ಕೆ.ಆರ್.ಪೇಟೆ:ಕ್ರೀಡಾ ಪಂದ್ಯಾವಳಿಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಅತ್ಯಂತ ಶಿಸ್ತುಬದ್ಧವಾಗಿ ನಡೆಯಬೇಕು ಎಂದು ಯುವ ಪತ್ರಕರ್ತ ಸಾಯಿಕುಮಾರ್. ಕ್ರೀಡಾ ಆಯೋಜಕರಿಗೆ ಸಲಹೆ ನೀಡಿದರು.
ತಾಲ್ಲೂಕಿನ ನಾರ್ಗೋನಹಳ್ಳಿ ಗ್ರಾಮದ ಗ್ರಾಮದೇವತೆ ಶ್ರೀ ಕನ್ನಂಬಾಡಮ್ಮ ದೇವಿಯ ಹಬ್ಬದ ಪ್ರಯುಕ್ತ, ಶ್ರೀ ಕನ್ನಂಬಾಡಮ್ಮ ಕ್ರಿಕೆಟರ್ಸ್ ವತಿಯಿಂದ ಆಯೋಜಿಸಲಾಗಿರುವ ಎನ್.ಎಸ್.ಸಿ ಕಪ್ -19 ಕ್ರಿಕೆಟ್ ಪಂದ್ಯಾವಳಿಯ ಆಮಂತ್ರಣ ಪತ್ರವನ್ನು ಸ್ವೀಕರಿಸಿ ಮಾತನಾಡಿದರು
ಬಳಿಕ ಮಾತನಾಡಿದ ಅವರು ಗ್ರಾಮ ದೇವತೆ ಕನ್ನಂಬಾಡಮ್ಮ ನವರ ಹಬ್ಬದ ಸಂಭ್ರಮದಲ್ಲಿ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಪಂದ್ಯಾವಳಿಯು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಅತ್ಯಂತ ಶಿಸ್ತುಬದ್ಧವಾಗಿ ನಡೆಯಬೇಕು ಎಂದು ಆಯೋಜಕರಿಗೆ ಸಲಹೆ ನೀಡಿ ಕ್ರೀಡೆ ಎಂದರೆ ಸೋಲು-ಗೆಲುವು ಸಹಜ. ಸೋಲನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿ, ಗೆದ್ದವರನ್ನು ಅಭಿನಂದಿಸುವ ಗುಣ ಬೆಳೆಸಿಕೊಳ್ಳಬೇಕು. ಮೈದಾನದಲ್ಲಿ ಯಾವುದೇ ಕಾರಣಕ್ಕೂ ಗಲಾಟೆ ಮಾಡಿಕೊಳ್ಳಬಾರದು. ಕ್ರೀಡಾಕೂಟದ ಮೂಲಕ ನಮ್ಮ ಗ್ರಾಮದ ಕೀರ್ತಿ ಹೆಚ್ಚಾಗಬೇಕೇ ಹೊರತು, ಕೆಟ್ಟ ಹೆಸರು ಬರದಂತೆ ಪ್ರತಿಯೊಬ್ಬ ಆಟಗಾರರು ಮತ್ತು ಯುವಕರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು._
_ಪಂದ್ಯಾವಳಿಯ ವಿವರ: ದಿನಾಂಕ: 11-02-2026, ಬುಧವಾರ, ಆಂಜನೇಯ ದೇವಸ್ಥಾನದ ಕ್ರೀಡಾ ಮೈದಾನ, ನಾಗೋನಹಳ್ಳಿ, ಬಹುಮಾನಗಳು: ಪ್ರಥಮ ಬಹುಮಾನ 20,000/-, ದ್ವಿತೀಯ ಬಹುಮಾನ 10,000/- ಹಾಗೂ ತೃತೀಯ ಬಹುಮಾನ 5,000/- ರೂ.ಗಳನ್ನು ನಿಗದಿಪಡಿಸಲಾಗಿದೆ,_
_ಈ ಸಂದರ್ಭದಲ್ಲಿ ಶ್ರೀ ಕನ್ನಂಬಾಡಮ್ಮ ಮತ್ತು ಶ್ರೀ ಹನುಮ ಕ್ರಿಕೆಟರ್ಸ್ ತಂಡದ ಸದಸ್ಯರು, ನಾರ್ಗೋನಹಳ್ಳಿಯ ಯುವಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು,_
-ಶ್ರೀನಿವಾಸ್ ಆರ್.
