~~~~~~~~~~
“ಜಿ.ಪಿ.ರಾಜರತ್ನಂ”
~~~~~~~~~~
1. ಜಿ.ಪಿ.ರಾಜರತ್ನಂ ಅವರ ಹುಟ್ಟೂರು ಯಾವುದು?
1)ವಿರಾಜಪೇಟೆ. 2)ಪೊನ್ನಂಪೇಟೆ. 3)ಗುಂಡ್ಲುಪೇಟೆ
2. ಜಿ.ಪಿ.ರಾಜರತ್ನಂ ಅವರ ತಂದೆಯ ಹೆಸರೇನು?
1)ಜಿ.ಪಿ.ಗೋಪಾಲಕೃಷ್ಣ ಅಯ್ಯಂಗಾರ್. 2)ಜಿ.ಪಿ.ರಾಮಸ್ವಾಮಿ ಅಯ್ಯಂಗಾರ್. 3)ಜಿ.ಪಿ.ಶಾಮಭಟ್
3. ಜಿ.ಪಿ.ರಾಜರತ್ನಂ ಅವರ ಜನ್ಮದಿನಾಂಕ ಯಾವುದು?
1)3 ಡಿಸೆಂಬರ್ 1908 2)5 ಡಿಸೆಂಬರ್ 1908 3)7 ಡಿಸೆಂಬರ್ 1908
4. ಜಿ.ಪಿ.ರಾಜರತ್ನಂ ಅವರ ಮೊದಲ ಪತ್ನಿಯ ಹೆಸರೇನು?
1)ಲಲಿತಮ್ಮ. 2)ಸೀತಮ್ಮ. 3)ವನಿತಮ್ಮ
5. ಜಿ.ಪಿ.ರಾಜರತ್ನಂ ಅವರ ಕಾವ್ಯನಾಮ ಯಾವುದು?
1)ರತ್ನಂ. 2)ಭ್ರಮರ. 3)ಕಸ್ತೂರಿ
6. ಜಿ.ಪಿ.ರಾಜರತ್ನಂ ಅವರ ಅಧ್ಯಕ್ಷತೆಯಲ್ಲಿ “ಸುವರ್ಣ ಸಾಹಿತ್ಯ ಸಮ್ಮೇಳನ(1978)”ವು ಜರುಗಿದ ನಗರ ಯಾವುದು?
1)ಹೈದರಾಬಾದ್. 2)ಬೆಂಗಳೂರು. 3)ದೆಹಲಿ
7. ಜಿ.ಪಿ.ರಾಜರತ್ನಂ ಅವರ “ನಾಯಿಮರಿ ನಾಯಿಮರಿ ______ ಬೇಕೆ? ” ಸಾಲಿನಲ್ಲಿ ಬಿಟ್ಟ ಪದ ಯಾವುದು?
1)ತಿಂಡಿ. 2)ತೀರ್ಥ. 3)ಮೂಳೆ
8. ಜಿ.ಪಿ.ರಾಜರತ್ನಂ ಅವರ “ಯೆಂಡ ಯೆಂಡ್ತಿ ಕನ್ನಡ್ ________ ಅಂದ್ರೆ ರತ್ನಂಗ್ ಪ್ರಾಣ” ಸಾಲಿನಲ್ಲಿ ಬಿಟ್ಟ ಶಬ್ದ ಯಾವುದು?
1)ಗದ್ಯಗೊಳ್. 2)ಪದಗೊಳ್. 3)ಪದ್ಯಗೊಳ್
9. ಜಿ.ಪಿ.ರಾಜರತ್ನಂ ಅವರ “ಒಂದು ಎರಡು ____ ಹರಡು, ಮೂರು ನಾಕು _____ ಹಾಕು” ಸಾಲುಗಳಲ್ಲಿ ಬಿಟ್ಟ ಪದಗಳು ಯಾವುವು?
1)ಬಾಳೆಲೆ, ಅನ್ನ. 2ಹಣ್ಣೆಲೆ, ಸಾರು. 3)ಚಿಗುರೆಲೆ, ಅಡಿಕೆ
10. ಜಿ.ಪಿ.ರಾಜರತ್ನಂ ಅವರ “ಬಣ್ಣದ ತಗಡಿನ ತುತ್ತೂರಿ, _____ ಕೊಂಡನು ಕಸ್ತೂರಿ” ಸಾಲಿನಲ್ಲಿ ಬಿಟ್ಟ ಶಬ್ದ ಯಾವುದು?
1)ಊದಲು. 2)ಕಾಸಿಗೆ. 3)ಸುಮ್ಮನೆ
11. ವಿದ್ಯಾರ್ಥಿ ದಿಸೆಯಲ್ಲಿಯೇ ಶ್ರೀಯವರ ಸ್ವರ್ಣಪದಕ ಪಡೆದ ಜಿ.ಪಿ.ರಾಜರತ್ನಂ ಅವರ ಪದ್ಯ ಯಾವುದು?
1)ತಾರೆ. 2)ತುತ್ತೂರಿ. 3)ನಾಯಿಮರಿ
12. ಜಿ.ಪಿ.ರಾಜರತ್ನಂ ಅವರ ಮೊದಲ ಕವನ ಸಂಕಲನ ಯಾವುದು?
1)ಹೀಗೇಕಾಯಿತು. 2)ಸೋಲಿಗರ ಸಿದ್ಧ. 3)ನೆನಪು
13. ಜಿ.ಪಿ.ರಾಜರತ್ನಂ ಅವರಿಗೆ ಗೌರವ ಡಾಕ್ಟರೇಟ್ ಪುರಸ್ಕಾರ ನೀಡಿದ ವಿಶ್ವವಿದ್ಯಾಲಯ ಯಾವುದು?
1)ಧಾರವಾಡ ವಿ.ವಿ. 2)ಬೆಂಗಳೂರು ವಿ.ವಿ. 3)ಮೈಸೂರು.ವಿ.ವಿ.
14. ಜಿ.ಪಿ.ರಾಜರತ್ನಂ ಅವರಿಗೆ ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ದೊರಕಿದ ವರ್ಷ ಯಾವುದು?
1)1975 2)1970 3)1965
15. ಜಿ.ಪಿ.ರಾಜರತ್ನಂ ಅವರು ವಿಧಿವಶರಾದ ದಿನಾಂಕ
1)13 ಮಾರ್ಚ್ 1979 2)11 ಮಾರ್ಚ್ 1979 3)15 ಮಾರ್ಚ್ 1979
~~~~~~~~~~~~~~~~~~~~~~~~
★ಉತ್ತರಗಳು:-
1)ಗುಂಡ್ಲುಪೇಟೆ 2)ಜಿ.ಪಿ.ಗೋಪಾಲ ಕೃಷ್ಣ ಅಯ್ಯಂಗಾರ್ 3) 05 ಡಿಸೆಂಬರ್ 1908 4)ಲಲಿತಮ್ಮ 5)ಭ್ರಮರ 6)ದೆಹಲಿ 7)ತಿಂಡಿ 8)ಪದಗೊಳ್ 9) ಬಾಳೆಲೆ, ಅನ್ನ 10)ಕಾಸಿಗೆ 11)ತಾರೆ 12)ಹೀಗೇಕಾಯಿತು 13)ಮೈಸೂರು ವಿ.ವಿ 14)1970 15)13 ಮಾರ್ಚ್ 1979
*****
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
