ಕೆ.ಆರ್.ಪೇಟೆ : ವಿದ್ಯಾರ್ಥಿಗಳು ಭಾಲ್ಯದಿಂದಲೇ ನಿರ್ದಿಷ್ಟವಾದ ಗುರಿ ಉತ್ತಮ ಸಂಸ್ಕಾರವನ್ನು ಇಟ್ಟುಕೂಂಡು ಮುನ್ನಡೆಯಾದರೇ ಮಾತ್ರ ಜೀವನದಲ್ಲಿ ಉನತ್ತ ಮಟ್ಟದಲ್ಲಿ ಸಾಗಲು ಸಾಧ್ಯ ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ತಿಳಿಸಿದರು.
ತಾಲ್ಲೂಕಿನ ಬೂಕನಕೆರೆ ಹೋಬಳಿಯ ಕಾಪನಹಳ್ಳಿ ಗವಿಮಠದ ಮುರಾರ್ಜಿ ದೇಸಾಯಿ ವಸತಿ ಶಾಲಾ ವಾರ್ಷಿಕೋತ್ಸವ ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಕಾಪನಹಳ್ಳಿ ಗವಿಮಠ ಎಂದರೆ ಒಂದು ಶ್ರದ್ದಾಭಕ್ತಿ ಕೇಂದ್ರ ಎಂದು ಬಿಂಬಿತವಾಗಿದೆ ಅದರಲ್ಲೂ ಈ ಪುಣ್ಯ ಕ್ಷೆತ್ರದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆ ತಾಲ್ಲೂಕಿನ ಉತ್ತಮ ಸಂಸ್ಕಾರ ಸಂಸ್ಕೃತಿ ಜೊತೆಗೆ ನೂರಕ್ಕೆ ನೂರು ಫಲಿತಾಂಶ ನೀಡಿ ಅತ್ಯುತ್ತಮ ವಸತಿ ಶಾಲೆ ಎಂಬ ಹೆಗ್ಗಳಿಕೆ ಪಾತ್ರರಾಗದೇ ಇದಕ್ಕೆ ಕಾರಣ ಸರಕಾರದ ಉತ್ತಮ ಮೂಲಭೂತ ಸೌಕರ್ಯ ಶಾಲಾ ಶಿಕ್ಷಕ ವೃಂದ ಪರಿಶ್ರಮವಾಗಿದೆ.

ವಿದ್ಯಾರ್ಥಿಗಳ ಉತ್ತಮ ನಿಮ್ಮ ಭವಿಷ್ಯ ಉಜ್ವಲವಾಗಬೇಕೆಂದರೆ ವಿದ್ಯಾರ್ಥಿ ದಿಸೆಯಿಂದಲೆ ಉತ್ತಮ ಗುಣಗಳನ್ನು ಮೈಗೂಡಿಸಿಕೂಂಡು ಒಂದು ನಿರ್ದಿಷ್ಟ ಗುರಿ ಹೂಂದುವುದರ ಜೊತೆಗೆ ದುಶ್ಚಟಗಳಿಂದ ದೂರವಿದ್ದು ಸನ್ಮಾರ್ಗದಲ್ಲಿ ನೆಡೆಯುವಂತವರಾಗಿ ನಿಮ್ಮ ಪೋಷಕರ ಕನಸುಗಳನ್ನು ನೆನೆಸು ಮಾಡುವಂತರಾಗಿ.ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರವು ದೂರದೃಷ್ಟಿ ಇಟ್ಟುಕುಂಡು ಮೋರಾರ್ಜಿದೇಸಾಯಿ ಶಾಲೆಯಂತಹ ವಸತಿ ಶಾಲೆಗಳನ್ನು ತೆರೆದು ಆ ಮಕ್ಕಳಿಗೆ ಉತ್ತಮ ಕಲಿಕಾ ವಾತವರಣ ಸೃಷ್ಟಿಸಿದ್ದು ಈ ನಿಟ್ಟಿನಲ್ಲಿ ಇದರ ಉಪಯುಕ್ತತೆಯನ್ನು ಪಡೆದು ಮಕ್ಕಳು ಏನಾದರೂ ಸಾಧನೆ ಮಾಡುವ ಛಲವನ್ನು ಮೈಗೂಡಿಸಿಕೂಂಡು ಮುನ್ನುಗ್ಗಿ ನೀವು ಸಾಧನೆ ಮಾಡುವಾಗ ಎಲ್ಲಿಯೂ ಎದೆಗುಂದಬ್ಯಾಡಿ ನಿಮ್ಮ ಮಾರ್ಗದರ್ಶಕರಾಗಿ ನಿಮ್ಮ ಶಿಕ್ಷಕವೃಂದ ಪೋಷಕರು ಎಂದಿಗೂ ಇರುತ್ತಾರೆ. ಆಧುನಿಕ ಜಗತ್ತಿನಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ದಾರಿ ತಪ್ಪುತ್ತಿರುವ ಅಥವಾ ಹೆತ್ತವರನ್ನು ಕಡೆಗಣಿಸುವ ಮಕ್ಕಳಿಗೆ, ತಂದೆ-ತಾಯಿಯೇ ದೇವರು ಎಂಬ ಹರಿವು ಮೂಡಲಿ ಎಂದು ಪೋಷಕರ ಪಾದಪೂಜೆ ಮಾಡಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ತಿಳಿಸಿದರು

ಬಳಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಕಾಪನಹಳ್ಳಿ ಗವಿಮಠ ಪೀಠಧ್ಯಕ್ಷ ಚನ್ನವಿರ ಮಹಾಸ್ವಾಮೀಜಿ* ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಸ್ವಚ್ಛತೆಯನ್ನು ಅಳವಡಿಸಬೇಕು. ಅದು ಪರಿಸರ ಸ್ವಚ್ಚತೆ ಹಾಗೂ ವೈಯಕ್ತಿಕ ಸ್ವಚ್ಛತೆಯು ಆಗಿರಬೇಕು. ಕೆ ಆರ್ ಪೇಟೆ ತಾಲ್ಲೂಕಿನಲ್ಲೇ ಉತ್ತಮ ಶಾಲೆಯಾಗಿದೆ ವಿದ್ಯಾರ್ಥಿಗಳ ಬದುಕಿಗೆ ಉತ್ತಮ ವೇದಿಕೆಯಾಗಿದೆ. ಇಲ್ಲಿ ಸಿಗುವ ಎಲ್ಲಾ ಅವಕಾಶಗಳನ್ನು ವಿದ್ಯಾರ್ಥಿಗಳು ಬಳಸುವುದರ ಮೂಲಕ ತಮ್ಮ ಭವಿಷ್ಯನ್ನು ರೂಪಿಸಿಕೊಳ್ಳಬೇಕು ಮತ್ತು ಪೋಷಕರು ಇದರ ಸಂಪೂರ್ಣ ಲಾಭವನ್ನು ಪಡೆಯಬೇಕು ಎಂದ ಅವರು ಉತ್ತಮ ಶಿಕ್ಷಣ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಸಮಾಜ ಹಾಗೂ ದೇಶಕ್ಕೆ ಕೊಡುಗೆಯನ್ನು ನೀಡುತ್ತದೆ. ಶಿಕ್ಷಕರು ವಿದ್ಯಾರ್ಥಿಗಳ ಬದುಕಿನ ನಾಯಕರು. ಅವರು ವಿದ್ಯಾರ್ಥಿಗಳ ತಪ್ಪನ್ನು ತಿದ್ದಿ, ಉತ್ತಮ ಕೆಲಸಗಳಿಗೆ ಪ್ರೋತ್ಸಾಹಿಸಿ ಸರಿದಾರಿಯತ್ತ ಕೊಂಡೊಯ್ಯುವರು. ಇಂತಹ ನಾಯಕರನ್ನು ಗೌರವಿಸುವುದು ವಿದ್ಯಾರ್ಥಿಗಳ ಆದ್ಯ ಕರ್ತವ್ಯವೂ ಹೌದು.

ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಛಲ, ಆತ್ಮವಿಶ್ವಾಸ ಹಾಗೂ ಸಮಯ ಪರಿಪಾಲನೆಗೆ ಮಹತ್ವವನ್ನು ನೀಡಬೇಕು. ಗೆಲುವನ್ನು ಸ್ವಾಗತವೆಂಬಂತೆ ಪರಿಗಣಿಸಿ ಸೋಲನ್ನು ಸವಾಲಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸಿ ಕೊಳ್ಳಬೇಕು. ಬದುಕಿನಲ್ಲಿ ಏನನ್ನಾದರು ಸಾಧಿಸುವ ಗುರಿಯನ್ನು ವಿದ್ಯಾರ್ಥಿ ದೆಸೆಯಿಂದಲೇ ಹೊಂದಿರಬೇಕು, ಇದರಿಂದ ಬದುಕು ಉತ್ತಮ ಹಾಗೂ ಸರಳ ಸುಂದರವಾಗುತ್ತದೆ.ಬಡಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಬೇಕೆಂದು ಸರ್ಕಾರ ಹಲವಾರು ಸೌಲಭ್ಯಗಳನ್ನು ಒದಗಿಸಿದ್ದು ಇದ್ದನ್ನು ಸದುಪಯೋಗಿಸಿಕೂಂಡು ವಿದ್ಯಾರ್ಥಿಗಳು ದೇಶಕ್ಕೆ ಮಾದರಿ ವ್ಯಕ್ತಿಗಳಾಗಿ ಎಂದು ವಿದ್ಯಾರ್ಥಿಗಳಿಗೆ ಆಶೀರ್ವಾಚನ ನೀಡಿದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಕಾಪನಹಳ್ಳಿ ಗವಿಮಠ ಪೀಠಧ್ಯಕ್ಷರಾದ ಶ್ರೀ ಚನ್ನವಿರ ಮಹಾಸ್ವಾಮಿಜಿ ಅವರ ದಿವ್ಯ ಸಾನಿಧ್ಯದಲ್ಲಿ ಶಾಲಾ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ತಮ್ಮ ಪೋಷಕರ ಪಾದಪೂಜೆ ಮಾಡಿದರು.ಬಳಿಕ ಶಾಲಾ ವಿದ್ಯಾರ್ಥಿಗಳು ವೈವಿದ್ಯಮಯ ನೃತ್ಯ ವೈಭವ,ಜಾನಪದ ನೃತ್ಯಗಳನ್ನು ವಿದ್ಯಾರ್ಥಿಗಳು ಅದ್ಭುತವಾಗಿ ಪ್ರದರ್ಶಿಸಿ ಕಾರ್ಯಕ್ರಮಕ್ಕೆ ಮೆರಗು ತುಂಬಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲರಾದ ಸಿದ್ದರಾಜು,ಅನಿಲ್,ಅಂಬೇಡ್ಕರ್ ವಸತಿ ಶಾಲೆ ಪ್ರಾಂಶುಪಾಲ ರಾಜಣ್ಣ,ಗವಿಮಠ ಮುರಾರ್ಜಿ ದೇಸಾಯಿ ವಸತಿ ಶಾಲಾ ಪ್ರಾಂಶುಪಾಲ ಪ್ರಸನ್ನ,ಶಿಕ್ಷಕರಾದ ನಾಗೇಂದ್ರ, ಮಮತಾ, ರವಿ, ವೇಣು, ಮೋಸಶ್ ,ಪುರುಷೋತ್ತಮ್, ಹೇಮಚಂದ್ರ, ದ್ರಾಕ್ಷಿಯಿಣಿ, ಮಧು, ಸತೀಶ್, ಜ್ಯೋತಿ, ಆಶಾ, ಕಾವ್ಯ, ಹಂಸ, ದಯಾನಂದ್, ಕೀರ್ತನ,ಶಾಲಾ ಶಿಕ್ಷಕವೃಂದ, ಪೋಷಕರು ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
