, ಮತ್ತು ನಾಯಕತ್ವದ ಗುಣಗಳನ್ನು ಕಲಿಸುತ್ತವೆ ಹಾಗಾಗಿ ಯುವಜನರು ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹೊಸಹೊಳಲು ನಂಜುಂಡಸ್ವಾಮಿ ಅವರು ಯುವಕರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜೆಸಿಬಿ ಸಚೀತ್, ಅಂಗಡಿ ಯೋಗೇಶ್, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ಕುಮಾರ್, ಪಂದ್ಯಾವಳಿಯ ಆಯೋಜಕರಾದ ಸಚಿನ್.ಎ.ಜೆ, ಎ.ಎಂ.ಚಂದನ್, ಧನು, ಶರತ್, ಸುಜನ್ ಚುಂಚ, ಎ.ಹೆಚ್.ಪ್ರಶಾಂತ್, ಶ್ರೇಯಸ್, ಎ.ಎಂ.ಶಿವು, ಕಾರ್ತೀಕ್ ಕೃಷ್ಣ ಸೇರಿದಂತೆ ಹಲವು ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
