ಕೆ.ಆರ್ ಪೇಟೆ: ವೃಕ್ಷಮಾತೆ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಅವರ ನಿಧನದ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಅವರ ಸವಿನೆನಪಿಗಾಗಿ ಗಿಡ ನೆಡುವ ಮೂಲಕ ಆತ್ಮಕ್ಕೆ ಶಾಂತಿ ಕೋರಲಾಯಿತು.
ಹಿರಿಯ ವಕೀಲ ಬಿ.ಎಲ್. ದೇವರಾಜು ಮಾತನಾಡಿ 114 ವರ್ಷ ಸಾರ್ಥಕ ಜೀವನ ನಡೆಸಿದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ರವರು ಅವರ ಜೀವಿತಾವಧಿಯಲ್ಲಿ ಸಾವಿರಾರು ವೃಕ್ಷಗಳನ್ನು ತಮ್ಮ ಮಕ್ಕಳಂತೆ ಪೋಷಿಸಿ ಪರಿಸರ ಪ್ರೇಮಿಗಳಿಗೆ ದಾರಿದೀಪವಾಗಿದ್ದಾರೆ. ವೃಕ್ಷ ಮಾತೆ ನಮ್ಮನ್ನು ಅಗಲಿರಬಹುದು ಆದರೆ ಅವರ ಪರಿಸರ ಕಾಳಜಿ ನಮ್ಮ ಮುಂದೆ ಜೀವಂತವಾಗಿ ನೆಲೆಸಿದೆ. ಯುವ ಸಮೂಹ ಇಂತಹ ಶ್ರೇಷ್ಠ ಸಾಧನೆ ಮಾಡಿದ ಮಹನೀಯರ ಆದರ್ಶ ಗುಣಗಳನ್ನು ಅಳವಡಿಸುವ ಮೂಲಕ ವೃಕ್ಷಮಾತೆಯನ್ನು ಜೀವಂತವಾಗಿರಿಸುವ ಕೆಲಸವನ್ನು ಮಾಡಬೇಕಿದೆ ಎಂದು ದೇವರಾಜು ತಿಳಿಸಿದರು.
ವಕೀಲ ಸಂಘದ ಅಧ್ಯಕ್ಷ ಎಂ ಆರ್ ನಾಗೇಗೌಡ ಮಾತನಾಡಿ ಸಾಲುಮರದ ತಿಮ್ಮಕ್ಕ ರವರು ನಾಡಿನ ಜನತೆಗೆ ವೃಕ್ಷಮಾತೆಯಾಗಿದ್ದಾರೆ. ವೃಕ್ಷಮಾತೆಯ ನಿಧನದಿಂದ ನಾಡಿಗೆ ತುಂಬಲಾರದ ನಷ್ಟ ಉಂಟಾಗಿದೆ. ಆ ನಿಟ್ಟಿನಲ್ಲಿ ಪ್ರತಿ ಪ್ರತಿಯೊಬ್ಬರು ಗಿಡ ನೆಡುವ ಮೂಲಕ ಅವರಿಗೆ ಗೌರವನ್ನು ಸಲ್ಲಿಸುವ ನಿಟ್ಟಿನಲ್ಲಿ ನಮ್ಮ ನ್ಯಾಯಾಲಯದ ಆವರಣದಲ್ಲಿ ಗಿಡಗಳನ್ನು ನೆಡುವುದರ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಕೋರಿದ್ದೇವೆ ಎಂದು ನಾಗೇಗೌಡ ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಸಾಧುಗೋನಹಳ್ಳಿ ಮಂಜೇಗೌಡ, ನಿರ್ದೇಶಕರುಗಳಾದ ಜೆಎಂ ಜನಾರ್ಧನ್, ಬಿಜೆಪಿ ಪ್ರವೀಣ್, ಶಿವಕುಮಾರ್ ಹೆಚ್ಎಸ್, ಅವಿನಾಶ್, ವಕೀಲರುಗಳಾದ ಬೊಮ್ಮೇನಹಳ್ಳಿ ಹರ್ಷ, ಬಿ.ಎನ್. ಸತೀಶ್, ಸಿ. ನಿರಂಜನ್, ಸಿಎನ್ ಮೋಹನ್, ಎಚ್ ರವಿ, ಎಂಆರ್ ಪ್ರಸನ್ನ ಕುಮಾರ್, ಎನ್.ಆರ್. ರವಿಶಂಕರ್, ಆರ್ ಕೆ ರಾಜೇಗೌಡ, ಕೇಸರಿ ಶ್ರೀನಿವಾಸ್, ಶಂಕರೇಗೌಡ, ಎಸ್ ಆರ್ ನವೀನ, ಸರೋಜಮ್ಮ, ಆಶಾ, ಸುಪ್ರೀತಾ, ವಾಣಿ ಮತ್ತಿತರು ಹಾಜರಿದ್ದರು.
– ಶ್ರೀನಿವಾಸ್ ಆರ್.

[…] ಕೆ.ಆರ್.ಪೇಟೆ- ವೃಕ್ಷ ಮಾತೆ ಸಾಲುಮರದ ತಿಮ್ಮಕ… […]