ಕೆ.ಆರ್.ಪೇಟೆ. ತಾಲ್ಲೂಕಿನ ಬೂಕನಕೆರೆ ಹೋಬಳಿಯ ಗಂಜೀಗೆರೆ ಹಾಲು ಉತ್ಪಾದಕ ಸಹಕಾರ ಸಂಘಕ್ಕೆನೂತನ ಅಧ್ಯಕ್ಷರಾಗಿ ವೆಂಕಟರಮಣಗೌಡ,ಉಪಾಧ್ಯಕ್ಷರಾಗಿ ಚಲುವಯ್ಯ ಅವಿರೋಧ ಆಯ್ಕೆಗೊಂಡಿದ್ದಾರೆ.
ಸಂಘದ ಸಭಾಂಗಣದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ವೆಂಕಟರಾಮೇಗೌಡ,ಉಪಾಧ್ಯಕ್ಷ ಸ್ಥಾನಕ್ಕೆ ಚಲುವಯ್ಯ ಬಿಟ್ಟರೆ ಉಳಿದ ನಿರ್ದೇಶಕರಿಂದ ನಾಮಪತ್ರ ಸಲ್ಲಿಕೆಯಾಗದ ಕಾರಣ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಾಲೂಕು ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿಯ ಭರತ್ ಕುಮಾರ್ ಅವಿರೋಧ ಆಯ್ಕೆ ಘೋಷಣೆ ಮಾಡಿದರು. ಸಹ ಚುನಾವಣಾ ಅಧಿಕಾರಿಯಾಗಿ ಡೈರಿ ಕಾರ್ಯದರ್ಶಿ ಅರುಣ್ ಕುಮಾರ್ ಕಾರ್ಯನಿರ್ವಹಿಸಿದರು.
ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನ ಅಭಿನಂದಿಸಿ ಮಾತನಾಡಿದ ಆರ್.ಟಿ.ಓ ಮಲ್ಲಿಕಾರ್ಜುನ್ ಅಭಿಮಾನಿಗಳ ಸಂಘದ ಅಧ್ಯಕ್ಷ *ಗಂಜಿಗೆರೆ ಮಹೇಶ್* ಸಂಘದ ನಿರ್ದೇಶಕರ ಸ್ಥಾನಕ್ಕೆ ಪ್ರತಿಷ್ಠೆ ಚುನಾವಣೆಯಾಗಿ ನಡೆದರು. ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ *ಮನ್ಮುಲ್ ನಿರ್ದೇಶಕರಾದ ಡಾಲು ರವಿ, ಎಂ. ಬಿ ಹರೀಶ್, ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್,ಪುರಸಭಾ ಸದಸ್ಯ ಕೆ.ಬಿ ಮಹೇಶ್, ಬೂಕನಕೆರೆ ವಿಜಯ್ ರಾಮೇಗೌಡ* ಸೇರಿದಂತೆ ಹಲವು ಮುಖಂಡರ ಮಾರ್ಗದರ್ಶನದ ಮೇರೆಗೆ ನಿರ್ದೇಶಕರ ಸಹಕಾರದಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಅಧ್ಯಕ್ಷ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಿಕೊಳ್ಳಲಾಯಿತು.ನೂತನ ಆಡಳಿತ ಮಂಡಳಿಯವರು ಸಂಘದ ಮತ್ತು ರೈತರ ಅಭಿವೃದ್ಧಿಗೆ ಹೆಚ್ಚಿನ ಒತ್ತುಕೊಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ,ಎಲ್ಲಾ ಸದಸ್ಯರಿಗೆ ಯಶಸ್ವಿನಿ ಯೋಜನೆಯನ್ನು ಮಾಡಿಸಿ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚಿನ ಅರಿವು ಮೂಡಿಸಬೇಕು.ಪ್ರತಿ ರೈತರು ಗುಣಮಟ್ಟದ ಹಾಲು ಪೂರೈಸಿ ಸಂಘದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ನೂತನ ಅಧ್ಯಕ್ಷರಿಗೆ ಉಪಾಧ್ಯಕ್ಷರಿಗೆ ಸಲಹೆ ನೀಡಿದರು.
ಸಂಘದ ನೂತನ ಅಧ್ಯಕ್ಷ *ವೆಂಕಟರಾಮೇಗೌಡ* ಮಾತನಾಡಿ ಸಂಘದ ಎಲ್ಲ ನಿರ್ದೇಶಕರ ವಿಶ್ವಾಸ ಪಡೆದು ಗ್ರಾಮಸ್ಥರು ಉತ್ತಮ ಸಲಹೆ ಪಡೆದು ಹಾಲು ಉತ್ಪಾದಕರಿಗೆ ಅನುಕೂಲ ಕಲ್ಪಿಸಲಾಗುವುದು ಹಾಗೂ ಸಂಘದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ನೂತನ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆ ಪ್ರಕಟ ಆಗುತ್ತಿದ್ದಂತೆ ಕಾರ್ಯಕರ್ತರು ಬೆಂಬಲಿಗರು ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಕರಿಯಮ್ಮ, ಗಿರೀಶ್, ಚಂದ್ರಮ್ಮ, ನಾಗೇಗೌಡ, ಜಾಲೆಂದ್ರ, ರವಿಕುಮಾರ್, ರಾಕೇಶ್, ಚಂದ್ರಶೇಖರ್, ಲೋಕೇಶ್, ಮಾಜಿ ನಿರ್ದೇಶಕರುಗಳಾದ ಮಹೇಶ್, ಮಂಜುನಾಥ್, ವಿಜೇಂದ್ರ, ದೊಡ್ಡಸ್ವಾಮಿ, ಬೋಜೇಗೌಡ, ಸರ್ವೇ ದೇವರಾಜು, ಶಂಕರೇಗೌಡ ಗಂಜಿಗೆರೆ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ರೇವಣ್ಣೇಗೌಡ, ಮಾಜಿ ಅಧ್ಯಕ್ಷ ಜಯಣ್ಣೆಗೌಡ, ಪ್ರಸನ್ನಕುಮಾರ್,ಕೃಷ್ಣೆಗೌಡ, ಬಸಪ್ಪ, ರಾಜಪ್ಪ, ರೇವಣ್ಣ, ಸೇರಿದಂತೆ ಗ್ರಾಮದ ಮುಖಂಡರು ಇದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
