ಗೊರೂರು ರಾಮಸ್ವಾಮಿ ಅಯ್ಯಂಗಾರ್ “
~~~~~~~~~~~~~~~~~~~~~~~~~~
1. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಜನ್ಮದಿನಾಂಕ ಯಾವುದು?
1)2 ಜುಲೈ 1904 2)4 ಜುಲೈ 1904 3)6 ಜುಲೈ 1904
2. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ತಂದೆಯ ಹೆಸರೇನು?
1)ವೆಂಕಟೇಶ್ ಅಯ್ಯಂಗಾರ್. 2)ಸಂಪತ್ ಅಯ್ಯಂಗಾರ್. 3)ಶ್ರೀನಿವಾಸ ಅಯ್ಯಂಗಾರ್
3. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ತಾಯಿಯ ಹೆಸರೇನು?
1) ಸರಸ್ವತಮ್ಮ 2)ಲಕ್ಷ್ಮಮ್ಮ. 3)ದೇವೀರಮ್ಮ
4. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಹುಟ್ಟೂರು ಯಾವುದು?
1)ಗೊರೂರು. 2)ಕಟ್ಟಾಯ. 3)ಹರದನಹಳ್ಳಿ
5. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕಾವ್ಯನಾಮ ಯಾವುದು?
1)ಸೀತಾತನಯ. 2)ಲಕ್ಷ್ಮೀಸುತ. 3)ಹೇಮಾವತಿ ತನಯ
6. ಸ್ವಾತಂತ್ರ್ಯ ಮತ್ತು ಕರ್ನಾಟಕ ಏಕೀಕರಣ ಹೋರಾಟಕ್ಕಾಗಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಗೆಳೆಯರೊಂದಿಗೆ ಕಟ್ಟಿಕೊಂಡ ಸಂಘಟನೆ ಯಾವುದು?
1)ಚಿಂತಕರ ಚಾವಡಿ. 2)ಸಮಾನ ಮನಸ್ಕರ ಬಳಗ. 3)ಸನ್ಮಿತ್ರ ಸಂಘ
7. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ‘ಗರುಡಗಂಬದ ದಾಸಯ್ಯ’ ಕೃತಿಗೆ ಮುನ್ನುಡಿ ಬರೆದ ಖ್ಯಾತ ಸಾಹಿತಿ ಯಾರು?
1)ಶಿವರಾಮ ಕಾರಂತ. 2)ದ.ರಾ.ಬೇಂದ್ರೆ. 3)ಅ.ನ.ಕೃಷ್ಣರಾಯ
8. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕೃತಿ ಯಾವುದು?
1)ಮಲೆನಾಡಿನವರು. 2)ಪುನರ್ಜನ್ಮ. 3)ಅಮೇರಿಕಾದಲ್ಲಿ ಗೊರೂರು
9. ‘ಸಾಲು ದೀಪಗಳು’ ಕೃತಿಯಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಬಗೆಗಿನ ಲೇಖನವನ್ನು ಬರೆದ ಸಾಹಿತಿ ಯಾರು?
1)ಸಿ.ಪಿ.ಕೃಷ್ಣಕುಮಾರ್ 2)ಪ್ರಭುಶಂಕರ. 3)ಎಚ್.ಲಕ್ಕಪ್ಪಗೌಡ
10. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕಥೆಯನ್ನಾಧರಿಸಿ ತೆರೆಕಂಡ ಡಾ.ವಿಷ್ಣುವರ್ಧನ್ ಅಭಿನಯದ ಚಲನಚಿತ್ರ ಯಾವುದು?
1)ಮಕ್ಕಳ ಸೈನ್ಯ. 2)ಹೊಂಬಿಸಿಲು. 3)ಭೂತಯ್ಯನ ಮಗ ಅಯ್ಯು
11. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವು ಜರುಗಿದ ಸ್ಥಳ ಯಾವುದು?
1)ಕಾರವಾರ. 2)ಶಿರಸಿ. 3)ಕುಂದಾಪುರ
12. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಹುಟ್ಟೂರು ಯಾವ ನದಿಯ ತಟದಲ್ಲಿದೆ?
1)ಹೇಮಾವತಿ. 2)ಕಾವೇರಿ. 3)ಶರಾವತಿ
13. ಇವುಗಳಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕಾದಂಬರಿ ಆಧಾರಿತ ಚಲನಚಿತ್ರ ಯಾವುದು?
1)ನಮ್ಮೂರಿನ ರಸಿಕರು. 2)ಬೈಲಹಳ್ಳಿ ಸರ್ವೆ. 3)ಹೇಮಾವತಿ
14. “ಗೊರೂರರ ಕೃತಿಗಳು ಬರ ಬರುತ್ತ ಹಳ್ಳಿಗಳ ಮಹಾಭಾರತವೇ ಆಗಿವೆ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದ ಸಾಹಿತಿ ಯಾರು?
1)ಬಿ.ಎಂ.ಶ್ರೀಕಂಠಯ್ಯ. 2)ಕುವೆಂಪು. 3)ವಿ.ಕೃ.ಗೋಕಾಕ್
15. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ವಿಧಿವಶರಾದ ದಿನಾಂಕ ಯಾವುದು?
1)28 ಅಕ್ಟೋಬರ್ 1991 2)28 ಸೆಪ್ಟೆಂಬರ್ 1991 3)28 ಆಗಸ್ಟ್ 1991
~~~~~~~~~~~~~~~~~~~~~~~~~~
★ಉತ್ತರಗಳು:-
1)04 ಜುಲೈ 1904
2)ಶ್ರೀನಿವಾಸ್ ಅಯ್ಯಂಗಾರ್
3)ಲಕ್ಷ್ಮಮ್ಮ
4)ಗೊರೂರು
5)ಸೀತಾತನಯ
6)ಸನ್ಮಿತ್ರ ಸಂಘ
7)ದ.ರಾ.ಬೇಂದ್ರೆ
8)ಅಮೇರಿಕಾದಲ್ಲಿ ಗೊರೂರು
9)ಸಿ.ಪಿ.ಕೃಷ್ಣಕುಮಾರ್
10)ಭೂತಯ್ಯನ ಮಗ ಅಯ್ಯು
11)ಶಿರಸಿ
12)ಹೇಮಾವತಿ
13) ಹೇಮಾವತಿ
14)ವಿ.ಕೃ.ಗೋಕಾಕ್
15) 28 ಸೆಪ್ಟೆಂಬರ್ 1991
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
