ಕೆ.ಆರ್.ಪೇಟೆ: ಮಹಾ ಭಾರತದಲ್ಲಿ ಬರುವ ಪ್ರತಿಯೊಂದು ಪಾತ್ರವು ಜೀವನ ಸಾರವನ್ನು ತಿಳಿಸುತ್ತದೆ. ಶಿಷ್ಟರ ರಕ್ಷಣೆಗಾಗಿ ದುಷ್ಟರ ಸಂಹಾರ ಶ್ರೀಕೃಷ್ಣ ಲೀಲೆಗಳು ಮಕ್ಕಳಿಗೆ ಪ್ರೇರಣದಾಯಕವಾಗಲಿದೆ ಎಂದು ಹೇಮಗಿರಿ ಬಿಜಿಎಸ್ ಶಾಖಾ ಮಠದ ಪ್ರಧಾನ ಕಾರ್ಯದರ್ಶಿಗಳಾದ ಡಾ.ಜೆ.ಎನ್ ರಾಮಕೃಷ್ಣಗೌಡ ತಿಳಿಸಿದರು.

ತಾಲ್ಲೂಕಿನ ಕಸಬಾ ಹೋಬಳಿಯ ಹೇಮಗಿರಿ ಬಿಜಿಎಸ್ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಡೆದ ಮಕ್ಕಳಿಗೆ ಕೃಷ್ಣ,ರಾಧೆ ವೇಷ-ಭೂಷಣ ಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿ ಮಾತನಾಡಿದರು. ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಮಹಾಭಾರತ, ರಾಮಾಯಣ ಹಾಗೂ ಇತಿಹಾಸ ಪುರುಷರ ಜೀವನ ಚರಿತ್ರೆಗಳನ್ನು ತಿಳಿಸುವ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಪೋಷಕರು ಹಾಗೂ ಶಿಕ್ಷಕರ ಜವಾಬ್ದಾರಿಯಾಗಿದೆ.ಶ್ರೀ ಕೃಷ್ಣ ಚರಿತ್ರೆ ಕಲಿಕೆಯಲ್ಲಿ ಮಕ್ಕಳಿಗೆ ಉತ್ತಮ ನೀತಿ ಪಾಠಗಳು ಹಾಗೂ ಕೃಷ್ಣನ ನೆನೆದರೆ ಎಲ್ಲ ಕಷ್ಟಗಳು ಪರಿಹಾರ ಗೊಳ್ಳುತ್ತವೆ ಎಂದು ಹೇಳಿದರು. ಶ್ರೀಕೃಷ್ಣ ಸತ್ಯ ಹಾಗೂ ಧರ್ಮದ ರಕ್ಷಕನಾಗಿದ್ದಾನೆ. ಹೀಗಾಗಿ ಪ್ರತಿಯೊಬ್ಬರೂ ಶ್ರೀಕೃಷ್ಣನ ಮಹತ್ವ ತತ್ವಗಳನ್ನು ಮಕ್ಕಳು ಪಾಲಿಸಬೇಕು ಎಂದರು.

ಬಳಿಕ ಮಾತನಾಡಿದ ಹಿರಿಯ ಪತ್ರಕರ್ತ ಬಳ್ಳೆಕೆರೆ ಮಂಜುನಾಥ್ ಹೇಮಗಿರಿ ಬಿಜಿಎಸ್ ಎಂದರೆ ನೆನಪಾಗುವುದೆ ಕಾರ್ಯದರ್ಶಿ ಡಾ: ಜೆ.ಎನ್ ರಾಮಕೃಷ್ಣೇಗೌಡರ ನೇತೃತ್ವದಲ್ಲಿ ಉತ್ತಮ ಸಂಸ್ಕೃರ,ಗುಣಮಟ್ಟ ಶಿಕ್ಷಣ ಜೊತೆಗೆ ಅರ್ಥಪೂರ್ಣ ಕಾರ್ಯಕ್ರಮ ಕೈಗೊಳ್ಳುವ ಕೇಂದ್ರ ಸ್ಥಳವಾಗಿದೆ.ಮಹತ್ವ ಕೃಷ್ಣ ಧರ್ಮದ ಪ್ರತೀಕ ಅಧರ್ಮ ಹೆಚ್ಚಾದ ಕಡೆ ಕೃಷ್ಣ ಅವತರಿಸಿ ಧರ್ಮ ಮರು ಸ್ಥಾಪಿಸುತ್ತಾನೆ. ಕೃಷ್ಣನ ನೆನೆದರೆ ಎಲ್ಲ ಕಷ್ಟಗಳು ಪರಿಹಾರ ಗೊಳ್ಳುತ್ತವೆ ಎಂದು ಹೇಳಿದರು. ಶ್ರೀಕೃಷ್ಣ ಸತ್ಯ ಹಾಗೂ ಧರ್ಮದ ರಕ್ಷಕನಾಗಿದ್ದಾನೆ ಎಂದರು.
ಕೃಷ್ಣ-ರಾಧೆ ವೇಷ ಭೂಷಣ ಸ್ಪರ್ಧೆಯಲ್ಲಿ ಸುಂದರ ವೇಷ ಭೂಷಣದಲ್ಲಿ ಪಾಲ್ಗೊಂಡ ಚಿಣ್ಣರಿಗೆ ಪ್ರಶಸ್ತಿ ವಿತರಿಸಲಾಯಿತು. ಮಕ್ಕಳ ಪೋಷಕರು ಕೂಡ ಕೃಷ್ಣ- ರಾಧೆ ವೇಷಧಾರಿ ನೃತ್ಯ ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಪುರಸಭಾ ಮಾಜಿ ಸದಸ್ಯ ಕೆ.ಆರ್ ನೀಲಕಂಠ,ಹಿರಿಯ ಪತ್ರಕರ್ತರಾದ ಹರಿಚರಣ್ ತಿಲಕ್, ಬಳ್ಳೆಕೆರೆ ಮಂಜುನಾಥ್,ಶ್ರೀನಿವಾಸ್ ಸಜ್ಜನ್, ಪಾಂಡುಪುರ ಕೃಷ್ಣೆಗೌಡ, ಮಧು,ರಾಜು ಸೇರಿದಂತೆ ಮಕ್ಕಳ ಪೋಷಕರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
