“ರನ್ನ”
~~~~~~~~~~
1. ರನ್ನನ ಜನ್ಮಸ್ಥಳ ಯಾವುದು?
1) ಬೆಳುಗಲಿ(ಮುಧೋಳ) 2) ಹಡಗಲಿ. 3) ಹಿಪ್ಪರಗಿ
2. ಕುರುಕ್ಷೇತ್ರ ಯುದ್ಧವನ್ನು ಕುರಿತು ರನ್ನನು ರಚಿಸಿದ ಕಾವ್ಯ ಯಾವುದು?
1) ಅಜಿತ ತೀರ್ಥಂಕರ. 2) ಗಧಾಯುದ್ಧ. 3) ಚಕ್ರೇಶ್ವರ ಚರಿತೆ
3. ರನ್ನನ ತಂದೆಯ ಹೆಸರೇನು?
1) ಮಲ್ಹಾರ ಮಹಾದೇವ. 2) ಅಜಿತನಾಥ. 3) ಜಿನವಲ್ಲಭ
4. ರನ್ನನ ತಾಯಿಯ ಹೆಸರೇನು?
1) ಅಬ್ಬಲಬ್ಬೆ. 2) ಸಂಗವ್ವ. 3) ಲಕ್ಷ್ಮಮ್ಮ
5. ರನ್ನನ ಪೂರ್ವಜರ ಕುಲ ಕಸುಬು ಯಾವುದು?
1) ಕಂಬಾರಿಕೆ. 2) ಬಳೆಗಾರಿಕೆ. 3) ನೇಕಾರಿಕೆ
6. ರನ್ನನಿಗೆ ಸಹಾಯ ಮಾಡಿದ ಗಂಗರ ಮಂತ್ರಿ ಯಾರು?
1) ಚಾವುಂಡರಾಯ. 2) ತೋದರ ಮಲ್ಲ. 3) ಗಂಗರಾಜೇಂದ್ರ
7. ರನ್ನನ ಗುರುಗಳು ಯಾರು?
1) ಅಜಿತ ಸೇನಾಚಾರ್ಯ. 2) ಸುದತ್ತಾಚಾರ್ಯ. 3) ರಾಮಾನುಜಾಚಾರ್ಯ
8. ಸಗರ ಚಕ್ರವರ್ತಿಯ ಚರಿತ್ರೆಯನ್ನೊಳಗೊಂಡ ರನ್ನನ ಕೃತಿ ಯಾವುದು?
1) ಸಾಹಸ ಭೀಮ ವಿಜಯ. 2) ಅಜಿತ ಪುರಾಣ. 3) ಪರಶುರಾಮ ಚರಿತೆ
9. ಅಜಿತ ಪುರಾಣ ಕೃತಿಯ ಪೀಠಿಕಾ ಭಾಗದಲ್ಲಿ ರನ್ನನು ಬಣ್ಣಿಸಿರುವ ವ್ಯಕ್ತಿ ಯಾರು?
1) ಸಗರ ಚಕ್ರವರ್ತಿ. 2) ಅಜಿತಸೇನಾಚಾರ್ಯ. 3) ಅತ್ತಿಮಬ್ಬೆ
10. ಗದಾಯುದ್ಧದಲ್ಲಿ ರನ್ನನು ತನ್ನ ಆಶ್ರಯದಾತನನ್ನು ಹೋಲಿಸಿರುವ ಪಾತ್ರ ಯಾವುದು?
1) ಭೀಮ. 2) ದುರ್ಯೋಧನ. 3) ಅರ್ಜುನ
11. ರನ್ನನ ಸಹಕಾರದಿಂದ ಚಾವುಂಡರಾಯನು ರಚಿಸಿದ ಕೃತಿ ಯಾವುದು?
1) ರನ್ನನ ರಗಳೆ. 2) ಕವಿರತ್ನ ರನ್ನ. 3) ತ್ರಿಷಷ್ಟಿ ಲಕ್ಷಣ ಮಹಾಪುರಾಣ
12. ರನ್ನನಿಗೆ ಆಶ್ರಯ ನೀಡಿದ ದೊರೆ ಯಾರು?
1) ಭೋಜರಾಜ. 2) ತೈಲಪ. 3) ಅರಿಕೇಸರಿ
13. ರನ್ನನ ಸಾಹಸ ಭೀಮವಿಜಯ ಕಾವ್ಯದ ಪ್ರಕಾರ ಯಾವುದು?
1) ಚಂಪೂಕಾವ್ಯ. 2) ಕಥನ ಕಾವ್ಯ. 3) ಗದ್ಯ ಕಾವ್ಯ
14. ಅತ್ತಿಮಬ್ಬೆಯ ಅಪ್ಪಣೆಯಂತೆ ರನ್ನನು ರಚಿಸಿದ ಕಾವ್ಯ ಯಾವುದು?
1) ಅಜಿತ ತೀರ್ಥಂಕರ ಪುರಾಣ ತಿಲಕಂ. 2) ಪರಶುರಾಮ ಚರಿತೆ. 3) ಚಕ್ರೇಶ್ವರ ಚರಿತೆ
15. “ರನ್ನನಿರುವ ಕನ್ನಡಕ್ಕೆ, ಅನ್ಯರಿಂದ ಬಹುದೆ ಧಕ್ಕೆ?, ಬರಿಯ ಕವಿಯೆ ಸಿಡಿಲ ಚಕ್ಕೆ” ಎಂದು ಹೇಳಿದ ಸಾಹಿತಿ ಯಾರು?
1) ಎಂ.ಗೋವಿಂದ ಪೈ. 2) ದ.ರಾ.ಬೇಂದ್ರೆ. 3) ಕುವೆಂಪು
~~~~~~~~~~
★ಉತ್ತರಗಳು:-
1.ಬೆಳುಗಲಿ(ಮುಧೋಳ) 2.ಗದಾಯುದ್ಧ 3.ಜಿನವಲ್ಲಭ 4.ಅಬ್ಬಲಬ್ಬೆ 5.ಬಳೆಗಾರಿಕೆ 6.ಚಾವುಂಡರಾಯ 7.ಅಜಿತಸೇನಾಚಾರ್ಯ 8.ಅಜಿತಪುರಾಣ 9.ಅತ್ತಿಮಬ್ಬೆ 10.ಭೀಮ 11.ತ್ರಿಷಷ್ಟಿ ಲಕ್ಷಣ ಮಹಾಪುರಾಣ 12.ತೈಲಪ 13.ಚಂಪೂಕಾವ್ಯ 14.ಅಜಿತ ತೀರ್ಥಂಕರ ಪುರಾಣ ತಿಲಕಂ 15.ಕುವೆಂಪು
***
ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
