ಕೆ.ಆರ್.ಪೇಟೆ: ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಮಂದಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಬೇವನಹಳ್ಳಿ ಅಮಾನಿಕೆರೆಯನ್ನು ನರೇಗಾ ಯೋಜನೆಯಡಿಯಲ್ಲಿ 100ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಹೂಳೆತ್ತುವ ಸಂದರ್ಭದಲ್ಲಿ ಮಹಿಳಾ ಕೂಲಿ ಕಾರ್ಮಿಕರಿಗೆ ತೊಂದರೆ ನೀಡಿ ಶೌಚಾಲಯಕ್ಕೆ ತೆರಳುವ ಸಂದರ್ಭದಲ್ಲಿ ಡ್ರೋನ್ ಕ್ಯಾಮೆರಾ ಬಳಸಿ ಚಿತ್ರೀಕರಣ ಮಾಡಿರುವ ವಿಕೃತಿ ಮನಸ್ಸಿನ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿ ಕೆಲಸ ಮಾಡುವ ಸ್ಥಳದಲ್ಲೇ ಕೂಲಿ ನೂರಕ್ಕೂ ಹೆಚ್ಚು ಕಾರ್ಮಿಕರು ಆಕೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು.
ಮಹಿಳಾ ಕೂಲಿ ಕಾರ್ಮಿಕರಾದ ನೀಲಮ್ಮ ಮಾತನಾಡಿ ನಮ್ಮಂತಹ ಬಡ ಕುಟುಂಬಗಳಿಗೆ ಅನುಕೂಲವಾಗಲಿ ಎಂದು ಕೇಂದ್ರ ಸರ್ಕಾರ ನರೇಗಾ ಯೋಜನೆಯು ಗ್ರಾಮೀಣ ಪ್ರದೇಶದ ವಯಸ್ಕ ಸದಸ್ಯರಿಗೆ ಕೌಶಲ್ಯವಿಲ್ಲದ ಕೈಯಿಂದ ಕೆಲಸ ಮಾಡಲು ಇಚ್ಛಿಸುವವರಿಗೆ ಕೆಲಸವನ್ನು ಒದಗಿಸಿದೆ ಎಂದು ಕೆಲಸ ನಿರ್ವಹಿಸಲು ನಮ್ಮ ಶ್ರಾವಣಹಳ್ಳಿ,ಹೊನ್ನೇನಹಳ್ಳಿ ಗ್ರಾಮದಿಂದ 150ಕ್ಕೂ ಹೆಚ್ಚು ಜನ ಕಾರ್ಮಿಕರು ಬೇವನಹಳ್ಳಿ ಅಮಾನಿಕೆರೆ ಹೊಳೆತ್ತಲು ಬರುವ ಕಾರ್ಮಿಕರಿಗೆ ಕಿಡಿಗೇಡಿಗಳು ಬೆದರಿಕೆ ಹಾಕಿ ತೊಂದರೆ ನೀಡುವುದರ ಜೊತೆಗೆ ಮಹಿಳಾ ಕೂಲಿ ಕಾರ್ಮಿಕರು ಶೌಚಾಲಯಕ್ಕೆ ಹೋಗುವ ಸಂದರ್ಭದಲ್ಲಿ ಡ್ರೋನ್ ಕ್ಯಾಮೆರಾ ಮೂಲಕ ಸೆರೆಹಿಡಿದು ವಿಕೃತಿ ಮೆರೆಯುತ್ತಿದ್ದಾರೆ.ಇಂತಹ ನೀಚ ವ್ಯಕ್ತಿಗಳಿಗೆ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಕಡಿವಾಣ ಹಾಕಬೇಕು ಇಲ್ಲದಿದ್ದರೆ ದುಡಿದು ಜೀವಿಸುವ ನಮ್ಮಂತಹ ಬಡ ಅಮಾಯಕ ಮಹಿಳಾ ಕೂಲಿ ಕಾರ್ಮಿಕರಿಗೆ ಧಕ್ಕೆ ಉಂಟಾಗುತ್ತಿದೆ ಎಂದು ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಕರ್ನಾಟಕ ಪ್ರಾಂತ್ಯ ಕೂಲಿ ಕಾರ್ಮಿಕರ ಸಂಘದ ತಾಲ್ಲೂಕು ಕಾರ್ಯದರ್ಶಿ ಗೋಪಾಲ್ ನರೇಗಾ ಗ್ರಾಮೀಣ ಪ್ರದೇಶಗಳಲ್ಲಿ ಬಡತನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ,ಈ ಯೋಜನೆಯು ಕೂಲಿ ಕೆಲಸಗಾರರಿಗೆ ಆದಾಯದ ಮೂಲವನ್ನು ಒದಗಿಸುತ್ತದೆ,ಆದರೆ ಕೂಲಿ ಕಾರ್ಮಿಕರು ಕಾರ್ಯನಿರ್ವಹಿಸಿದರೆ ನಮಗೆ ಕೆಲಸ ಇಲ್ಲದಂತಾಗುತ್ತದೆ ಎಂದು ಯಂತ್ರೋಪಕರಣಗಳಲ್ಲಿ ಕೆಲಸ ಮಾಡುವ ಬಲಾಡ್ಯರ ಕುಮ್ಮಕ್ಕಿನಿಂದ ನಮ್ಮ ಕೂಲಿ ಕಾರ್ಮಿಕರಿಗೆ ಇಲ್ಲ ಸಲ್ಲದ ತೊಂದರೆ ನೀಡುತ್ತಿದ್ದಾರೆ ಅದಲ್ಲದೆ ಮಹಿಳಾ ಕೂಲಿ ಕಾರ್ಮಿಕರ ಶೌಚಾಲಯಕ್ಕೆ ಹೋಗುವ ಸಂದರ್ಭದಲ್ಲಿ ಡ್ರೋನ್ ಮೂಲಕ ವಿಡಿಯೋ ಚಿತ್ರೀಕರಿಸಿ ವಿಕೃತಿ ಮೆರೆದಿರುವ ಕಿಡಿಗೇಡಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲೇಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾ ಕಛೇರಿಯ ಮುಂದೆ ಉಗ್ರ ಹೋರಾಟ ನಡೆಸಲು ಸಿದ್ಧರಿದ್ದೇವೆ ಎಂದು ಕಿಡಿಕಾರಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಶ್ರಾವಣಹಳ್ಳಿ ಕೂಲಿ ಕಾರ್ಮಿಕರಾದ ಕಾಂತಾಮಣಿ, ಕಾವ್ಯ,ರಾಧಾ ,ಪವಿತ್ರ, ಪಾರ್ವತಮ್ಮ, ಸಾಕಮ್ಮ, ಹೊನ್ನೇನಹಳ್ಳಿ ನೀಲಮ್ಮ, ಗಿಡ್ಡಮ್ಮ,ಲಕ್ಷ್ಮಮ್ಮ, ಯಶೋಧಮ್ಮ,ಪುಟ್ಟಮ್ಮ, ಸೇರಿದಂತೆ ನೂರಾರು ಕೂಲಿ ಕಾರ್ಮಿಕರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
ವಿಡಿಯೋ- ಚನ್ನರಾಯಪಟ್ಟಣ- ರಾಹುಲ್ ಗಾಂಧಿ ಹುಟ್ಟುಹಬ್ಬದ ಅಂಗವಾಗಿ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
