ಕೆ.ಆರ್.ಪೇಟೆ,ಮಾ.07: ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮಾಚಗೋನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸುಂದರಮ್ಮರವಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅದೇ ರೀತಿ ಉಪಾಧ್ಯಕ್ಷರಾಗಿ ಪ್ರಭಾವತಿ ಸ್ವಾಮಯ್ಯ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನ ಬಯಸಿ ಸುಂದರಮ್ಮ ರವಿ, ಉಪಾಧ್ಯಕ್ಷ ಸ್ಥಾನ ಬಯಸಿ ಪ್ರಭಾವತಿ ಸ್ವಾಮಯ್ಯ ಅವರನ್ನು ಹೊರತು ಪಡಿಸಿ ಬೇರೆ ಯಾವುದೇ ನಿರ್ದೇಶಕರು ನಾಮಪತ್ರ ಸಲ್ಲಿಸದೇ ಇರುವ ಕಾರಣ ಅವಿರೋಧ ಆಯ್ಕೆ ನಡೆಯಿತು ಎಂದು ಚುನಾವಣಾಧಿಕಾರಿ ಕೆ.ಹೇಮಲತಾ ತಿಳಿಸಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಡೇರಿ ನಿರ್ದೇಶಕರಾದ ಭಾರತೀಯೋಗೇಂದ್ರ, ರೇಣುಕಾಮಂಜು, ನಿಂಗಮ್ಮಸೋಮೇಗೌಡ, ವರಲಕ್ಷ್ಮಿಶಿವರಾಮ್, ನೇತ್ರಾರಾಮೇಗೌಡ, ಯಶೋಧರಮೇಶ್, ಮಣಿಯಮ್ಮ ಶಿವಲಿಂಗೇಗೌಡ, ಪ್ರಮೀಳಾರಾಮಚಂದ್ರು, ನೇತ್ರಾನಾರಾಯಣಚಾರ್ ಭಾಗವಹಿಸಿದ್ದರು.
ನೂತನ ಅಧ್ಯಕ್ಷರಾದ ಸುಂದರಮ್ಮ ರವಿ ಮತ್ತು ಉಪಾಧ್ಯಕ್ಷರಾದ ಪ್ರಭಾವತಿ ಸ್ವಾಮಯ್ಯ ಅವರನ್ನು ಗ್ರಾಮ ಪಂಚಾಯಿತಿ ಸದಸ್ಯ ಎಂ.ಕೆ.ಯೋಗೇಂದ್ರ ಅಭಿನಂದಿಸಿ ಮಾತನಾಡಿ ನಮ್ಮ ಕ್ಷೇತ್ರದ ಶಾಸಕರಾದ ಹೆಚ್.ಟಿ.ಮಂಜು ಅವರ ಪೂರ್ಣ ಸಹಕಾರದೊಂದಿಗೆ ನಮ್ಮ ಡೇರಿಯ ಎಲ್ಲಾ 11ಸ್ಥಾನಮಗಳಲ್ಲಿಯೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯ ಗಳಿಸಿದ್ದರು. ಇಂದು ನಡೆದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಶಾಸಕರ ಸಲಹೆಯಂತೆ ಮೊದಲ ಅವಧಿಗೆ ಸಂಘದ ನೂತನ ಅಧ್ಯಕ್ಷರಾದ ಸುಂದರಮ್ಮರವಿ ಹಾಗೂ ಉಪಾಧ್ಯಕ್ಷರಾದ ಪ್ರಭಾವತಿ ಸ್ವಾಮಯ್ಯ ಅವರನ್ನು ಆಯ್ಕೆ ಮಾಡಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ನೂತನ ಅಧ್ಯಕ್ಷರು-ಉಪಾಧ್ಯಕ್ಷರು ಹಾಗೂ ನಿರ್ದೇಶಕರು ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಗುಣಮಟ್ಟದ ಹಾಲನ್ನು ಮಾತ್ರ ಖರೀದಿ ಮಾಡಬೇಕು. ಕಲಬರಕೆ ಹಾಲನ್ನು ಯಾವುದೇ ಮುಲಾಜಿಗೆ ಒಳಗಾಗದೇ ಕಡ್ಡಾಯವಾಗಿ ತಿರಸ್ಕರಿಸಬೇಕು ಈ ಮೂಲಕ ಸಂಘದ ಅಭಿವೃದ್ಧಿಗೆ ನೂತನ ಆಡಳಿತ ಮಂಡಳಿ ಶ್ರಮಿಸಬೇಕು ಎಂದು ಸಲಹೆ ನೀಡಿದರು. ಆದಷ್ಟು ಬೇಗ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ನೂತನ ಅಧ್ಯಕ್ಷರು-ಉಪಾಧ್ಯಕ್ಷರು ಹಾಗೂ ಎಲ್ಲಾ ನಿರ್ದೇಶಕರು ಶ್ರಮಿಸಬೇಕು. ಇದಕ್ಕೆ ಕ್ಷೇತ್ರದ ಶಾಸಕರಾದ ಹೆಚ್.ಟಿ.ಮಂಜಣ್ಣ ಅವರ ಸಹಕಾರ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಗ್ರಾಮದ ಮುಖಂಡರಾದ ಗ್ರಾ.ಪಂ.ಸದಸ್ಯ ಎಂ.ಕೆ.ಯೋಗೇಂದ್ರ, ಮುಖಂಡರಾದ ರಮೇಶ್, ರೇವಣ್ಣ, ಆರ್.ಕುಮಾರ್, ಅನಿಲ್ಕುಮಾರ್, ಜಗದೀಶ್, ರವಿಕುಮಾರ್, ಶ್ರೀಧರ್, ದಿಲೀಪ್, ಯೋಗೇಂದ್ರ, ಸಣ್ಣಮರೀಗೌಡ, ಹರೀಶ್, ಎಂ.ಎಸ್.ಸುಧಾಕರ್, ಸಚಿನ್, ನಾರಾಯಣಚಾರ್, ಸೋಮು, ಅಶೋಕ್, ವಿಜಯೇಂದ್ರ, ಮನು, ಚೇತನ್, ಶಿವಮೂರ್ತಿ, ದಿನೇಶ್, ಮಂಜು, ಎಂ.ಕೆ.ವೆಂಕಟೇಶ್, ಸೇರಿದಂತೆ ಅನೇಕ ಮುಖಂಡರು ಅಭಿನಂದಿಸಿದರು.
ನೂತನ ಅಧ್ಯಕ್ಷೆ ಸುಂದರಮ್ಮ ರವಿ ಮಾತನಾಡಿ ನನ್ನನ್ನು ನಮ್ಮ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡಿದ ಶಾಸಕರಾದ ಹೆಚ್.ಟಿ.ಮಂಜಣ್ಣ ಹಾಗೂ ಎಲ್ಲಾ ನಿರ್ದೇಶಕರುಗಳಿಗೆ ಗ್ರಾಮದ ಮುಖಂಡರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನನಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
- ಶ್ರೀನಿವಾಸ್ ಆರ್
