ಆದಿಕವಿ “ಪಂಪ”
*************************************************************************************************************
1. ಆದಿಕವಿ ಪಂಪನಿಗೆ ಆಶ್ರಯನೀಡಿದ ದೊರೆ ಯಾರು?
1.ಮುಮ್ಮಡಿ ಅರಿಕೇಸರಿ.
2.ಇಮ್ಮಡಿ ಅರಿಕೇಸರಿ.
3. ನಾಲ್ವಡಿ ಅರಿಕೇಸರಿ
2. ಪಂಪನ ಜನ್ಮಸ್ಥಳ ಅಣ್ಣಿಗೇರಿ ಇರುವ ಜಿಲ್ಲೆ ಯಾವುದು?
1.ಹಾವೇರಿ.
2.ಗದಗ.
3.ಧಾರವಾಡ
3. ಪಂಪನ ತಂದೆಯ ಹೆಸರೇನು?
1.ಭೀಮಪ್ಪಯ್ಯ.
2.ರಾಮಪ್ಪಯ್ಯ.
3.ಇಂಗಳಪ್ಪಯ್ಯ
4. ಪಂಪನ ತಾಯಿಯ ಹೆಸರೇನು?
1.ಅವ್ವಣವ್ವೆ.
2.ಅಬ್ಬಣಬ್ಬೆ.
3.ದುರ್ಗವ್ವ
5. ಇವರಲ್ಲಿ ಪಂಪನ ಗುರು ಯಾರು?
1.ಮಹೇಂದ್ರ.
2.ರಾಜ ಬಹದ್ದೂರ್.
3.ದೇವೇಂದ್ರಮುನಿ
6. “ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ——- ದೇಶಮಂ” (ಬಿಟ್ಟ ಸ್ಥಳ ತುಂಬಿ)
1.ಬನವಾಸಿ.
2.ವಾರಣಾಸಿ.
3.ವೆಂಗಿಪಳು
7. ಇವರಲ್ಲಿ ಪಂಪನ ಸಹೋದರ ಯಾರು?
1.ಆದಿತ್ಯ.
2.ಜಿನವಲ್ಲಭ.
3.ಕಲಾವಲ್ಲಭ
8. ಜೈನ ತೀರ್ಥಂಕರ ವೃಷಭದೇವನ ಕಥೆಯನ್ನು ಒಳಗೊಂಡ ಪಂಪನ ಕಾವ್ಯ ಯಾವುದು?
1.ಆದಿಪುರಾಣ.
2.ವಿಕ್ರಮಾರ್ಜುನ ವಿಜಯ.
3.ಪಂಪ ಭಾರತ
9. ಪಂಪನ ಪೂರ್ವಜರು ಕೆಳಗಿನವುಗಳಲ್ಲಿ ಯಾವ ಭಾಗದವರು?
1.ಭಾಗಮಂಡಲ.
2.ಧರಣಿ ಮಂಡಲ.
3.ವೆಂಗಿಮಂಡಲ
10. ವೆಂಗಿಮಂಡಲವು ಯಾವ ನದಿಗಳ ವ್ಯಾಪ್ತಿಯಲ್ಲಿದೆ?
1.ಕಾವೇರಿ-ಹೇಮಾವತಿ.
2.ಕೃಷ್ಣ-ಗೋದಾವರಿ.
3.ತುಂಗಾ-ಭದ್ರಾ
11. ಪಂಪನೇ ಹೇಳಿಕೊಂಡಂತೆ ಆದಿಪುರಾಣ ಕಾವ್ಯವನ್ನು ರಚಿಸಲು ತೆಗೆದುಕೊಂಡ ಕಾಲಾವಧಿ ಎಷ್ಟು?
1.ಒಂಭತ್ತು ತಿಂಗಳು.
2.ಮೂರು ವರ್ಷಗಳು.
3.ಮೂರು ತಿಂಗಳು
12. ಇವುಗಳಲ್ಲಿ ಪಂಪನಿಗೆ ಇದ್ದ ಬಿರುದು ಯಾವುದು?
1.ಕವಿತಾಗುಣಾರ್ಣವ.
2.ಕವಿ ಶರಭ ಭೇರುಂಡ.
3.ಷಟ್ಪದಿಯ ಬ್ರಹ್ಮ
13. ರಾಜಾಶ್ರಯ ನೀಡಿದ ಅರಿಕೇಸರಿಯನ್ನು ಪಂಪನು ಮಹಾಭಾರತದ ಯಾವ ಪಾತ್ರಕ್ಕೆ ಹೋಲಿಸಿದ್ದಾನೆ?
1.ಭೀಮ.
2.ಅರ್ಜುನ.
3.ದುರ್ಯೋಧನ
14. “ಪಸರಿಪ ಕನ್ನಡಕ್ಕೋರ್ವನೇ ಸತ್ಕವಿ ಪಂಪನಾವಗಂ” ಎಂದು ಪಂಪನ ಕುರಿತು ಹೇಳಿದ ಕವಿ ಯಾರು?
1.ನಾಗವರ್ಮ.
2.ನಾಗಚಂದ್ರ.
3.ನಾಗರಾಜ
15. ಪಂಪನ ವಿಕ್ರಮಾರ್ಜುನ ವಿಜಯ ಕಾವ್ಯದಲ್ಲಿ ಇರುವ ಪದ್ಯಗಳ ಸಂಖ್ಯೆ ಎಷ್ಟು?
1) 1609
2) 679
3) 1409
*******************************************************************************************
★ಉತ್ತರಗಳು:-
1.ಇಮ್ಮಡಿ ಅರಿಕೇಸರಿ,
2.ಧಾರವಾಡ
3.ಭೀಮಪ್ಪಯ್ಯ
4.ಅಬ್ಬಣಬ್ಬೆ
5.ದೇವೇಂದ್ರ ಮುನಿ
6.ಬನವಾಸಿ
7.ಜಿನವಲ್ಲಭ
8.ಆದಿಪುರಾಣ
9.ವೆಂಗಿಮಂಡಲ
10.ಕೃಷ್ಣ-ಗೋದಾವರಿ
11. ಮೂರು ತಿಂಗಳು
12.ಕವಿತಾ ಗುಣಾರ್ಣವ
13.ಅರ್ಜುನ
14.ನಾಗರಾಜ
15) 1609
ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372

👍🏻