ಕೆ.ಆರ್.ಪೇಟೆ: ನ.27: ಪುರಸಭೆ ಮಾಜಿ ಅಧ್ಯಕ್ಷ ಕೆ.ಬಿ.ಮಹೇಶ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತ್ತು ಮಾಡಿರುವ ಆದೇಶವನ್ನು ವಾರದೊಳಗೆ ವಾಪಸ್ ಹಿಂಪಡೆಯಬೇಕು ಇಲ್ಲದಿದ್ದರೆ, ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ತಾಲ್ಲೂಕು ಕೆ.ಬಿ.ಮಹೇಶ್ ಅಭಿಮಾನಿಗಳು ತಿಳಿಸಿದರು.

ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೃಹತ್ ಸಭೆ ನಡೆಸಿ ನೂರಾರು ಕೆ.ಬಿ.ಮಹೇಶ್ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆಂದು ಸುಳ್ಳು ಆರೋಪ ಮಾಡಿ, ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಾದ ಪುರಸಭೆ ಮಾಜಿ ಅಧ್ಯಕ್ಷ ಕೆ.ಬಿ.ಮಹೇಶ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತ್ತು ಮಾಡಿರುವ ಕ್ರಮವು ಸರಿಯಾದುದ್ದಲ್ಲ, ಕೂಡಲೇ ಅವರ ಅಮಾನತು ಆದೇಶವನ್ನು ಹಿಂಪಡೆಯಬೇಕು ಎಂದು ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಸಭೆ ನಡೆಸಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಡಿ.ಗಂಗಾಧರ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದರು.
ದಲಿತ ಮುಖಂಡ ಬಸ್ತಿ ರಂಗಪ್ಪ ಮಾತನಾಡಿ ಪುರಸಭೆ ಮಾಜಿ ಅಧ್ಯಕ್ಷ ಕೆ.ಬಿ.ಮಹೇಶ್ ಅವರ ಅಮಾನತ್ತನ್ನು ಕಾಂಗ್ರೆಸ್ ಪಕ್ಷವು ಕೂಡಲೇ ವಾಪಸ್ ಪಡೆದು ತಾಲೂಕಿನ ಪಕ್ಷದ ಸಂಘಟನೆಯ ಜವಾಬ್ದಾರಿಯನ್ನು ಅಂದರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಕೆ.ಬಿ.ಮಹೇಶ್ ಅವರಿಗೆ ವಹಿಸಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ ವರಿಷ್ಠರ ಹತ್ತಿರ ಓಡಾಡಿಕೊಂಡು ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಮರೆತು ಸ್ವಾರ್ಥ ಸಾಧನೆ ಮಾಡುತ್ತಿರುವ ಕಾಂಗ್ರೆಸ್ ನಾಯಕರ ಚಾಡಿಯ ಮಾತನ್ನು ಕೇಳಿಕೊಂಡು, ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಡಿ. ಗಂಗಾಧರ್ ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಕೆ.ಬಿ.ಮಹೇಶ್ ಅವರನ್ನು ಯಾವುದೇ ಸಕಾರಣವಿಲ್ಲದೆ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಿಂದ ದೂರವಿಟ್ಟು ಅಮಾನತ್ತು ಮಾಡಿರುವುದು ಸರಿಯಾದ ಕ್ರಮವಲ್ಲ. ಸಿ.ಡಿ.ಗಂಗಾಧರ್ ಅವರು ಕೂಡಲೇ ಕಾಂಗ್ರೆಸ್ ಪಕ್ಷದಿಂದ ಮಹೇಶ್ ಅವರನ್ನು ಅಮಾನತ್ತು ಮಾಡಿರುವ ಆದೇಶವನ್ನು ವಾಪಸ್ ಪಡೆದು ಮಹೇಶ್ ಅವರಿಗೆ ಪಕ್ಷದ ಸಂಘಟನೆಯ ಜವಾಬ್ದಾರಿಯನ್ನು ವಹಿಸಬೇಕು. ಪುರಸಭೆಯ ಅಧ್ಯಕ್ಷರಾಗಿ ಹತ್ತಾರು ಜನೋಪಯೋಗಿ ಕೆಲಸಗಳನ್ನು ಮಾಡುವ ಮೂಲಕ ಶ್ರೀಸಾಮಾನ್ಯರ ನೋವಿಗೆ ಧನಿಯಾಗಿ ದುಡಿದು ಕೆಲಸ ಮಾಡುತ್ತಿರುವ ಕೆ.ಬಿ.ಮಹೇಶ್ ಅವರನ್ನು ತಾಲೂಕಿನ ಜನತೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಾಗಬೇಕೆಂದು ಬಯಸುತ್ತಿದೆ. ಮಹೇಶ್ ಅವರನ್ನು ಸಕಾರಣವಿಲ್ಲದೇ ಮಂಡ್ಯ ಜಿಲ್ಲಾ ಕೇಂದ್ರ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಚಕ್ರಪಾಣಿ ಅವರಿಗೆ ಅಡ್ಡ ಮತದಾನ ಮಾಡಲು ಕುಮ್ಮಕ್ಕು ನೀಡಿದರು ಎನ್ನುವ ಆರೋಪವೇ ಸುಳ್ಳಿನ ಕಂತೆಯಾಗಿದೆ. ಮಹೇಶ್ ಅವರು ಡಿಸಿಸಿ ಬ್ಯಾಂಕ್ ನಿರ್ದೇಶಕರ ಆಯ್ಕೆಗೆ ಮತದಾನ ಮಾಡುವ ಹಕ್ಕನ್ನೇ ಹೊಂದಿಲ್ಲ, ವಾಸ್ತವವಾಗಿ ಅವರು ಯಾವುದೇ ಸಂಘ ಸಂಸ್ಥೆಯ ಪ್ರತಿನಿಧಿಯಲ್ಲ ಇಷ್ಟಾದರೂ ಕೂಡ ಪಕ್ಷ ವಿರೋಧಿ ಚಟುವಟಿಕೆ ನಡೆಸಿದರು ಎಂದು ಸುಳ್ಳು ಆರೋಪ ಹೊರಿಸಿ , ಪಕ್ಷದಿಂದ ಅಮಾನತ್ತು ಮಾಡಿರುವುದು ಸರಿಯಲ್ಲ. ಸದ್ಯದಲ್ಲಿಯೇ ತಾಲೂಕು, ಜಿಲ್ಲಾ ಪಂಚಾಯಿತಿ ಹಾಗೂ ಪುರಸಭಾ ಚುನಾವಣೆಯು ಬರುತ್ತಿರುವ ಸಂದರ್ಭದಲ್ಲಿ ಮಹೇಶ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತ್ತು ಮಾಡಿರುವುದು ತಾಲೂಕಿನ ಜನತೆಗೆ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ತಪ್ಪು ಸಂದೇಶ ಹೋಗಿ ಕಾಂಗ್ರೆಸ್ ಪಕ್ಷಕ್ಕೆ ಹೊಡೆತ ಬೀಳುವ ಸಂಭವ ಇರುವುದರಿಂದ ವರಿಷ್ಠರು ಕೂಡಲೇ ಎಚ್ಚೆತ್ತುಕೊಂಡು ಕೆ.ಆರ್.ಪೇಟೆ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ ದುಡಿಯುತ್ತಿರುವ ಪುರಸಭೆ ಮಾಜಿ ಅಧ್ಯಕ್ಷ ಕೆಬಿ ಮಹೇಶ್ ಅವರಿಗೆ ನೈತಿಕವಾಗಿ ಶಕ್ತಿ ತುಂಬಿ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ತಾಲೂಕಿನ ಭವಿಷ್ಯದ ನಾಯಕರಾಗಿ ಹೊರ ಹೊಮ್ಮುತ್ತಿರುವ ಕೆ.ಬಿ.ಮಹೇಶ್ ಅವರಿಗೆ ನೀಡಬೇಕು ಎಂದು ಕಾರ್ಯಕರ್ತರು ಕಾಂಗ್ರೆಸ್ ವರಿಷ್ಠರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚೆಲುವರಾಯಸ್ವಾಮಿಯವರನ್ನು ಆಗ್ರಹಿಸಿದರು.
ಸಭೆಯಲ್ಲಿ ದಲಿತ ಮುಖಂಡರಾದ ಬಸ್ತಿರಂಗಪ್ಪ, ಪುರಸಭಾ ಸದಸ್ಯರಾದ ಹೊಸಹೊಳಲು ಪುಟ್ಟರಾಜು, ಕಲ್ಪನಾ ದೇವರಾಜು, ಸೌಭಾಗ್ಯ ಉಮೇಶ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್, ಮುಖಂಡರಾದ ಅರಳಕುಪ್ಪೆ ಸೋಮೇಗೌಡ, ಕೂಡಲಕುಪ್ಪೆ ಪಾಪೇಗೌಡ, ಮಾಕವಳ್ಳಿ ಸುಮಿತ್, ಕೆ.ಬಿ.ಕಾಳಯ್ಯ, ವಿಠಲಾಪುರ ಗ್ರಾ.ಪಂ.ಮಾಜಿ ಅಧ್ಯಕ್ಷ ಹರೀಶ್, ನವೀದ್ ಅಹಮದ್, ಹಾಫಿಜುಲ್ಲಾ ಷರೀಫ್, ಕೊಮ್ಮೇನಹಳ್ಳಿ ಅನಿಲ್, ಸುನಿಲ್, ಆಯಾಜ್, ನಯಾಯ್ ಸಹೋದರರು ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.
ಚಿತ್ರಶೀರ್ಷಿಕೆ:27.ಕೆ.ಆರ್.ಪಿ-02: ಕೆ.ಆರ್.ಪೇಟೆ: ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೃಹತ್ ಸಭೆ ನಡೆಸಿದ ನೂರಾರು ಕೆ.ಬಿ.ಮಹೇಶ್ ಅಭಿಮಾನಿಗಳ ಬಳಗದ ಪದಾಧಿಕಾರಿಗಳು ಮಾತನಾಡಿದರು.
-ಸುದ್ದಿಯೊಂದಿಗೆ ಶ್ರೀನಿವಾಸ್ ಕೆ ಆರ್ ಪೇಟೆ
ಇದನ್ನು ಓದಿ….

[…] ಕೆ.ಆರ್.ಪೇಟೆ:ಕೆ.ಬಿ ಮಹೇಶ್ ಅಮಾನತ್ತಿಗೆ ತೀವ… […]