ಕೆ.ಆರ್.ಪೇಟೆ: ಸಂಘದ ಎಲ್ಲ ಸದಸ್ಯರ ಸಹಕಾರದೊಂದಿಗೆ ಸಂಘವು ಆರ್ಥಿಕವಾಗಿ ಪ್ರಗತಿ ಹೊಂದುತ್ತಿದ್ದು, ತಮ್ಮೆಲ್ಲರ ಸಹಕಾರವೇ ಸಂಘದ ಪ್ರಗತಿಗೆ ಅಡಿಪಾಯ ಎಂದು ಬಿರುವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಟನಹಳ್ಳಿ ಅನಿಲ್ ಕುಮಾರ್ ಹೇಳಿದರು.
ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬಿರುವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಂಘವನ್ನು ಲಾಭದತ್ತ ಕೊಂಡೊಯ್ಯಲು ಸರ್ವ ಸದಸ್ಯರ ಸಹಕಾರ ಅತಿಮುಖ್ಯ. ಸೂಪರ್ ಮಾರ್ಕೆಟ್ ವ್ಯವಸ್ಥೆಗೆ ಪೂರಕವಾದ ನೂತನ ಕಟ್ಟಡ ನಿರ್ಮಾಣದ ಚಿಂತನೆ ಹೊಂದಲಾಗಿದೆ.ಸದಸ್ಯತ್ವ ಹೆಚ್ಚಳಕ್ಕೆಕೂಡ ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ. ಸದಸ್ಯರಿಗೆ ಉಂಟಾಗುವ ಸಮಸ್ಯೆಗಳನ್ನು ನಿವಾರಿಸಲು ಆಡಳಿತ ಮಂಡಳಿ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದರು.
ಸಭೆಯಲ್ಲಿ ಸಂಘವನ್ನು ಲಾಭದತ್ತ ಕೊಂಡೊಯ್ಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತಾದ ವಿಷಯಗಳ ಬಗ್ಗೆ ಸದಸ್ಯರಿಂದ ಸಲಹೆ ಸೂಚನೆ, ಚರ್ಚೆ ನಡೆದವು ವ್ಯಾಪಾರ ಯೋಜನೆಗಳು, ಸದಸ್ಯರು ಸಕ್ರಿಯ ವಹಿವಾಟು ನಡೆಸುವುದು, ಸದಸ್ಯತ್ವ ನೀಡುವುದು ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ ಚರ್ಚೆಗಳು ನಡೆದ ಬಳಿಕ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳು ಎಸ್.ಎಸ್.ಎಲ್.ಸಿ ನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಬಿ.ಎಲ್ ದೇವರಾಜು, ಬೀರುವಳ್ಳಿ ಸೊಸೈಟಿ ಉಪಾಧ್ಯಕ್ಷೆ ಜವರಮ್ಮ, ನಿರ್ದೇಶಕರಾದ ದೇವೇಗೌಡ, ನಾಗರಾಜೇಗೌಡ, ನಟೇಶ್, ಜಗದೀಶ್,ಕುಮಾರ್, ಬಿ.ಎಸ್ ಕುಮಾರ್,ಜಯಮ್ಮ, ಇಂದ್ರೇಶ್, ಜವರಯ್ಯ,ಅಶ್ವಿನಿ ಕುಮಾರ್,ಕಾಂಗ್ರೆಸ್ ಅಭ್ಯರ್ಥಿ ಶಶಿಧರ್ ಸಂಗಾಪುರ,ಕೆ.ಟಿ ಗಂಗಾಧರ್, ಎನ್.ಎಂ ನಂಜೇಗೌಡ,ಕೆ ಡಿ ಪಿ ಸದಸ್ಯ ಬಿರುವಳ್ಳಿ ಆಕಾಶ್, ಕಾಂಗ್ರೆಸ್ ಮುಖಂಡ ರವೀಂದ್ರ, ಬಿಕನಹಳ್ಳಿ ಹಿರೇಗೌಡ,ಸಂಘದ ಕಾರ್ಯದರ್ಶಿ ಎಸ್.ಕೆ ಸತೀಶ್, ಗುಮಸ್ತ ಬಿ.ಎನ್ ಮಂಜುನಾಥ್, ಎನ್.ಸಿ ಕಾರ್ತಿಕ್. ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
