*********************
* ಯು.ಆರ್. ಅನಂತಮೂರ್ತಿ*
*********************
1. ಯು.ಆರ್. ಅನಂತಮೂರ್ತಿ ಅವರ ಜನ್ಮ ದಿನಾಂಕ ಯಾವುದು?
1) 21 ಡಿಸೆಂಬರ್ 1932 2) 12 ಡಿಸೆಂಬರ್ 1932 3) 29 ಡಿಸೆಂಬರ್ 1932
2. ಯು.ಆರ್. ಅನಂತಮೂರ್ತಿ ಅವರ ಜನ್ಮಸ್ಥಳ ಯಾವುದು?
1) ತೀರ್ಥಹಳ್ಳಿ. 2) ಶಿವಮೊಗ್ಗ. 3) ಮೇಳಿಗೆ ಹಳ್ಳಿ
3. ಯು.ಆರ್. ಅನಂತಮೂರ್ತಿ ಅವರು ಆರಂಭಿಕ ವಿದ್ಯಾಭ್ಯಾಸ ಮಾಡಿದ ಶಾಲೆ ಯಾವುದು?
1) ದೂರ್ವಾಸಪುರ ಸಂಸ್ಕೃತ ಶಾಲೆ. 2) ತೀರ್ಥಹಳ್ಳಿ ಪ್ರಾಥಮಿಕ ಶಾಲೆ
3) ಶಿವಮೊಗ್ಗ ಕುವೆಂಪು ಶಾಲೆ
4. ಯು.ಆರ್. ಅನಂತಮೂರ್ತಿ ಅವರ ತಂದೆಯ ಹೆಸರೇನು?
1) ವೇಣುಗೋಪಾಲಾಚಾರ್ಯ. 2) ರಾಜಗೋಪಾಲಾಚಾರ್ಯ. 3)ತಿರುಮಲಾಚಾರ್ಯ
5. ಯು.ಆರ್. ಅನಂತಮೂರ್ತಿ ಅವರ ತಾಯಿಯ ಹೆಸರೇನು?
1) ಸುಂದರಮ್ಮ. 2) ಶಿವಮ್ಮ. 3) ಸತ್ಯಮ್ಮ
6. ಯು.ಆರ್. ಅನಂತಮೂರ್ತಿ ಅವರು ಆರಂಭಿಸಿದ ಪತ್ರಿಕೆ ಯಾವುದು?
1) ಋಜುವಾತು. 2) ಸಾಕ್ಷಿ. 3) ಆಧಾರ
7. ಯು.ಆರ್. ಅನಂತಮೂರ್ತಿ ಅವರು ಪಿ.ಹೆಚ್.ಡಿ ಪದವಿಯನ್ನು ಗಳಿಸಿದ ವಿಶ್ವವಿದ್ಯಾಲಯ ಯಾವುದು?
1) ಆಕ್ಸ್ ಫರ್ಡ್ ವಿ.ವಿ. 2) ಬರ್ಮಿಂಗ್ ಹ್ಯಾಮ್ ವಿ.ವಿ. 3) ನಳಂದಾ ವಿ.ವಿ
8. ಚಲನಚಿತ್ರವಾಗಿ ತೆರೆಕಂಡ ಯು.ಆರ್. ಅನಂತಮೂರ್ತಿ ಅವರ ಕೃತಿ ಯಾವುದು?
1) ಕಾಲಮಾನ. 2) ಸನ್ನಿವೇಶ. 3) ಸಂಸ್ಕಾರ
9. ಯು.ಆರ್. ಅನಂತಮೂರ್ತಿ ಅವರ ನಾಟಕ ಕೃತಿ ಯಾವುದು?
1) ಅವಸ್ಥೆ. 2) ಮಿಥುನ. 3) ಆವಾಹನೆ
10. ಹಿಂದಿ ಸಿನಿಮಾವಾಗಿ ತೆರೆಕಂಡ ಯು.ಆರ್. ಅನಂತಮೂರ್ತಿ ಅವರ ಕೃತಿ ಯಾವುದು?
1) ಬರ. 2) ಘಟಶ್ರಾದ್ಧ. 3) ದೀಕ್ಷಾ
11. ಯು.ಆರ್. ಅನಂತಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿದ ಸ್ಥಳ ಯಾವುದು?
1) ಶಿವಮೊಗ್ಗ. 2) ತುಮಕೂರು. 3) ಹಾಸನ
12. ಯು.ಆರ್. ಅನಂತಮೂರ್ತಿ ಅವರು ದೈವಾಧೀನರಾದ ದಿನಾಂಕ ಯಾವುದು?
1) 22 ಆಗಸ್ಟ್ 2014 2) 22 ಆಗಸ್ಟ್ 2015 3) 22 ಆಗಸ್ಟ್ 2013
13. ಯು.ಆರ್. ಅನಂತಮೂರ್ತಿ ಅವರ ಅಂತಿಮ ಸಂಸ್ಕಾರ ಜರುಗಿದ ಸ್ಥಳ ಯಾವುದು?
1) ಕಂಠೀರವ ಸ್ಟುಡಿಯೋ ಆವರಣ. 2) ಕಲಾಗ್ರಾಮ, ಜ್ಞಾನಭಾರತಿ. 3) ಸಾಹಿತ್ಯ ಪರಿಷತ್ ಆವರಣ
14. ಯು.ಆರ್. ಅನಂತಮೂರ್ತಿ ಅವರ ಪತ್ನಿಯ ಹೆಸರೇನು?
1) ರೂಸ್ ಲಿನ. 2) ಮಾರ್ಗರೇಟ್ 3)ಎಸ್ತರ್
15. ಪ್ರಾಥಮಿಕ ಶಾಲಾ ಹಂತದಲ್ಲಿಯೇ ಗೆಳೆಯರ ಜೊತೆ ಸೇರಿ ಆರಂಭಿಸಿದ ಕೈಬರಹದ ಪತ್ರಿಕೆ ಯಾವುದು?
1) ಶಿಕ್ಷಣ ಸೌರಭ. 2) ತರಂಗಿಣಿ. 3) ಅಕ್ಷರ ಸಿರಿ
*************************************************************************************************************
★ಉತ್ತರಗಳು:-
1) 21 ಡಿಸೆಂಬರ್ 1932
2) ಮೇಳಿಗೆ ಹಳ್ಳಿ
3) ದೂರ್ವಾಸಪುರ ಸಂಸ್ಕೃತ ಶಾಲೆ
4)ರಾಜಗೋಪಾಲಾಚಾರ್ಯ
5) ಸತ್ಯಮ್ಮ
6)ಋಜುವಾತು
7) ಬರ್ಮಿಂಗ್ ಹ್ಯಾಮ್ ವಿ.ವಿ.
8) ಸಂಸ್ಕಾರ
9)ಆವಾಹನೆ
10) ದೀಕ್ಷಾ
11)ತುಮಕೂರು
12) 22 ಆಗಸ್ಟ್ 2014
13)ಕಲಾಗ್ರಾಮ, ಜ್ಞಾನ ಭಾರತಿ
14) ಎಸ್ತರ್
15)ತರಂಗಿಣಿ
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372

[…] […]