ಕೆ.ಆರ್.ಪೇಟೆ: ತಾಲ್ಲೂಕಿನಲ್ಲಿರುವ ಆದಿಶಕ್ತಿ ಶ್ರೀ ಚಂದಗೋಳಮ್ಮ ದೇವಸ್ಥಾನಕ್ಕೆ ಹರಿದು ಬಂದ ಬಹುತೇಕ ಭಕ್ತರು ತಮ್ಮ ವಾಹನಗಳನ್ನ ರಸ್ತೆಯ ಬಧಿಯಲ್ಲಿ ನಿಲ್ಲಿಸಿದ ಪರಿಣಾಮ ರಸ್ತೆಯಲ್ಲಿ ಚಲಿಸುವ ವಾಹನಗಳಿಗೆ ಅಡೆ-ತಡೆಯಾಗಿ ಸುಮಾರು ಎರಡು ಗಂಟೆಗಳ ಕಾಲ ವಾಹನ ಸವಾರರು ಸಾರ್ವಜನಿಕರು ಪರದಾಡುವ ಪ್ರಸಂಗ ಜರುಗಿತು.
ಮೊದಲೇ ಆದಿಶಕ್ತಿ ಶ್ರೀ ಚಂದಗೋಳಮ್ಮ ದೇವಾಲಯ ತನ್ನದೇ ಆದ ಸಾಗರದಂತ ಭಕ್ತರ ಸಮೂಹ ಹೊಂದಿರುವ ದೇವಾಲಯವಾದರೂ. ದೇವಾಲಯದ ಮುಖ್ಯ ರಸ್ತೆ ಕಿರಿದಾಗಿದ್ದು ವಾಹನಗಳು ಸರತಿ ಸಾಲಿನಲ್ಲಿ ನಿಂತು ಗಂಟೆಗಟ್ಟಲೆ ಕಾಯುವಂತಾಗಿದೆ.

ಪ್ರತಿ ಮಂಗಳವಾರ, ಬುಧವಾರ ಗುರುವಾರ,ಶುಕ್ರವಾರ,ಭಾನುವಾರ, ಭಕ್ತ ಸಾಗರವೇ ಹರಿದು ಬಂದ ಕಾರಣ ಟ್ರಾಫಿಕ್ ಜಾಮ್ ಆಗಿದೆ ಅದರಲ್ಲೂ ಇಂದು ಭಾನುವಾರ ಹಿನ್ನಲೆ ದೇವಲಯಕ್ಕೆ ವಾಹನ ಸಂಚಾರ ದಟ್ಟವಾಗಿರುವುದರಿಂದ ಎರಡು ಗಂಟೆಗಳ ಕಾಲ ವಾಹನ ಸವಾರರಿಗೆ ಟ್ರಾಫಿಕ್ ಜಾಮ್ ಆಗಿ ತುಂಬಾ ತೊಂದರೆ ಉಂಟಾಗಿದೆ.
ಸ್ಥಳೀಯ ಸಾರ್ವಜನಿಕರು ವಾಹನ ಸಂಚಾರ ಸುಗಮಗೊಳಿಸಲು ಯತ್ನಿಸುತ್ತಿದ್ದರೂ ವಾಹನ ಸಂಚಾರ ನಿಯಂತ್ರಣ ಗೊಳಿಸಲು ಸಾಧ್ಯವಾಗದೆ ಗಂಟೆ ಗಟ್ಟಲೆ ಕಾಯುವಂತಾಗಿದೆ ಎಂದು ವಾಹನ ಸವಾರರು ತಮ್ಮ ಅಳಲು ತೋಡಿಕೊಂಡರೆ.ಇಂತಹ ಪ್ರಸಿದ್ಧ ಸ್ಥಳಕ್ಕೆ ರಸ್ತೆ ಬದಿಯಲ್ಲಿ ನಿಲ್ಲಿಸುವ ವಾಹನೆಗಳಿಗೆ ಕಡಿವಾಣ ಹಾಕಿ ಸುಗಮ ಸಂಚಾರಕ್ಕಾಗಿ ರಸ್ತೆ ಅಗಲೀಕರಣ ಮಾಡಬೇಕು ಎಂದು ಸ್ಥಳೀಯ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
