ಕೆ.ಆರ್.ಪೇಟೆ: ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಭಾರತವನ್ನು ಮುಕ್ತಗೊಳಿಸಲು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ, ಬಲಿದಾನ ನೀಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ಸದಾ ಸ್ಮರಿಸಬೇಕು ಎಂದು ಎಂ.ಡಿ.ಸಿ.ಸಿ ಉಪಾಧ್ಯಕ್ಷ ಹಾಗೂ ಹೊಸಹೊಳಲು ಸೊಸೈಟಿ ಅಧ್ಯಕ್ಷ ಹೆಚ್ ಕೆ ಅಶೋಕ್ ಹೇಳಿದರು.
ತಾಲೂಕು ಹೊಸಹೊಳಲು ಕೃಷಿ ಪತ್ತಿನ ಸಹಕಾರ ಸಂಘದಿಂದ ಆಯೋಜಿಸಲಾಗಿದ್ದ 79ನೆ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ದೇಶದ ಉಜ್ವಲ ಭವಿಷ್ಯಕ್ಕಾಗಿ ನಾವೆಲ್ಲರೂ ಟೊಂಕಕಟ್ಟಿ ನಿಲ್ಲಬೇಕು. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತವು, ಕಳೆದ 79ವರ್ಷಗಳಲ್ಲಿ ಶಿಕ್ಷಣ, ಆರೋಗ್ಯ ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ, ರಕ್ಷಣಾ ವಲಯ ಹೀಗೆ ಅನೇಕ ರಂಗಗಳಲ್ಲಿ ತನ್ನ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಎಸ್.ಪ್ರಕಾಶ್, ತೇಜಾವತಿ,ಯೋಗೇಶ್,ಹೆಚ್ ಎನ್,ಜಿ.ಎಂ ಅಭಿಶೇಖರ್,ಕೃಷ್ಣೇಗೌಡ,ಶಶಿಧರ್, ಹೆಚ್ ಆರ್ ಶ್ರೀಧರ್, ಹೆಚ್ ಎನ್ ಪ್ರವೀಣ್, ಗೀತಾ,ಹೆಚ್.ಎಂ ಕೃಷ್ಣ, ಗ್ರಾಮದ ಹಿರಿಯ ಮುಖಂಡರಾದ ಚಿಕ್ಕೇಗೌಡ,ರಾಮೇಗೌಡ,ನಿರ್ದೇಶಕರಾದ ಹೆಚ್.ವಿ ಕೃಷ್ಣೇಗೌಡ, ಪುಟ್ಟರಾಜು,ಹೆಚ್ ಜೆ ಚಂದ್ರೇಗೌಡ, ಬಲರಾಮೇಗೌಡ,ಜಾನಕಮ್ಮ,ಸಚ್ಚಿನ್ ಬಾಬು,ನಾಗರಾಜು,ಬಲರಾಮ, ಸಂಘದ ಉಪಾಧ್ಯಕ್ಷ ಚಂದ್ರಶೇಖರ್,ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಮೋದ್ ಜಿ.ಎನ್, ಭರತ್ ಕುಮಾರ್, ಮೂರ್ತಿ, ಅನಿತಾ,ಶಕುಂತಲಾ, ಬಸವರಾಜು, ಸಚಿನ್, ಹೊಸಹೊಳಲು ಮಾರುತಿ ಯುವಕರ ಸಂಘದ ಯುವಕರು ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
