ಕೆ.ಆರ್.ಪೇಟೆ,ಮಾ.30: ದೇವಾಲಯಗಳು ಕೇವಲ ಪೂಜಾ ಸ್ಥಳಗಳಲ್ಲದೆ, ನಮ್ಮ ಶ್ರೀಮಂತ ಸಂಸ್ಕೃತಿ, ಪರಂಪರೆ ಮತ್ತು ವಾಸ್ತುಶಿಲ್ಪದ ಪ್ರತಿಬಿಂಬಗಳಾಗಿವೆ. ಸಮಾಜದಲ್ಲಿ ಧರ್ಮ ಜಾಗೃತಿ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವಲ್ಲಿ ದೇವಾಲಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿ ದೇವಾಲಯಗಳ ಜೀರ್ಣೋದ್ದಾರ ಮತ್ತು ನಿರ್ವಹಣೆ ಅತ್ಯಗತ್ಯ ಎಂದು ಬೆಂಗಳೂರಿನ ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿಶ್ಚಲಾನಂದನಾಥಸ್ವಾಮೀಜಿ ಹೇಳಿದರು.
ಅವರು ಕೆ.ಆರ್.ಪೇಟೆ ತಾಲ್ಲೂಕಿನ ಶೀಳನೆರೆ ಹೋಬಳಿಯ ಬೊಮ್ಮನಾಯಕನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಗ್ರಾಮ ದೇವತೆಗಳಾದ ಶ್ರೀ ಮಂಚಮ್ಮ ಮತ್ತು ಶ್ರೀ ಮಾಸ್ತಮ್ಮ ದೇವಾಲಯಗಳ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಯುವ ಪೀಳಿಗೆಯನ್ನು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ದೂರವಿರಿಸಲು ಮತ್ತು ಧರ್ಮದ ಕಡೆಗೆ ಸೆಳೆಯಲು ಇಂತಹ ದೇವಾಲಯಗಳ ಜೀರ್ಣೋದ್ದಾರ ಅಗತ್ಯವಾಗಿದೆ. ದೇವರು ಕಣ್ಣಿಗೆ ಕಾಣುವುದಿಲ್ಲ. ಆದರೆ ನಿರಾಕಾರ ಸ್ವರೂಪಿಯಾದ ದೇವರು ಇಡೀ ಜಗತ್ತನ್ನು ನಿರ್ವಹಣೆ ಮಾಡುತ್ತಿದ್ದಾನೆ. ದೇವರ ಅನುಗ್ರಹ ಇಲ್ಲದೇ ಜಗತ್ತು ಒಂದು ದಿನವೂ ಇರುವುದಿಲ್ಲ. ದೇವರು ಇಲ್ಲ ಎಂದು ಕೆಲವರು ವಾದ ಮಾಡುತ್ತಾರೆ ಅದು ಸರಿಯಲ್ಲ. ದೇವರು, ಧರ್ಮದ ಆಚರಣೆ ಇಲ್ಲದೇ ಇದ್ದರೆ ಇಡೀ ಸಮಾಜವು ಅಶಾಂತಿಯ ತಾಣವಾಗುತ್ತದೆ. ಇಂದು ಕೊಲ್ಲಿ ದೇಶಗಳಲ್ಲಿ ನಡೆಯುತ್ತಿರುವ ಯುದ್ದವು ನಿಲ್ಲಬೇಕಾದರೆ ದೇವರು, ಧರ್ಮದ ಅನುಸರಿಸುವುದು ಅಗತ್ಯವಾಗಿದೆ. ಆದರೆ ಧರ್ಮದ ಅಂಧಾಕಾರದಲ್ಲಿ ಮುಳುವುದು ಯುದ್ದಕ್ಕೆ ಕಾರಣವಾಗುತ್ತದೆ. ಭಾರತ ದೇಶದ ಹಿಂದೂ ಧರ್ಮವು ಇಡೀ ವಿಶ್ವದಲ್ಲಿಯೇ ಸರ್ವಶ್ರೇಷ್ಠ ಧರ್ಮವಾಗಿದೆ. ಇಂತಹ ಧರ್ಮ ಉಳಿದು ಬೆಳೆಯಬೇಕಾದರೆ ದೇವಾಲಯಗಳ ಅಭಿವೃದ್ಧಿಯಾಗಬೇಕು. ಧಾರ್ಮಿಕ ಚಟುವಟಿಕೆಗಳ ಹೆಚ್ಚು ಹೆಚ್ಚು ನಡೆಯಬೇಕು. ಹಬ್ಬ ಹರಿದಿನಗಳು, ಜಾತ್ರೆ ರಥೋತ್ಸವಗಳು ನಿರಂತರವಾಗಿ ನಡೆಯಬೇಕು ಎಂದು ಶ್ರೀಗಳು ಸಲಹೆ ನೀಡಿದರು.

ಶಾಸಕ ಹೆಚ್.ಟಿ.ಮಂಜು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಮಾತನಾಡಿ ದೇವಾಲಯಗಳ ಜೀರ್ಣೋದ್ದಾರ ಮಾಡುವುದು ಗ್ರಾಮದ ಜನರ ಸುಖ-ಸಮೃದ್ಧಿ ಹಾಗೂ ಮನಃಶಾಂತಿಯ ಸಂಕೇತವಾಗಿದೆ. ಹಾಗಾಗಿ ಗ್ರಾಮಸ್ಥರೆಲ್ಲರೂ ಸೇರಿ ಶ್ರೀ ಮಂಚಮ್ಮ ಮತ್ತು ಶ್ರೀ ಮಾಸ್ತಮ್ಮ ದೇವಾಲಯಗಳನ್ನು ಜೀರ್ಣೋದ್ದಾರ ಕೈಗೊಂಡಿರುವುದು ಶ್ಲಾಘನೀಯ. ಇಂತಹ ಪುಣ್ಯದ ಕೆಲಸ ಮಾಡಿರುವ ಬೊಮ್ಮನಾಯಕನಹಳ್ಳಿ ಗ್ರಾಮಸ್ಥರ ಕಾರ್ಯ ಶ್ಲಾಘನೀಯವಾದುದು. ಈ ಗ್ರಾಮವನ್ನು ನನ್ನ ಹುಟ್ಟೂರಿನ ಮಾದರಿಯಲ್ಲಿಯೇ ಸಮಗ್ರ ಅಭಿವೃದ್ಧಿಗೆ ನನ್ನ ಶಕ್ತಿ ಮೀರಿ ಶ್ರಮಿಸುತ್ತೇನೆ. ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರ ಮೂಲಕ ಕಾರ್ಪೋರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ಯೋಜನೆ( ಸಿ.ಎಸ್.ಆರ್) ಫಂಡ್ ತಂದು ತಾಲ್ಲೂಕಿನಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಕೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮುನೇಶ್ವರ ದೇವಾಲಯದ ಅರ್ಚಕ ಶ್ರೀ ನಾಗರಾಜಸ್ವಾಮಿ, ಉದ್ಯಮಿ ರಾಮಕೃಷ್ಣ, ಶಾಸಕರ ಧರ್ಮಪತ್ನಿ ರಮಾಮಂಜು, ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕ ರಾಮೇಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಹೆಚ್.ಟಿ.ಮಂಜು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದ ಚಟ್ಟೇನಹಳ್ಳಿ ನಾಗರಾಜು, ಬೇಲದಕೆರೆ ಪಾಪೇಗೌಡ, ಭೈರಾಪುರ ಹರೀಶ್, ಬೇಲದಕೆರೆ ಮರೀಗೌಡ, ದೀಪು, ಅಶ್ವತ್, ಶ್ರೀ ಮಂಚಮ್ಮ ಮತ್ತು ಶ್ರೀ ಮಾಸ್ತಮ್ಮ ದೇವಾಲಯ ಸಮಿತಿ ಟ್ರಸ್ಟ್ ಅಧ್ಯಕ್ಷ ಬಿ.ಆರ್.ಬವಸರಾಜು, ಉಪಾಧ್ಯಕ್ಷ ಬಿ.ಎಸ್.ಹರೀಶ್, ಖಜಾಂಚಿ ಪಿ.ಧನಂಜಯ, ಗೌರವಾಧ್ಯಕ್ಷ ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಚಂದ್ರೇಗೌಡ, ಸಂಘಟನಾ ಕಾರ್ಯದರ್ಶಿ ಬಿ.ಆರ್.ಮಂಜುನಾಥ್, ಟ್ರಸ್ಟಿಗಳಾದ ಜೆ.ಪ್ರಕಾಶ್, ಬಿ.ಕೆ.ಯೋಗೇಶ್, ಸಂಚಾಲಕ ಪ್ರೇಮಕುಮಾರ್, ಗ್ರಾಮದ ಮುಖಂಡರಾದ ದೇವೇಗೌಡ, ಸಿದ್ದೇಗೌಡ, ನಿಂಗೇಗೌಡ, ರಮೇಶ್ಗೌಡ, ಬಿ.ಡಿ.ರಾಮೇಗೌಡ, ತ್ಯಾಗರಾಜು, ಕುಂಟರಾಮೇಗೌಡ, ರಾಮೇಗೌಡ, ಗೋವಿಂದೇಗೌಡ, ದೇವರಾಜೇಗೌಡ, ಕರೀಗೌಡ, ಧನಂಜಯ, ಪುಟ್ಟೇಗೌಡ, ನಿ.ಯೋಗೇಶ್, ನಿ.ಸತೀಶ್, ಪರಮೇಶ್, ಮಂಜೇಗೌಡ, ಯುವ ಮುಖಂಡರಾದ ಶ್ರೀಕಾಂತ್, ಅಭಿ, ಪ್ರಸನ್ನ, ರವಿ, ಶಿವರಾಮೇಗೌಡ, ನಟರಾಜ್, ಮಹೇಂದ್ರ, ದಿಲೀಪ್, ಚೇತನ್, ಹರೀಶ್, ಪ್ರಕಾಶ್, ಕೆ.ಪಿ.ಯೋಗೇಶ್, ಸತೀಶ್, ಬಿ.ಜೆ.ರವಿ, ಬಿ.ವಿ.ನವೀನ್, ಮಲ್ಲೇಶ್, ದೀಪು, ಶ್ರೀನಿವಾಸ್, ರಾಘವೇಂದ್ರ, ಶಿವಕುಮಾರ್, ಮಂಜು, ಮಂಜೇಗೌಡ, ವಿಜಯಕುಮಾರ್, ತ್ಯಾಗರಾಜು, ಹರೀಶ್.ಬಿ.ಆರ್, ಪುಟ್ಟರಾಜು, ಮಂಜೇಶ್, ಶಿವು ಸೇರಿದಂತೆ ಬೊಮ್ಮನಾಯಕನಹಳ್ಳಿ ಗ್ರಾಮದ ಸುತ್ತಮುತ್ತಲಿನ ಗ್ರಾಮದ ಮುಖಂಡರು, ಯುವಕರು, ಮಹಿಳಾ ಸಂಘಗಳ ಪದಾಧಿಕಾರಿಗಳು, ದೇವರ ಒಕ್ಕಲಿನ ಕಳಸ್ತವಾಡಿ, ಸಿದ್ದಲಿಂಗಪುರ, ಅರಳಕುಪ್ಪೆ, ಗೋಣಿಬೀಡು ಗ್ರಾಮಗಳ ಮುಖಂಡರುಗಳು ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್.
