ಕೆ.ಆರ್.ಪೇಟೆ,ಫೆ.21: ಪಟ್ಟಣದಲ್ಲಿ 6ನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯವನ್ನು ಆರಂಭಿಸಬೇಕೆಂದು ಒತ್ತಾಯಿಸಿ ಕೆ.ಆರ್.ಪೇಟೆ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಹಿರಿಯ-ಕಿರಿಯ ವಕೀಲರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಹೋರಾಟವು ಎರಡನೇ ದಿನವೂ ಯಶಸ್ವಿಯಾಗಿ ಬೆಳಿಗ್ಗೆಯಿಂದ ಸಂಜೆಯವರೆವಿಗೂ ನಡೆಯಿತು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಮ್.ಆರ್.ನಾಗೇಗೌಡ, ಪ್ರಧಾನ ಕಾರ್ಯದರ್ಶಿ ಎಸ್.ಜೆ.ಮಂಜೇಗೌಡ, ಉಪಾಧ್ಯಕ್ಷ ಪುರುಷೋತ್ತಮ್, ಖಜಾಂಚಿ ಪ್ರಸನ್ನಕುಮಾರ್.ವಿ, ಜಂಟಿ ಕಾರ್ಯದರ್ಶಿ ದೊಡ್ಡಯ್ಯ ನೇತೃತ್ವದಲ್ಲಿ ನೂರಾರು ವಕೀಲರು ಎರಡನೇ ದಿನವಾದ ಇಂದೂ ಸಹ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಕೆ.ಆರ್.ಪೇಟೆ ನ್ಯಾಯಾಲಯಕ್ಕೆ ಸರ್ಕಾರದಿಂದ 6ನೇ ಹೆಚ್ಚುವರಿ ಜಿಲ್ಲಾ & ಸತ್ರ ನ್ಯಾಯಾಲಯ ಕಾರ್ಯಾರಂಭ ಮಾಡಲು ಈಗಾಗಲೇ ಸೂಕ್ತವಾದ ಕಟ್ಟಡ ಲಭ್ಯವಿರುತ್ತದೆ.
ಈಗಾಗಲೇ ಮಾನ್ಯ ರಿಜಿಸ್ಟಾರ್ ಜನರಲ್, ಮಾನ್ಯ ಗೌರವಾನ್ವಿತ ಉಚ್ಚ ನ್ಯಾಯಾಲಯ, ಬೆಂಗಳೂರು ರವರು ಉಲ್ಲೇಖ (1) ರ ಪತ್ರದಲ್ಲಿ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೃಷ್ಣರಾಜಪೇಟೆ ಕಾರ್ಯನಿರ್ವಹಣೆಗಾಗಿ ಹುದ್ದೆಗಳನ್ನು ಸೃಷ್ಟಿಸಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಗೌರವಾನ್ವಿತ ಉಚ್ಚ ನ್ಯಾಯಾಲಯ ಕರ್ಣಾಟಕಕ್ಕೆ ಸಲ್ಲಿಸಲು ಮಾನ್ಯ ಫನ ಸರ್ಕಾರದ ಆರ್ಥಿಕ ಇಲಾಖೆಯ ಅನುಮೋದನೆಯನ್ನು ಪಡೆಯಲು ಕಳುಹಿಸಲಾಗಿದ್ದು ಪ್ರಸ್ತಾವನೆ ಈಗ ನಾಲ್ಕು ವರ್ಷದಿಂದ ಅನುಮೋದನೆ ಸಿಕ್ಕಿರುವುದಿಲ್ಲ. ಕೆ.ಆರ್.ಪೇಟೆಯು ಮಂಡ್ಯ ಜಿಲ್ಲಾ ಕೇಂದ್ರಕ್ಕೆ ಸುಮಾರು 75 ಕಿ.ಮೀ ದೂರದಲ್ಲಿದೆ. ಈಗಾಗಲೇ ಮಂಡ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಹಾಗೂ ಶ್ರೀರಂಗಪಟ್ಟಣದ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿನ ಅತಿ ಹೆಚ್ಚು ಪ್ರಕರಣಗಳು ಕೆ.ಆರ್.ಪೇಟೆ ತಾಲ್ಲೂಕಿನ ಪ್ರಕರಣಗಳೇ ಜಾಸ್ತಿ ಇರುತ್ತವೆ.
ಸದರಿ ಪ್ರಕರಣಗಳಿಗೆ ವಕೀಲರು, ಕಕ್ಷಿದಾರರು ಹಾಗೂ ಸಾರ್ವಜನಿಕರು ಪ್ರತಿನಿತ್ಯ ಮಂಡ್ಯ ನ್ಯಾಯಾಲಯ ಮತ್ತು ಶ್ರೀರಂಗಪಟ್ಟಣ ನ್ಯಾಯಾಲಯಕ್ಕೆ ಪ್ರಯಾಣಿಸಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೆ.ಆರ್.ಪೇಟೆಯಲ್ಲಿ ಪ್ರಾರಂಭಿಸಲು ಈಗಾಗಲೇ ಸೂಕ್ತ ಕಟ್ಟಡ ಲಭ್ಯವಿದೆ. ಕಟ್ಟಡಕ್ಕೆ ಹಣ ಹೆಚ್ಚುವರಿ ಅನುದಾನದ ಅವಶ್ಯಕತೆ ಇರುವುದಿಲ್ಲ. ಫನ ನ್ಯಾಯಾಲಯವನ್ನು ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಪ್ರಾರಂಭಿಸಿದರೆ ವಕೀಲರು ಹಾಗೂ ಸಾರ್ವಜನಿಕರಿಗೆ ತುಂಬಾ ಅನುಕೂಲಕರವಾಗಲಿದೆ. ಈಗಾಗಲೇ ನಾಲ್ಕು ಆರ್ಥಿಕ ವರ್ಷಗಳ ನಂತರ ಮತ್ತೊಮ್ಮೆ ಸರ್ಕಾರಕ್ಕೆ ಹುದ್ದೆಗಳನ್ನು ಸೃಷ್ಟಿಸಲು ಮಾನ್ಯ ರಿಜಿಸ್ಟಾರ್ ಜನರಲ್, ಗೌರವಾನ್ವಿತ ಮಾನ್ಯ ಉಚ್ಚ ನ್ಯಾಯಾಲಯ ಬೆಂಗಳೂರು ಇವರು ಪ್ರಸ್ತಾವನೆ ಸಲ್ಲಿಸಿದ್ದು, ಸದರಿ ಪ್ರಸ್ತಾವನೆಯನ್ನು ಕಾನೂನು ಇಲಾಖೆಯು ಪರಿಶೀಲಿಸಿ ಹಾಲಿ ಆರ್ಥಿಕ ಇಲಾಖೆಯ ಅನುಮತಿಗೆ ಸಲ್ಲಿಸಲಾಗಿದೆ. ಹಾಗಾಗಿ ಕೂಡಲೇ ಸರ್ಕಾರವು ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿ ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವನ್ನು ಪ್ರಾರಂಭಿಸಲು ಹುದ್ದೆಗಳ ಸೃಷ್ಟಿಸಲು ಈ ಆರ್ಥಿಕ ವರ್ಷದಲ್ಲಿಯೇ ಅನುಮತಿಯನ್ನು ನೀಡಬೇಕೆಂದು ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.
ಪ್ರತಿಭಟನೆಯ ನಂತರ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಮ್.ಆರ್.ನಾಗೇಗೌಡ, ಪ್ರಧಾನ ಕಾರ್ಯದರ್ಶಿ ಎಸ್.ಜೆ.ಮಂಜೇಗೌಡ, ಉಪಾಧ್ಯಕ್ಷ ಪುರುಷೋತ್ತಮ್, ಖಜಾಂಚಿ ಪ್ರಸನ್ನಕುಮಾರ್.ವಿ, ಜಂಟಿ ಕಾರ್ಯದರ್ಶಿ ದೊಡ್ಡಯ್ಯ, ನಿರ್ದೇಶಕರಾದ ಡಿ.ಎನ್.ಗಿರಿಜ, ಹೆಚ್.ಎಸ್.ಶಿವಕುಮಾರ್, ಎಂ.ಎ.ಅವಿನಾಶ್, ಎಸ್.ಪ್ರತಾಪ್, ಬಿ.ಜೆ.ಪ್ರವೀಣ್, ಹಿರಿಯ ವಕೀಲರಾದ ಎಂ.ಆರ್.ಪ್ರಸನ್ನಕುಮಾರ್, ಕೆ.ಎನ್.ನಾಗೇಗೌಡ, ರಾಮಸ್ವಾಮಿ, ಕೆ.ಆರ್.ಮಹೇಶ್, ಎಂ.ಎಲ್.ಸುರೇಶ್, ಡಿ.ಆರ್.ಮೋಹನ್, ಎಸ್.ಸತೀಶ್, ಜಿ.ಕೆ.ಸತೀಶ್, ಆರ್.ಕೆ.ರಾಜೇಗೌಡ, ಸಿ.ಎನ್.ಮೋಹನ್ ಚಾಮಿಕೊಪ್ಪಲು, ಸಾಕ್ಷಿಬೀಡು ಎಸ್.ಆರ್.ನವೀನ್ಕುಮಾರ್, ಮರಡಳ್ಳಿ ಎಂ.ವಿ.ಪ್ರಭಾಕರ್, ರಾಯಸಮುಸ್ರ ಆರ್.ಎಂ.ದೇವಾನಂದ್, ಬಳ್ಳೇಕೆರೆ ಬಿ.ಕೆ.ಯೋಗೇಶ್, ಎಂ.ಎನ್.ಅನ್ವೇಶ್, ವೈ.ಜಿ.ಯೋಗೇಶ್, ಡಿ.ಹೆಚ್.ಕಾಂತರಾಜು, ಕೆ.ಎನ್.ಪಾಂಡು, ಕೆ.ಜೆ.ನಿರಂಜನ್, ಲಕ್ಷ್ಮೀಶ, ಕುಮಾರೇಂದ್ರ, ಶಿವಣ್ಣ, ಎಂ.ರಾಣಿ, ಸುಪ್ರಿತಾ, ಮನುರಾಧಾ ಸೇರಿದಂತೆ ನೂರಕ್ಕೂ ಹೆಚ್ಚು ವಕೀಲರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್.
