ಕೆ.ಆರ್.ಪೇಟೆ: ಗ್ರಾಮಗಳಲ್ಲಿ ದೇವಾಲಯಗಳ ನಿರ್ಮಾಣದಿಂದ ಸಮಾನತೆ, ಧಾರ್ಮಿಕ ಜಾಗೃತಿಯೊಂದಿಗೆ ಸಾಮರಸ್ಯದ ಜೀವನ ನಡೆಸಲು ಸಾಧ್ಯ ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಶೀಳನೆರೆ ಹೋಬಳಿಯ ಮರುವನಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ನೂತನ ವಿಗ್ರಹ ಪ್ರತಿಷ್ಠಾಪನಾ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆರ್ಥಿಕ ಧನ ಸಹಾಯ ನೀಡಿ ಮಾತನಾಡಿದರು ದೇವಸ್ಥಾನಗಳು ಮನುಷ್ಯರಿಗೆ ಶಾಂತಿ ನೆಮ್ಮದಿ ನೀಡುವ ಧಾರ್ಮಿಕ ಕೇಂದ್ರಗಳಾಗಿವೆ. ಮೌಲ್ಯಯುತ ಜೀವನ ನಡೆಸಲು ಅಧ್ಯಾತ್ಮ ಸಹಕಾರಿಯಾಗಿದೆ. ಯಜ್ಞ ಯಾಗಾದಿಗಳು ಪರಿಸರಕ್ಕೂ ಪೂರಕವಾಗಿವೆ. ಮನುಷ್ಯ ತಮ್ಮಲ್ಲಿರುವ ದ್ವೇಷ, ಅಸೂಯೆಗಳನ್ನು ಬದಿಗೊತ್ತಿ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸಿಕೊಳ್ಳಬೇಕು.

ದೇವಾಲಯಗಳಿಂದ ಸಾಮಾಜಿಕ, ಧಾರ್ಮಿಕ ಜಾಗೃತಿ ಮೂಡಬೇಕು. ಸಾಮೂಹಿಕ ಆಚರಣೆಗಳಿಂದ ಸಮಾಜದಲ್ಲಿ ಒಗ್ಗಟ್ಟು ಮೂಡುವುದರೊಂದಿಗೆ ಸಾಮರಸ್ಯದ ಜೀವನಕ್ಕೂ ವೇದಿಕೆಯಾಗಲಿದೆ ಎಂದ ಅವರು ಯಾವುದೇ ಗ್ರಾಮಕ್ಕೆ ಕಾಲಿಟ್ಟರೂ ಗ್ರಾಮಸ್ಥರ ಶಕ್ತಿಗನುಸಾರ ಒಂದು ದೇವಾಲಯದ ಜೀರ್ಣೋದ್ದಾರ ದೃಶ್ಯಗಳನ್ನು ಕಾಣಬಹುದು.ಇದು ಜನ ದೇವರ ಬಗ್ಗೆ ಇಟ್ಟಿರುವ ನಂಬಿಕೆ ಹಾಗೂ ಭಕ್ತಿ ತೋರಿಸುತ್ತದೆ ಎಂದರು. ಗ್ರಾಮಗಳಲ್ಲಿನ ದೇಗುಲಗಳು ಸಮಾಜದಲ್ಲಿ ಶಾಂತಿ, ನೆಮ್ಮದಿ ಸೌಹಾರ್ದದ ಪ್ರತೀಕವಾಗಿವೆ ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಶರತ್,ಡೈರಿ ಅಧ್ಯಕ್ಷ ನಾಗೇಗೌಡ,ಹಿರಿಯ ಮುಖಂಡ ಶಿವಲಿಂಗಗೌಡ,ಹನುಮೇಗೌಡ,ವಿಜಿ ಕುಮಾರ್, ಶ್ರೀನಿವಾಸ್,ದೇವರಾಜೇಗೌಡ, ಅಣ್ಣಪ್ಪಣ್ಣ, ರಾಮೇಗೌಡ, ನಂಜಚಾರ್ ಸಿದ್ದು,ಧರ್ಮ ದಿಲೀಪ್,ಗುಂಡೆಗೌಡ,ಸೇರಿದಂತೆ ಗ್ರಾಮಸ್ಥರು ಇದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ

[…] […]