ಕೆ.ಆರ್.ಪೇಟೆ :ತಾಲ್ಲೂಕಿನ ಕಸಬಾ ಹೋಬಳಿಯ ಲಿಂಗಾಪುರ ಗ್ರಾಮದಲ್ಲಿ ಲಿಂಗೈಕ್ಯ ಡಾ.ಶಿವಕುಮಾರ ಮಹಾಸ್ವಾಮೀಜಿ ಪುತ್ತಳಿ ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡಿ ಮಾತನಾಡಿದರು.
ಸಿದ್ದಗಂಗಾ ಶ್ರೀಗಳ ಪುಣ್ಯ ಸ್ಮರಣೆ ಪುತ್ತಳಿ ನಿರ್ಮಿಸಿದರೆ ಸಾಲದು, ಅವರು ಹಾಕಿಕೊಟ್ಟ ಮಾರ್ಗ ಆದರ್ಶಗಳನ್ನು ಲಿಂಗಾಪುರ ಗ್ರಾಮದ ಯುವ ಸಮುದಾಯದ ಮೈಗೂಡಿಸಿಕೊಂಡು ನಿತ್ಯ ಸ್ಮರಿಸುವಂತಹದಾಗ ಮಾತ್ರ ಅವರ ಪುತ್ತಳಿ ನಿರ್ಮಿಸಿದಕ್ಕೂ ಸಾರ್ಥಕ.ಮಹಾ ಶ್ರೀಗಳು ಬಡವರು, ದೀನರು, ಶೋಷಿತರಿಗೆ ತ್ರಿವಿಧ ದಾಸೋಹ ನೀಡುವ ಮೂಲಕ ಲಕ್ಷಾಂತರ ಕುಟುಂಬಗಳಲ್ಲಿ ಆರದ ಹಣತೆಯಾಗಿ ಬೆಳಗುತ್ತಿರುವ ಮಹಾಜ್ಯೋತಿ. ನಡೆದಾಡಿದ ದೇವರು ಭಕ್ತಜನಕ್ಕೆ ಸಾರಿದ ನೀತಿಯ ಸಂದೇಶಗಳನ್ನು ಎಲ್ಲರೂ ಪಾಲಿಸುವ ಮೂಲಕ ಅತ್ಯುತ್ತಮ ಜೀವನ ಕಟ್ಟಿಕೊಳ್ಳುವಂತೆ ಸಲಹೆ ನೀಡಿದರು. ದಶಕಗಳಿಂದಲೂ ಎಲ್ಲ ಜಾತಿ ಹಾಗೂ ಸಮುದಾಯಗಳ ಭಕ್ತಜನರೊಂದಿಗೆ ತಾಲ್ಲೂಕಿನ ವಿವಿಧೆಡೆ ಶ್ರೀಗಳ ಭಕ್ತಿಯ ಸ್ಮರಣೆ ಜೊತೆಗೆ ಪುತ್ತಳಿ ನಿರ್ಮಾಣ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಸಂದರ್ಭದಲ್ಲಿ ಪಾಂಡುಪುರ ತಾಲೂಕು ಬೇಬಿ ದನಗಳ ಜಾತ್ರೆಗೆ ತೆರಳುತ್ತಿದ್ದ ಹಳ್ಳಿಕಾರ್ ರಾಸುಗಳನ್ನ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರಾದ ಚನ್ನಬಸಪ್ಪ, ನಿಂಗರಾಜಪ್ಪ, ಪುಟ್ಟಬಸವಪ್ಪ,ಯುವ ಮುಖಂಡ ಹರೀಶ್, ಯಶವಂತ್,ಡೈರಿ ಲೋಕೇಶ್, ಯಡಿಯೂರಪ್ಪ, ಪ್ರಸನ್ನ, ರಾಜು, ಕಿರಣ್,ಸಾಗರ್, ಪ್ರಭು,ಗುರು, ಆರ್ ಟಿ ಓ ಮಲ್ಲಿಕಾರ್ಜುನ್ ಆಪ್ತ ಸಹಾಯಕ ಗಂಜಿಗೆರೆ ಮಹೇಶ್, ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
