ಕೆ.ಆರ್.ಪೇಟೆ : ತಾಲ್ಲೂಕಿನ ಬಿಲ್ಲೇನಹಳ್ಳಿ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಗವಿರಂಗನಾಥಸ್ಚಾಮಿಯ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಇಂದು ವಿಜೃಂಭಣೆಯಿಂದ ಸಡಗರ ಸಂಭ್ರಮದಿಂದ ನಡೆಯಿತು.ರಥೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ,ಶಾಸಕ ಎಚ್.ಟಿ ಮಂಜು,ಚಾಲನೆ ನೀಡಿದರು.
ಮಾಜಿ ಸಚಿವ ಕೆ.ಸಿ ನಾರಾಯಣಗೌಡ, ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್, ಮನ್ಮುಲ್ ನಿರ್ದೇಶಕ ಡಾಲು ರವಿ, ವಿಶೇಷ ಪೂಜೆಯಲ್ಲಿ ಭಾಗವಹಿಸಿದರು,ಗೋವುಗಳ ರಕ್ಷಕನೆಂದೇ ಖ್ಯಾತಿ ಪಡೆದಿರುವ ಈ ಬಿಲ್ಲೇನಹಳ್ಳಿ ಶ್ರೀ ಗವಿರಂಗನಾಥಸ್ವಾಮಿಗೆ ಇಂದು ಬ್ರಹ್ಮರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು ಬ್ರಹ್ಮರಥೋತ್ಸವದ ಅಂಗವಾಗಿ ಜಿಲ್ಲಾ ಹೊರ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಗವಿರಂಗನಾಥನ ತೇರು ಎಳೆದು ಭಗವಂತನ ಕೃಪೆಗೆ ಪಾತ್ರರಾದರು.

ಕಲಾತಂಡಗಳ ಮೆರಗು
ರಥೋತ್ಸವದ ಮೆರವಣಿಗೆಯಲ್ಲಿ ಜಾನಪದ ಕಲೆಗಳಾದ ಡೊಳ್ಳು ಕುಣಿತ, ಕುಣಿತ,ವೀರಭದ್ರ ನೃತ್ಯ ಗಮನ ಸೆಳೆದವು.ರಥೋತ್ಸವಕ್ಕೆ ಬಂದ ಭಕ್ತರು ಉಘೇ ರಂಗನಾಥ, ಉಘೇ ಶ್ರೀನಿವಾಸ,ಉಘೇ ವೆಂಕಟರಮಣ ಎಂದು ಭಗವಂತ ನಾಮ ಮೊಳಗಿಸಿ ರಥದ ಕಳಸಕ್ಕೆ ಹಣ್ಣು ಜವನವನ್ನು ಎಸೆದು ಭಕ್ತಿಭಾವ ಪ್ರದರ್ಶಿಸಿ ಕೃತಾರ್ಥರಾದರು.
ಶೃಂಗಾರಗೊಂಡ ಹಳ್ಳಿಕಾರ್ ತಳಿಯ ರಾಶಿಗಳ ಕಲರವ
ಶ್ರೀ ಗವಿರಂಗನಾಥ ಸ್ವಾಮಿ ಗೋರಕ್ಷಕನಾಗಿದ್ದು ರೈತರು ತಮ್ಮ ಜಾನುವಾರುಗಳಿಗೆ ಮದುವಣಗಿತ್ತಿಯಂತೆ ಶೃಂಗಾರಿಸಿ ತಮ್ಮ ಗ್ರಾಮಗಳಿಂದ ವಿವಿಧ ಸಂಸ್ಕೃತಿಕ ಕಲಾ ತಂಡಗಳಿಂದ ಅದ್ದೂರಿ ಮೆರವಣಿಗೆ ಮೂಲಕ ಬ್ರಹ್ಮರಥೋತ್ಸವಕ್ಕೆ ಮೆರಗು ತುಂಬಿದರು.
ಶ್ರೀ ಗವಿರಂಗನಾಥ ಜಾತ್ರೆಗೆ ಆಗಮಿಸಿದ್ಧ ಭಕ್ತಾಧಿಗಳಿಗೆ ದೇಗುಲದ ವತಿಯಿಂದ ಸಿಹಿಪೊಂಗಲ್, ಪುಳಿಯೋಗರೆ,ಮೊಸರನ್ನ ವಿತರಣೆ ಮಾಡಲಾಯಿತು.ಕೆ.ಆರ್ ಪೇಟೆ ಪಟ್ಟಣ ಪೊಲೀಸ್ ಠಾಣೆ ಇನ್ಸೆಕ್ಟರ್ ಸುಮಾರಾಣಿ ಹಾಗೂ ಗ್ರಾಮಾಂತರ ಇನ್ಸೆಕ್ಟರ್ ಆನಂದೇಗೌಡ ನೇತೃತ್ವದಲ್ಲಿ ಜಾತ್ರಾ ಮಹೋತ್ಸವದ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾಜಿ ಸಚಿವ ಕೆ.ಸಿ ನಾರಾಯಣಗೌಡ, ಮಂಡ್ಯ ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ, ತಹಸೀಲ್ದಾರ್, ಉಪ ವಿಭಾಗ ಅಧಿಕಾರಿ ಡಾ: ಎಸ್.ಯು ಅಶೋಕ್,ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್,ಮನ್ಮುಲ್ ನಿರ್ದೇಶಕ ಡಾಲು ರವಿ, ಎಂ ಬಿ ಹರೀಶ್, ಎಂ.ಡಿ.ಸಿ.ಸಿ ನಿರ್ದೇಶಕ ಶೀಳನೆರೆ ಅಂಬರೀಷ್, ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ಮಲ್ಲೇನಹಳ್ಳಿ ಮೋಹನ್, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ವಿಶ್ವನಾಥ್, ಪಿ.ಎಲ್.ಡಿ ಬ್ಯಾಂಕ್ ಮಾಜಿ ನಿರ್ದೇಶಕ ಕುಮಾರ್, ರಾಜಶ್ವ ನಿರೀಕ್ಷ ಹರೀಶ್, ಚಂದ್ರಕಲಾ, ಶೇಖರ್, ಇಂಜಿನಿಯರ್ ನಿರ್ಮಲೇಶ್, ಸಂತೆಬಾಚಹಳ್ಳಿ ಗ್ರಾ.ಪಂ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಸೇರಿದಂತೆ ಸಾವಿರಾರು ಭಕ್ತ ಪಾಲ್ಗೊಂದಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
