ಕೆ.ಆರ್.ಪೇಟೆ- ತಾಲೂಕಿನ ಕೃಷ್ಣಾಪುರ ಗ್ರಾಮದ ಹನುಮಂತ ಮತ್ತು ಗೌರಿ ಎಂಬುವರ ಪುತ್ರರಾದ ಭದ್ರ ಎಂಬ ಬಾಲಕ ವಾಲಿಬಾಲ್ ಪಂದ್ಯ ಆಡುವವೇಳೆ ಆಕಸ್ಮಿಕವಾಗಿ ಕೆಳಗೆ ಬಿದ್ದು ಎರಡು ಕೈ ಮುರಿದ ಹಿನ್ನಲೆ.
ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಅವರು ಕೆ.ಆರ್. ಪೇಟೆ ಪಟ್ಟಣದ ಜಯನಗರ ಬಡಾವಣೆಯಲ್ಲಿರುವ ತಮ್ಮ ಕಚೇರಿಯಲ್ಲಿ ಗಾಯಳು ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಶ್ರೀ ಮಲ್ಲಿಕಾರ್ಜುನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆರ್ಥಿಕವಾಗಿ ಸಹಾಯ ನೀಡಿ ಮಾತನಾಡಿದವರು.ಯುವಕರು ಕ್ರೀಡೆಯಲ್ಲಿ ಪಾಲ್ಗೊಳ್ಳುವ ಉತ್ಸಾಹದಲ್ಲಿ ತಮ್ಮ ಜೀವಕ್ಕೆ ಅಪಾಯ ತಂದುಕೊಳ್ಳಬೇಡಿ. ಕುಟುಂಬಕ್ಕೆ ಆಧಾರವಾಗಬೇಕಿದ್ದ ನೀವುಗಳೇ ನಿಮ್ಮ ಅಜಾಗ್ರಕತೆಯಿಂದ ಹಾಗುವ ಕೆಲ ಅನಾಹುತಗಳಿಂದ ನಿಮ್ಮ ಭವಿಷ್ಯವನ್ನೇ ಹಾಳಾಗುತ್ತದೆ ಹಾಗಾಗಿ ಪ್ರತಿಯೊಬ್ಬ ಕ್ರೀಡಾ ಆಸಕ್ತರು ಜಾಗೃತಿಯಿಂದ ಕ್ರೀಡೆಯಲ್ಲಿ ಭಾಗವಹಿಸಿ ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಮನೋಭಾವನೆ ಮೈಗೂಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ ನಿವೃತ್ತ ಚಾಲಕ ಪುಟ್ಟಸ್ವಾಮಿ,ಕೃಷ್ಣಪುರ ಗ್ರಾ. ಪಂ ಮಾಜಿ ಸದಸ್ಯ ಗಿರೀಶ್,ಮುಖಂಡ ಬಂಡಿಹೊಳೆ ನಾಗೇಶ್,ಆರ್.ಟಿ.ಓ ಮಲ್ಲಿಕಾರ್ಜುನ್ ಆಪ್ತ ಸಹಾಯಕ ಗಂಜಿಗೆರೆ ಮಹೇಶ್,ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ

[…] ಕೆ.ಆರ್.ಪೇಟೆ- ವಾಲಿಬಾಲ್ ಕ್ರೀಡೆ ಆಡುವಾಗ ಬಿ… […]