ಕೆ.ಆರ್.ಪೇಟೆ: ಕನ್ನಡ ಚಿತ್ರರಂಗದನಟ ಸಾರ್ವಭೌಮ ಖ್ಯಾತ ಹಿರಿಯ ನಾಯಕನಟ ದಿ: ಡಾ ರಾಜಕುಮಾರ್ ಅವರ 97ನೇ ಹುಟ್ಟುಹಬ್ಬದ ಪ್ರಯುಕ್ತ ಕೆ.ಆರ್.ಪೇಟೆ ತಾಲೂಕು ಡಾ:ರಾಜಕುಮಾರ್ ಕಲಾ ಸಂಘದಿಂದ ಸರಳವಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಪುರಸಭಾ ಕಟ್ಟಡದಲ್ಲಿರುವ ಕಲಾ ಸಂಘದ ಕಚೇರಿಯಲ್ಲಿ ಡಾ: ರಾಜಕುಮಾರ್ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಹಾಗೂ ಹೂಮಾಲೆ ಹಾಕಿ ನೆಚ್ಚಿನ ನಟನನ್ನು ಸ್ಮರಿಸಿದರು.
ಬಳಿಕ ಮಾತನಾಡಿದ ಡಾ: ರಾಜಕುಮಾರ್ ಕಲಾ ಸಂಘದ ಅಧ್ಯಕ್ಷ ಆರ್.ಕೆ ದೇವರಾಜು ನಮ್ಮ ನೆಚ್ಚಿನ ನಾಯಕ ನಟ ಇವತ್ತು ನಮ್ಮ ಜೊತೆಗಿಲ್ಲದೇ ಇರಬಹುದು. ಅವರು ನಟಿಸಿರುವ ಪ್ರತಿಯೊಂದು ಅದ್ಭುತ ನಟನೆ ಪ್ರತಿ ಅಭಿಮಾನಿಯ ಮನದಲ್ಲಿ ಕನ್ನಡ ನೆಲದ ಕಣಕಣದಲ್ಲೂ ಅವರಹೆಸರು ಉಸಿರಿದೆ. ದಶಮಾನಗಳ ಹಿಂದೆ ಕನ್ನಡ ಸಿನಿಮಾರಂಗದ ಮೇರು ಪ್ರತಿಭೆ ಡಾ: ರಾಜಕುಮಾರ್ ಅವರ ಸಮಾಜ ಮುಖಿ ಸಮಾಜದ ಸಂದೇಶದ ನಟನೆಯ ಇಂದಿಗೂ ಮಾದರಿ ಯಾಗಿದೆ. ಅದೇ ಕಾರಣದಿಂದ ರಾಜ ಕುಮಾರ್ ಅಂದಿನಿಂದ ಇಂದಿನವರೆಗೆ ಎಲ್ಲಾ ತಲೆಮಾರುಗಳಿಗೂ ಪ್ರೇರಣೆಯಾಗುತ್ತಲೇ ಬಂದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕೆ.ಆರ್.ಪೇಟೆ ತಾಲ್ಲೂಕು ಡಾ. ರಾಜಕುಮಾರ್ ಸಂಘದ ಉಪಾಧ್ಯಕ್ಷರಾದ ಪಿ.ಬಿ ಮಂಚನಹಳ್ಳಿ ಕುಮಾರ್, ಶ್ರೀ ಭುವನೇಶ್ವರಿ ಕಲಾ ಸಂಘದ ಅಧ್ಯಕ್ಷ ಕೆ. ಎನ್ ತಮ್ಮಯ್ಯ, ಡ್ರಾಮಾ ಮಾಸ್ಟರ್ ಅನಿಲ್, ಶಿವಾಜಿ,ಕಲಾವಿದರಾದ ಸಿ.ಎಚ್ ನಾಗರಾಜು, ಮಾದೇವಣ್ಣ, ಲಿಂಗಪುರ ಸತೀಶ್,ಅಂಚೆನಹಳ್ಳಿ ಪಟೇಲ್ ಪುಟ್ಟಸ್ವಾಮಿ, ಹೊಸ ಹೊಳಲು ರಘು ಸೇರಿದಂತೆ ಉಪಸ್ಥಿತರಿದ್ದರು.
- ಮನು ಮಾಕವಳ್ಳಿ ಕೆ ಆರ್ ಪೇಟೆ

[…] ಕೆ.ಆರ್.ಪೇಟೆ- ದಿ.ಡಾ|| ರಾಜಕುಮಾರ್ ಹುಟ್ಟು ಹಬ… […]